ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಸಂಜೆ, ಬೆಂಗಳೂರಿನಲ್ಲಿ..

28 ನವೆಂಬರ್ 2010
ಇಂದಿನ ನಾಟಕ

ದೃಶ್ಯ ಅಭಿನಯಿಸುವ

ಪೇಯಿಂಗ್ ಗೆಸ್ಟ್

ಮೂಲ : ಅಭಿರಾಮ್ ಬಡಕಮ್ಕರ್
ಅನುವಾದ : ಡಿ.ಎಸ್. ಚೌಗಲೆ
28-11-2010, ಭಾನುವಾರ ವಿನ್ಯಾಸ ಮತ್ತು ನಿರ್ದೇಶನ : ದಾಕ್ಷಾಯಿಣಿ ಭಟ್

ಪಾತ್ರ ವರ್ಗ

ಗೋದೂ ಅಕ್ಕ : ಸೀತಾರಾಮ ಶರ್ಮ
ಅನಂತ : ಅನಿಲ್ ಕುಮಾರ್
ಬಾಬು ಧಢಪಳೆ : ಹೇಮಂತ್ ಕುಮಾರ್
ಸೇನೆ : ಪ್ರದೀಪ್ ಕುಮಾರ್
ಪ್ರಸಾದ್ : ವಲ್ಲಭ್
ರೇವತಿ : ಹರ್ಷಿತ
ಅಂಜಲಿ : ಅಶ್ವಿನಿ
ಗೋದೂ ಅಕ್ಕ 2 : ಸ್ಮಿತ

ತಾಂತ್ರಿಕ ವರ್ಗ

ಸಂಗೀತ ನಿರ್ದೇಶನ : ಪ್ರಕಾಶ್
ರಂಗಸಜ್ಜಿಕೆ : ಸಂತೋಶ್ ಪಾಂಚಾಲ್
ಕೀಬೋರ್ಡ್ : ತೇಜಸ್
ಬೆಳಕು : ಮುಸ್ತಫ

ನಾಟಕವನ್ನು ಕುರಿತು

ಪೇಯಿಂಗ್ ಗೆಸ್ಟ್. ಇದು ವಸ್ತು, ತಂತ್ರ, ವಿನ್ಯಾಸದಲ್ಲಿ ಅಪರೂಪದ ನಾಟಕ. ಮಾನವ ಸಹಜ ಭಾವಗಳನ್ನು ಎಳೆಎಳೆಯಾಗಿ ಬಿಚ್ಚಿಡುವ ಒಂದು ಸುಂದರ ಕಲಾಕೃತಿ, ಸ್ವಾರ್ಥ, ಲಾಲನೆ, ಭೋಗ, ಮದ, ಮಾತ್ಸರ್ಯಗಳು ಇನ್ನೊಬ್ಬರನ್ನು ಸುಡುವ ಸಡಗರದಲ್ಲಿ ವ್ಯಕ್ತಿಯನ್ನು ಹೇಗೆ ಬರಿದು ಬೂದಿಯಾಗುವಂತೆ ಮಾಡಿಬಿಡುತ್ತದೆ ಎಂಬ ಕರಾಳ ಸತ್ಯವನ್ನು ತಿಳಿಸುವ, ಒಳಿತನ್ನು ಧ್ಯೇಯವಾಗಿಸಿಕೊಂಡು ಲೋಕತೃಪ್ತಿಗಾಗಿ ತಮ್ಮನ್ನು ತಾವು ಸವೆಸಿಕೊಳ್ಳುತ್ತಾ, ಸುತ್ತಲೂ ಹರಡುವ ಸುಗಂಧದಲ್ಲಿಯೇ ತನ್ನ ಅಸ್ತಿತ್ವ ಉಳಿಸಿಕೊಳ್ಳುತ್ತಾ ಅಳಿದೂ ಉಳಿಯುವ ಚಮತ್ಕಾರವನ್ನು ಎಳೆಎಳೆಯಾಗಿ ಬಿಡಿಸಿತೋರಿಸುತ್ತದೆ. ಈ ನಾಟಕ ಮಾನವೀಯ ಸಂಬಂಧಗಳ ಬಗೆಗೆ ಪ್ರಶ್ನಿಸುತ್ತಲೇ ಸಾಮಾಜಿಕ, ಸಾಂಸ್ಕೃತಿಕ ಅನನ್ಯತೆಯನ್ನು ಎತ್ತಿ ಹಿಡಿಯುತ್ತದೆ.

ತಂಡವನ್ನು ಕುರಿತು

ನಾವು ಓದಿದ ನಾಟಕಗಳನ್ನು ನೋಡಿ ಅರ್ಥೈಸಿಕೊಂಡ ಬದುಕಿನ ಅನುಭವದ ಒಳಿತುಡಿತಗಳು ನಮ್ಮೊಳಗೆ ಕಾಡಿದಾಗ, ಅದನ್ನು ಸಮರ್ಥವಾದ ನಾಟಕಗಳ ಮೂಲಕ ಅಭಿವ್ಯಕ್ತಿಸುವ ಆಶಯ ಅಲ್ಲದೆ ಅಭಿನಯ ಮತ್ತು ರಂಗ ಸಾಧ್ಯತೆಗಳನ್ನು ಕಂಡುಕೊಳ್ಳುವ ಕುತೂಹಲವು. .ದೃಶ್ಯ. ತಂಡದ ಹುಟ್ಟಿಗೆ ಕಾರಣ. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಸ್ವಸ್ಥ ಮನಸ್ಥಿತಿಯನ್ನು ರೂಪಿಸಲು ರಂಗಭೂಮಿಯ ಮೂಲಕ ಆತ್ಮಾವಲೋಕನಕ್ಕೆ ಹೊರಟ ಸಮಾನ ಮನಸ್ಕರ ತಂಡ ದೃಶ್ಯ.

ನಮ್ಮ ತಂಡ ಕಳೆದ ನಾಲ್ಕು ವರ್ಷಗಳಿಂದ .ಗಾಜೀಪುರದ ಹಜಾಮ., .ದೇವರ ಹೆಸರಿನ್ಲಲಿ., .ಫ್ಲೌಟೋಸ್.,.ಕಾಮಧೇನು., .ಕಂಬ್ಳಿಸೇವೆ., .ಸ್ವಪ್ನವಾಸವದತ್ತ., .ವರ್ಷಗೀತೆ. ಎಂಬ ನಾಟಕಗಳನ್ನು ಪ್ರದಶರ್ಿಸಿದೆ. .ಗಾಜೀಪುರದ ಹಜಾಮ., ರಾಷ್ಟ್ರ ಮಟ್ಟದ ಸ್ಪಧರ್ೆಯಲ್ಲಿ ಪ್ರಶಸ್ತಿ ಪಡೆದಿದೆ. ಹಂಪಿ ಉತ್ಸವ, ಂ.ಆ.ಂ. ಶತಮಾನೋತ್ಸವ, ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಅಂತರಾಷ್ಟ್ರೀಯ ನಾಟಕ ಸ್ಪಧರ್ೆಯಲ್ಲಿ ಭಾಗವಹಿಸುವಿಕೆ. ಅಲ್ಲದೆ, ತುಮಕೂರು, ಹರಪ್ಪನಹಳ್ಳಿಗಳಲ್ಲೂ ಪ್ರದರ್ಶನ ನೀಡಿದೆ. ಈಗ .ದೃಶ್ಯ. ತಂಡವು .ಪೇಯಿಂಗ್ ಗೆಸ್ಟ್. ಎಂಬ ಪ್ರಯೋಗವನ್ನು ಪ್ರದರ್ಶಿಸಲಿದೆ.

ನಿರ್ದೇಶಕರನ್ನು ಕುರಿತು

ದಾಕ್ಷಾಯಿಣಿ ಭಟ್ ನೀನಾಸಂನಲ್ಲಿ ಪದವಿ ಪಡೆದು, ಹತ್ತು ವರ್ಷಗಳಿಂದ ರಂಗಭೂಮಿಯ ನೇಪಥ್ಯದ ಎಲ್ಲಾ ಪ್ರಕಾರಗಳಲ್ಲಿ ದುಡಿಯುತ್ತಾ ಕನರ್ಾಟಕದ ಹಲವಾರು ತಂಡಗಳಿಗೆ ಹಾಗೂ ಶಾಲಾ ಕಾಲೇಜುಗಳಿಗೆ ನಾಟಕ ನಿರ್ದೇಶನ ಮಾಡುತ್ತಾ ದೃಶ್ಯ ತಂಡವನ್ನು ನಿರ್ವಹಿಸುತ್ತಿದ್ದಾರೆ. ಜತೆಗೆ ನಾಟಕ ನಿರ್ದೇಶನ, ಆಗಾಗ ಮಕ್ಕಳ ನಾಟಕಗಳನ್ನು ರಚಿಸಿ ನಿರ್ದೇಶಿಸಿದ ಅನುಭವ. ಕಿಂಗ್ ಲಿಯರ್, ತ್ರೀ ಸಿಸ್ಟರ್ಸ್, ಭಗವದಜ್ಜುಕೀಯಂ, ಅಹಲ್ಯೆ ಹೀಗೆ 30ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ ಅನುಭವದ ಜೊತೆ

 

‍ಲೇಖಕರು avadhi

28 November, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading