ಮ್ಯಾಂಗೊ ಹೌಸ್
ಅರ್ಪಿಸುವ ನಾಟಕ
‘ಎಲ್ಲಿ ಜಾರಿತೋ ಮನವು’
4 ಜೂನ್ 2014
ಸಂಜೆ 7:30ಕ್ಕೆ
ಸ್ಥಳ: ರಂಗ ಶಂಕರ
ನಿರ್ದೇಶನ: ಗಣೇಶ್ ಯಾದವ್
ಕನ್ನಡಕ್ಕೆ ಅನುವಾದ: ಸುಂದರಶ್ರೀ
ರಂಗದ ಮೇಲೆ:
ಮೈಕೊ ಮಂಜು, ನಂದಿತ ಯಾದವ್, ನಾಗೇಶ್ ಯಾದವ್, ಪೂರ್ಣಚಂದ್ರ ತೇಜಸ್ವಿ, ನಿಶಾ, ಸುಮುಖ.
ನಾಟಕದ ಬಗ್ಗೆ:
ಎರಡು ಜೋಡಿ, ಮೂರು ಸಂಸಾರ, ಒಂದು ವಿದಾಯ
ವಿವಾಹಬಾಹಿರ ಸಂಬಂಧವನ್ನು ಶುರುಮಾಡುವಷ್ಟೇ, ನಿಲ್ಲಿಸುವುದೂ ಕಷ್ಟವಾ? ಅದು ಮತ್ತೆ ಮತ್ತೆ ಏನನ್ನೋ ಬೇಡುತ್ತಿರುತ್ತಾ? ಕಳಕೊಳ್ಳುವ ಭಯ ಅಲ್ಲೂ ಗಂಡಸನ್ನೂ ಹೆಣ್ಣನ್ನೂ ಕಾಡುತ್ತಿರುತ್ತಾ? ಅಷ್ಟಕ್ಕೂ ಆ ಸಂಬಂಧದಿಂದ ಅವರಿಬ್ಬರೂ ಪಡಕೊಳ್ಳುತ್ತಿದ್ದದ್ದು ಏನನ್ನು? ಐದು ನಿಮಿಷದ ಸುಖ, ಎಲ್ಲವನ್ನೂ ಹೇಳಿಕೊಳ್ಳಬಹುದು ಎಂಬ ನಿರಾಳ, ಸಂಗಾತಿಯಿಂದ ಕದ್ದು ಮುಚ್ಚಿ ಏನನ್ನೋ ಮಾಡುತ್ತಿದ್ದೇವೆ ಎಂಬ ಥ್ರಿಲ್? ದಾಂಪತ್ಯದಿಂದ ಸಿಗದೇ ಇದ್ದದ್ದು ಅದರಾಚೆಗೆ ಸಿಗುತ್ತದೆ ಎಂಬ ಆಶೆ? ಅಲ್ಲಿ ಇವೆಲ್ಲವೂ ಉಂಟು! ಏನೂ ಇಲ್ಲವಾ?
ಈ ಎಲ್ಲಾ ಪ್ರಶ್ನೆಗಳಿಗೂ ನಾಟಕದಲ್ಲಿ ಉತ್ತರ ಹುಡುಕಬಹುದು!






0 Comments