ನಾಟಕ ಬೆಂಗ್ಳೂರು 2010 ಉತ್ಸವದಲ್ಲಿ ಅನೇಕ, ಆಭಿನಯಿಸುವ ಮಸ್ತಕಾಭಿಷೇಕ ರಿಹರ್ಸಲ್ಲು ರಚನೆ: ಎಚ್.ಎಸ್. ಶಿವಪ್ರಕಾಶ್ ಸಂಗೀತ, ನಿರ್ದೇಶನ: ಸುರೇಶ್ ಆನಗಳ್ಳಿ
ತಾಂತ್ರಿಕ ವರ್ಗ ಬೆಳಕು : ಆ ನ ರಮೇಶ್, ಮಹದೇವ ಸ್ವಾಮಿ ರಂಗವಿನ್ಯಾಸ : ಶಂಕರ ಜೀವಿ ಪರಿಕರ : ಸಂತೋಷ್ ಪಾಂಚಾಲ್
ಪಾತ್ರ ವರ್ಗ ಐ.ಎಂ. ಧುಂಡಸಿ ಗಣಪತಿ ಗೌಡ ಅಪ್ಪು ರಾಮದುರ್ಗ ವೆಂಕಟರಾಜು ವಿಜಯ ಜಟ್ಟಿ ರಮ್ಯ ಅಕ್ಷತಾ ಕ್ಷಮ ಮನೋಜ್ ಸುಮಂತ್ ಮಂಜು ಪೃಥ್ವಿ ಮೇಘವರ್ಷ ಹರ್ಷ ಸಂತೋಷ್ ಮಂಜು ಕಗ್ಗೆರೆ ಪ್ರಣವ್ ಚಿರಾಗ್
ನಾಟಕಕಾರರ ಟಿಪ್ಪಣಿ ನನ್ನ ಹಿಂದಿನ ನಾಟಕಗಳ ಹಾದಿಯನ್ನು ಬಿಟ್ಟು ಹೊಸ ತೆರನ ನಾಟಕ ರಚನೆಗೆ ಪ್ರಯತ್ನಿಸಿದ್ದೇನೆ. ನಟಕ ಕಥನವು ಇಲ್ಲಿ ಹಲವು ಸ್ತರಗಳ ಮೇಲೆ ನಡೆಯುತ್ತದೆ: ನೇರ ಕಥನ ಮತ್ತು ಒಳನಾಟಕ ಪರಸ್ಪರ ಮುಖಾಮುಖಿಯಾಗುವ ಹಾಗೆ, ಪುರಾಣ ಮತ್ತು ಇತಿಹಾಸ, ಶಬ್ದ ಮತ್ತು ದೃಶ್ಯ, ಗದ್ಯ ಮತ್ತು ಪದ್ಯ, ಸ್ವಪ್ನ ಮತ್ತು ಜಾಗರ, ಸುದ್ದಿ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಪರಸ್ಪರ ತಿಕ್ಕಾಟದಲ್ಲಿ ವಸ್ತುವನ್ನು ಕಟ್ಟುತ್ತವೆ. ಯಾವ ರೀತಿ ಹೊಸ ಮಾಧ್ಯಮಗಳು ಆಧುನಿಕಪೂರ್ವ ಸಂವಹನಕ್ರಮಗಳಿಂದ ನಿರ್ಣೀತವಾಗಿಯೂ ಅವುಗಳ ಸ್ವರೂಪವನ್ನು ಮಾರ್ಪಡಿಸುತ್ತಿವೆ ಎಂಬುದನ್ನು ವಿಶೇಷವಾಗಿ ನಿಗಾ ಮಾಡಿ, ಹಲಮಜಲುಗಳ ನಾಟಕವನ್ನು ಕಟ್ಟಲು ಪ್ರಯತ್ನಿಸಿದ್ದೇನೆ. ಮೂಲಭೂತ ಬದಲಾವಣೆಗಳ ಸಂದರ್ಭದಲ್ಲೂ ಹೇಗೆ ಗತದ ಮತ್ತು ಇಂದಿನ ಅನುಭವಪ್ರಕ್ರಿಯೆಯಲ್ಲಿ ನಿರಂತರತೆಯ ಮಗ್ಗುಲಿದೆ ಅನ್ನುವುದನ್ನೂ ತೋರಿಸಿದ್ದೇನೆ. ತಂಡವನ್ನು ಕುರಿತು ಅನೇಕ ರಂಗ ತಂಡವು ತನ್ನ ಹಲವು ಪ್ರಾಯೋಗಿಕ ನಾಟಕ ಪ್ರಸುತಿಗಳಿಂದ ನಾಡಿನ ಜನರ ಮನ್ನಣೆ ಗಳಿಸಿದೆ. ರಂಗಭಾಷೆಯ ಹೊಸ ಸಾಧ್ಯತೆಯ ಹುಡುಕಾಟದ ಜತೆಗೆ, ಜನಮುಖಿಯೂ ಆಗಿರಬೇಕೆಂಬುದು ಈ ತಂಡದ ಪ್ರಯೋಗ ನಿರ್ಮಿತಿಯ ಹಿಂದೆ ಇರುವ ಒತ್ತಾಸೆಯಾಗಿದೆ. ಅನೇಕ ಹಲವು ಅಭಿಜಾತ ನಾಟಕಗಳನ್ನು ಸಮಕಾಲೀನ ಸಂದರ್ಭಕ್ಕೆ ಅಳವಡಿಸಿ ಪ್ರದರ್ಶಿಸಿದೆ; ಕಾವ್ಯಾತ್ಮಕ ರಚನೆಗಳಾದ ಕಾಳಿದಾಸನ ಮೇಘದೂತ, ನೆನಪಾದಳು ಶಕುಂತಲೆ, ಶೂದ್ರಕನ ಆವೆಯ ಮಣ್ಣಿನ ಆಟದ ಬಂಡಿ, ಎಚ್.ಎಸ್. ಶಿವಪ್ರಕಾಶರ ಮದುವೆ ಹೆಣ್ಣು, ಮಸ್ತಕಾಭಿಷೇಕ ರಿಹರ್ಸಲ್ಲು, ಮ್ಯಾಕ್ಬೆಥ್ ಆಟ, ಮೋಹನ ರಾಕೇಶರ ಆಧೇ ಅಧೂರೆ, ಜಿ.ಎಸ್. ಭಟ್ಟರ ಕೊಳ್ಳಿ, ಅಭಿಲಾಷಾ ಎಸ್. ಅವರ ಅಂಬೆ-ಅಂಬಿಕೆ ಮೊದಲಾದ ನಾಟಕಗಳ ಜತೆಗೆ ಮೊಲಿಯೇರನ ನವ ಅಭಿಜಾತ ಪ್ರಹಸನಗಳ ಕನ್ನಡ ರೂಪಾಂತರಗಳಾದ ಬಡ್ಡಿಬಂಗಾರ ಸೆಟ್ಟರು ಸುಂಸ್ಕೃತರಾದದ್ದು, ಅರೆರೆ ಕುಂಜಿರಾಮ ! ಇತ್ಯಾದಿಗಳನ್ನು ಈವರೆಗೆ ರಂಗಕ್ಕೆ ತಂದಿದೆ. ಸುರೇಶ ಆನಗಳ್ಳಿಯವರ ನೇತೃತ್ವದ ಈ ತಂಡ ಹಲವು ಪ್ರತಿಷ್ಠಿತ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ನಾಟಕೋತ್ಸವಗಳಲ್ಲಿ ಭಾಗವಹಿಸಿದೆ. ರಂಗಕೃತಿ-ನಾಟಕ ಕೃತಿ, ಸಮಕಾಲೀನ ಭಾರತೀಯ ಸಂದರ್ಭದಲ್ಲಿ ಆಧುನಿಕತೆ-ಸಾಂಪ್ರದಾಯಿಕತೆಗಳ ಮುಖಾಮುಖಿ, ಮಕ್ಕಳ ರಂಗಭೂಮಿಯ ನಿನ್ನೆ-ಇಂದು-ನಾಳೆ ಇತ್ಯಾದಿ ವಿಷಯಗಳ ವಿಚಾರ ಸಂಕಿರಣಗಳನ್ನು ಸಂಘಟಿಸಿದೆ. ಅನೇಕವು ಹೊಸ ನಾಟಕಗಳಾದ – ಕುಬೇರನಿಗೇನಿರಬೇಕು !?!, ಹಿರೋಶಿಮಾ, ಡಾ. ತಿಪ್ಪೇಶಿಗಳನ್ನು ಪ್ರದರ್ಶನಕ್ಕೆ ಅಣಿಗೊಳಿಸಿಕೊಳ್ಳುತ್ತಿದೆ. ನಿರ್ದೇಶಕರ ಟಿಪ್ಪಣಿ ಪಾರಂಪರಿಕರ ರಂಗಭೂಮಿ ತನ್ನ ಸಿದ್ಧ ಚೌಕಟ್ಟಿನಲ್ಲಿ ಕಥನವನ್ನು ಒಳಗೊಳ್ಳುತ್ತದೆ. ಆಧುನಿಕ ರಂಗಭೂಮಿ ಬಹುಮಟ್ಟಿಗೆ ನಾಟಕಕೃತಿಯ ಪಠ್ಯಕ್ಕನುಸಾರ ರಂಗ ಪರಿಭಾಷೆಯನ್ನು ನಿಮರ್ಿಸಲೆಳೆಸುತ್ತದೆ. ಈ ಎರಡು ಮಾರ್ಗಗಳಿಂದ ಭಿನ್ನವಾದ ರಂಗನಿರ್ಮಾಣ ಕ್ರಮವನ್ನು ಈ ಪ್ರಯೋಗದಲ್ಲಿ ಪ್ರಯತ್ನಿಸಿದ್ದೇನೆ. ನಾಟಕ ಕೃತಿಯನ್ನು ಯಥಾವತ್ತಾಗಿ ರಂಗಕ್ಕೆ ತರುವುದರ ಬದಲಿಗೆ ರಂಗಭೂಮಿಯ .ಆಟ. ಗಳ ಮೂಲಕ ನಾಟಕ ಕೃತಿಯಿಂದ ಸ್ವತಂತ್ರವಾದ ಮಂಚನಶೈಲಿಯನ್ನು ಪ್ರಯತ್ನಿಸಿದ್ದೇನೆ. ನಮ್ಮ ಆಧುನಿಕಪೂರ್ವ ಜನಪ್ರಿಯ ರಂಗಪ್ರಕಾರಗಳು .ಆಟ.ಗಳೇ ಅಲ್ಲವೆ?]]>





0 Comments