ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು 'ರಂಗಸಿರಿ' ತಂಡದ ನಾಟಕ

ಮೂಲ ನಾಟಕ ರಚನೆ : ಮಹೇಶ್ ಎಲಕುಂಚೆವಾರ್ ಅನುವಾದ : ಗಿರೀಶ್ ಕಾರ್ನಾಡ ನಿರ್ದೇಶನ : ಸಂದೀಪ್ ಪೈ ತಂಡದ ಬಗ್ಗೆ ರಂಗಸಿರಿ, ಕಳೆದ 9 ವರ್ಷಗಳಿಂದ ಒಳ್ಳೆಯ ಪ್ರಯೋಗಗಳನ್ನು ರಂಗಕ್ಕೇರಿಸಿರುವ ಯುವ ಕಲಾವಿದರ ಪಡೆ. ‘ದಂಗೆಯ ಮುಂಚಿನ ದಿನಗಳು’, ‘ಬಾಕಿ ಇತಿಹಾಸ’, ‘ಪ್ರಮಾಣವೆಂಬುದು ಪ್ರಮಾಣವೆ ?’, ‘ಕಾಯ್ಕಿಣಿ ಕಥಾಂಗಣ’, ‘ಕೈಲಾಸಂ ಕೊಲಾಜ್’ ಇವು ರಂಗಸಿರಿಯ ಪುಟ್ಟ ಹೆಜ್ಜೆಗಳು. ಆಹಾ-ಓಹೋ ಎನ್ನುವ ಪ್ರಯೋಗಗಳಲ್ಲಿ ನಂಬಿಕೆಯಿಡದ ತಂಡ ಗುಣಾತ್ಮಕ ನಾಟಕಗಳಿಗೆ ಬದ್ಧವಾಗಿದೆ. ವಾಸಾಂಸಿ ಜೀರ್ಣಾ ನಿತಂಡದ ಸರಳ ರಂಗಪ್ರಯೋಗ. ನಾಟಕದ ಬಗ್ಗೆ ವಾಸಾಂಸಿ ಜೀರ್ಣಾನಿ , ಜೀವಗಳು ಅವನ್ನು ಮೀರಿಸುವ ಸಂಬಂಧಗಳು, ಆ ಸಂಬಂಧಗಳನ್ನು ದಾಟುವ ಆತ್ಮಗಳನ್ನು; ಆಗಿ-ಆಗದಿರುವ-ಆಗಿರುವ ಘಟನಾವಳಿಗಳನ್ನು ಎಳೆ-ಎಳೆಯಾಗಿ ಬಿಡಿಸುವ ಪ್ರಯೋಗ. ಪ್ರಯೋಗ ಸರಳ ಕಂಡರು ರಂಗ ತಥ್ಯ ಸುಲಭವಾಗಿ ದಕ್ಕುವಂಥದ್ದಲ್ಲ. ಮಹೇಶ್ ಎಲಕುಂಚವಾರರ ಈ ಮರಾಠಿ ನಟಕವನ್ನು ಗಿರೀಷ್ ಕಾರ್ನಾಡರು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಂದೀಪ್ ಪೈ ರವರು ನಿರ್ದೇಶನ ಮಾಡಿದ್ದು, ಈ ಏಕಾಂಕ ನಾಟಕಕ್ಕೆ ಶಶಿಧರ ಅಡಪ ಅವರು ರಂಗ ವಿನ್ಯಾಸ ಮಾಡಿದ್ದಾರೆ. ನಿರ್ದೇಶಕರು ಸಂದೀಪ್ ಪೈ ಅವರು ರಂಗಸಿರಿಯ ಹುಟ್ಟಿನಿಂದಲು ತಂಡದ ನಂಟನ್ನು ಇರಿಸಿರುವ ಯುವ ನಟ-ನಿರ್ದೇಶಕ. ‘ನಾಯಿ-ನರಿ ಕಥೆ’, ‘ಜಲಗಾರ’, ‘ಸ್ವಾತಂತ್ರ ನಿಮ್ಮಿತ್ತಂ’, ‘ಕಾಯ್ಕಿಣಿ ಕಥಾಂಗಣ’, ‘ಕೈಲಾಸಂ ಕೊಲಾಜ್’, ‘ಮಹಿಮಾಪುರ’ ಇವು ಪೈರವರ ಪೂರ್ಣ ಪ್ರಮಾಣ ನಾಟಕಗಳು. ಪೈ ಅವರು ಪ್ರಯೋಗಗಳನ್ನು ಮತ್ತೊಂದು ಚೌಕಟ್ಟಿನ್ನಲ್ಲಿ ನೋಡಿ, ಅದ್ದನ್ನು ವಿಭಿನ್ನವಾಗಿ ರಂಗಕ್ಕೆ ತಂದು, ವಿಷೇಶವಾಗಿ ಬಿಂಬಿಸುವ ಪ್ರಯತ್ನ ಮಾಡುವ ನಿರ್ದೇಶಕರು. ನಾಟಕಕಾರರು ಮಹೇಶ್ ಎಲಕುಂಚವಾರ್ ಆವರು ಭರತದ ಹೆಸರಾಂತ ನಾಟಕಕಾರರಷ್ಟೇ ಅಲ್ಲದೆ ರಂಗಕರ್ಮಿಗಳು, ವಿಮರ್ಶಕರು ಹಾಗು ಒಬ್ಬ ಅದ್ಭುತ ನಟರು ಹೌದು. ‘ಸುಲ್ತಾನ್’ ನಾಟಕ ದೊಂದಿಗೆ ರಾಷ್ಟ್ರ ಮಟ್ಟದಲ್ಲಿ ಪ್ರಖ್ಯಾತರಾದ ಇವರ ‘ಹೋಲಿ’, ‘ರಕ್ತಪುಷ್ಪ’, ‘ವಿರಾಸತ್’, ‘ಆತ್ಮಕಥ’ ಮತ್ತಿತರ ನಾಟಕಗಳು ಪ್ರೇಕ್ಷಕರ ಮನ ಸೆಳೆದಿದೆ. ಇವರ ನಾಟಕಗಳು ಮೂಲತಹ ಮರಾಠಿಯಲ್ಲಿದ್ದು ಭಾರತದ ವಿವಿಧ ಭಾಷೆಗಳಿಗೆ ಹಾಗು ಅನೇಕ ವಿದೇಶೀ ಭಾಷೆಗಳಿಗೂ ಸಹ ಅನುವಾದವಾಗಿವೆ. ಇವರು ‘ಸಾಹಿತ್ಯ ಅಕಾಡೆಮಿ’ ಪ್ರಶಸ್ತಿ, ‘ಸಂಗೀತ್-ನಾಟಕ್ ಅಕಾಡೆಮಿ’ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಸನ್ಮಾನಗಳನ್ನು ಪಡೆದುಕೊಂಡಿದ್ದಾರೆ. ಅನುವಾದಕರು ಗಿರೀಶ್ ಕಾರ್ನಾಡರು ಕನ್ನಡಕ್ಕೆ 7ನೇ ಬಾರಿ ಜ್ನಾನಪೀಠ ಪ್ರಶಸ್ತಿ ತಂದುಕೊಟ್ಟವರ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕನ್ನಡ ರಂಗಭೂಮಿ ಹಾಗು ಚಿತ್ರರಂಗದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಇವರ ನಾಟಕಗಳನ್ನು ಅಬ್ರಾಹಮ್ ಅಲ್ಕಾಜಿ, ಬಿ.ವಿ. ಕಾರಂತ್, ಆಲೀಕ್ ಪದಂಸೀ, ಪ್ರಸನ್ನ, ಅರವಿಂದ್ ಗೌರ್, ಸತ್ಯದೇವ ದೂಬೆ, ವಿಜಯ ಮೆಹೆತ, ಶ್ಯಾಮಾನಂದ ಜಲನ್ ಮತ್ತಿತರ ಮಹೋನ್ನತ ರಂಗಕರ್ಮಿಗಳು ನಿರ್ದೇಶಿಸಿ ರಂಗಕ್ಕೆ ಅಳವಡಿಸಿದ್ದಾರೆ. ಇವರ ನಾಟಕಗಳು ಪೌರಾಣಿಕ, ಐತಿಹಾಸಿಕ ಹಾಗು ಸಾಮಾಜಿಕ ವಿಶಯಗಳನ್ನು ಹೊಂದಿದ್ದು ‘ತೊಗಲಕ’, ‘ಹಯವದನ’, ‘ನಾಗಮಂಡಲ’, ‘ಬಲಿ’, ‘ಯಯಾತಿ’, ‘ತಲೆದಂಡ’ ಮುಂತಾದವು ಇವರ ಪ್ರಸಿದ್ಧ ನಾಟಕಗಳಾಗಿವೆ.]]>

‍ಲೇಖಕರು G

4 January, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading