ಇಂದು ಮೇ ದಿನ..

And you’ll ask: why doesn’t his poetry
speak of dreams and leaves
and the great volcanoes of his native land?
Come and see the blood in the streets.
Come and see
The blood in the streets.
Come and see the blood
In the streets!

ಇಂದು ಮೇ ದಿನ. ಪ್ಯಾಬ್ಲೋ ನೆರೂದಾ ಪ್ರಶ್ನಿಸುತ್ತಾನೆ-
ನೀವು ಕೇಳುತ್ತೀರಿ ನಾನೇಕೆ ಬರೆಯುವುದಿಲ್ಲ, ಕನಸುಗಳ ಬಗ್ಗೆ
ನೋಡಿ ಬೀದಿಯ ಮೇಲೆ ರಕ್ತವಿದೆ, ರಕ್ತವಿದೆ ಬೀದಿಯ ಮೇಲೆ
ಜಾಗತೀಕರಣದ ವಿಶೇಷವೇ ಅದು. ಅದು ಬೀದಿಯ ಮೇಲೆ ರಕ್ತ ಬೀಳುವಂತೆ ನೋಡಿಕೊಳ್ಳುವುದಿಲ್ಲ. ಆದರೆ ಅದು ಸದ್ದಿಲ್ಲದಂತೆ ರಕ್ತ ಹೀರುತ್ತಾ ಹೋಗುತ್ತದೆ. ಹೌದಲ್ಲಾ ಮೊನ್ನೆ ‘ದೇಶ ಕಾಲ’ ದ ವಿಶೇಷ ಬಿಡುಗಡೆ ಸಮಾರಂಭದಲ್ಲಿ ಜಾವೇದ್ ಅಖ್ತರ್ ಹೇಳುತ್ತಿದ್ದರು. ಸಿನೆಮಾ ರಂಗದ ಹೀರೋ ಕಾರ್ಮಿಕ ಮಾತ್ರವೇ ಆಗಿದ್ದ ಕಾಲ ಒಂದಿತ್ತು ಅಂತ. ಎಲ್ಲಿ ಮರೆತುಬಿಟ್ಟೆವು ಆತನನ್ನು. ಕೋಲಾ , ಕೆ ಎಫ್ ಸಿ ಚಿಕನ್, ಪೀಟ್ಜಾ, ಬರ್ಗರ್ ಗಳ ಸಂತೆಯಲ್ಲಿ ಆತ  ಎಲ್ಲಿ ಕಳೆದು ಹೋದ?.
‘ಅನ್ನ ಕೊಡಿ, ಬಟ್ಟೆ ಕೊಡಿ, ದುಡಿವ ಕೈಗೆ ಕೆಲಸ ಕೊಡಿ’ ಅಂತ ಕೆಂಪು ಬಾವುಟ ಬೀಸುತ್ತಾ ಬರುವ ಅವರು ನಮಗೆ ಈಗ ಗಂಟೆಗಟ್ಟಲೆ ಟ್ರಾಫಿಕ್ ಜ್ಯಾಮ್ ಮಾಡುವ ದರಿದ್ರ ಮಂದಿ ಮಾತ್ರವೇ ಆಗಿದ್ದಾರೆ. ಏಕೆಂದರೆ ನಾವು ಬೇಗ ಹೋಗಿ ಸೇರಿಕೊಕೊಳ್ಳಬೇಕಾಗಿದೆ- ಇನ್ಫೋಸಿಸ್ ಗೆ, ಮೈಂಡ್  ಟ್ರೀ ಗೆ, ಜಿನೆಸಿಸ್ ಗೆ, ಮೈಕ್ರೋ ಲ್ಯಾಂಡ್ ಗೆ ..ನಮ್ಮ ವೇಗಕ್ಕೆ ತಡೆ ಒಡ್ಡಿ ಬಿಟ್ಟರಲ್ಲಾ..? ಸಿಟ್ಟು ಬಾರದೆ ಏನು..?
ಅದಕ್ಕೆ ಇರಬೇಕು ಪ್ಯಾಬ್ಲೋ ಕೇಳಿದ್ದು- ಬೀದಿಯ ಮೇಲೆ ರಕ್ತ ಬಿದ್ದಿದೆ ನೋಡಿದ್ದೀರಾ ಅಂತ..
ಅದನ್ನು ನೋಡಿದ್ದರೆ ನೀವು ನಾನೇಕೆ ಕವಿತೆ ಬರೆಯುವುದಿಲ್ಲ, ಕನಸುಗಳ ಬಗ್ಗೆ ಮಾತನಾದುವುದಿಲ್ಲ ಎಂದು ಕೇಳುತ್ತಿರಲಿಲ್ಲ
ಅಷ್ಟೇ ಅಲ್ಲ
ಐ ಪಿ ಎಲ್ ಗೆ ಏಕೆ ಹೋಗಲಿಲ್ಲ, ಸಾನಿಯಾ ಮಿರ್ಜಾ ಮದುವೆ ಸರಿಯಾ ಅನ್ನುತ್ತಿರಲಿಲ್ಲ, ನಾರಾಯಣ ಮೂರ್ತಿ ಗೆ ರಾಷ್ಟ್ರಪತಿ ಸ್ಥಾನ, ಸುಧಾ ಮೂರ್ತಿಗೆ ಸೀರಿಯಲ್ ನಲ್ಲಿ ಪಾತ್ರ, ಬಾಗ್ಚಿ ಬರೆದ ಪುಸ್ತಕ ಈ ಎಲ್ಲವೂ ಈಗಂತೂ ನನ್ನ ಮುಂದೆ ತರುತ್ತಿರಲಿಲ್ಲ.

we shall overcome…ಎನ್ನುವ ನಂಬಿಕೆಯೇ ಕುಸಿದು ಹೋಗುತ್ತಿದೆ. ಆ ನಂಬಿಕೆಗೆ ಭದ್ರ ಆದಾರ ಕೊಟ್ಟ, ಜಗತ್ತಿನಾದ್ಯಂತ ಲಕ್ಷಾಂತರ ಮನಸ್ಸುಗಳನ್ನೂ ಇಂದಿಗೂ ಹೋರಾಟಕ್ಕೆ ಹುರಿದುಂಬಿಸುತ್ತಿರುವ ಆ ಹಾಡಿಗೆ ಒಂದು ಗೌರವ ಅರ್ಪಣೆ ‘ಅವಧಿ’ಯಿಂದ. ಮೇ ದಿನದ ಅಂಗವಾಗಿ ಈ ಹಾಡು, ಈ ಹಾಡಿನ ಹುಟ್ಟು, ಆ ಹಾಡಿದಾಟ ಎಲ್ಲವೂ ಇಲ್ಲಿದೆ.
ಇದನ್ನೆಲ್ಲಾ ಒಂದಿಷ್ಟು ಹೊತ್ತು ಯೋಚಿಸುವಂತೆ ಮಾಡಿದ ಆ ಮೇ ದಿನಕ್ಕೆ ನಮನ…

‍ಲೇಖಕರು avadhi

May 1, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: