ಅನೇಕಾ ಸಾಂಸ್ಕೃತಿಕ ಸಂಘಟನೆ ಮತ್ತು ಅಂಟಾರಿಸ್ ಟೆಕ್ನಾಜೀಸ್ ಸಂಸ್ಥೆಯ ಸಹಯೋಗದೊಂದಿಗೆ ಕಿರಿಯರಿಗಾಗಿ ಆಯೋಜಿಸಿದ್ದ ‘ಮಿನುಗೆಲೆ ಮಿನುಗೆಲೆ ನಕ್ಷತ್ರ’ ಬೇಸಿಗೆ ಶಿಬಿರದಲ್ಲಿ ತಯಾರಾದ ನಾಟಕ ‘ಕಾಶಿ ಕಿಟ್ಟಿ ಕಂತೆ ಪುರಾಣ’ ನಾಟಕದ ಎರಡನೆಯ ಪ್ರದರ್ಶನ. ಮೂಲ: ಸತ್ಯಜಿತ್ ರೇ, ರೂಪಾಂತರ: ಎ.ಎಸ್ ಮೂರ್ತಿ, ನಿರ್ದೇಶನ: ಜೋಸೆಫ್.
ಸಂಗೀತಗಾರನಾಗುವ ಕನಸು ಕಾಣುವ ಕಾಶಿ ಮತ್ತು ಸಂಗೀತವಾದಕನಾಗಬೇಕೆಂದು ಬಯಸುವ ಕಿಟ್ಟಿ ಆಕಸ್ಮಿತವಾಗಿ ಭೇಟಿಯಾಗಿ ಸ್ವಪ್ರಯತ್ನದಿಂದ ಹಾಗೂ ಅತೀಂದ್ರಿಯ ಶಕ್ತಿಗಳ ಆಶೀರ್ವಾದದಿಂದ ತಮ್ಮ ಕನಸುಗಳನ್ನು ಸಾಕಾರಗೊಳಿಸುತ್ತಾರೆ. ಕಾಡು-ನಾಡು, ದೆವ್ವ-ಭೂತ ಮಾಂತ್ರಿಕ, ರಾಜ-ರಾಜಕುಮಾರಿ ಹೀಗೆ ಅನೇಕ ಅದ್ಭುತಗಳನ್ನು ಕನಸುಗಾರ ಚಿಣ್ಣರು ರಂಗದ ಮೇಲೆ ಅಭಿನಯಿಸಲಿದ್ದಾರೆ. ದಿನಾಂಕ: 5 ಜೂನ್. ಸ್ಥಳ: ಹನುಮಂತನಗರದ ಕೆ.ಹೆಚ್ ಕಲಾಸೌಧ. ಸಮಯ: ಸಂಜೆ 6.30.
ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 9448050950 ಯನ್ನು ಸಂಪರ್ಕಿಸಬಹುದಾಗಿದೆ.








0 Comments