ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಹುಡುಗ ಚಪ್ಪಾಳೆ ತಟ್ಟಿ ಕೇಕೆ ಹಾಕಿದ್ದು ಇಲ್ಲೇ..

ಯಾಕತ್ರಿ ಅನುವವರಿಗೇನು ಹೇಳುವುದು? ರಾಧೇಶ್ ತೋಳ್ಪಾಡಿ ಕೊನೆಯಿರದ ಪ್ರವಾಹದಲ್ಲೊಂದು ನಡುಗಡ್ಡೆ ಇದು ಆಲಿಬಾಬನ ಗುಹೆ ತೆರಕೊಂಡಾಗ ಆ ಹುಡುಗ ಚಪ್ಪಾಳೆ ತಟ್ಟಿ ಕೇಕೆ ಹಾಕಿದ್ದು ಇಲ್ಲೇ   ಇದರ ಕಿರುದಾರಿ, ಓಣಿಗಳಲ್ಲೇ ಗೋಚರಿಸಿದ್ದು ಅಲ್ಲಮನ ಬಯಲು, ಎಷ್ಟೊಂದು ಮುಗಿಲು, ನಕ್ಶತ್ರ ಚಂದ್ರಲೋಕದ ತಾಯಿ ಬೆಳದಿಂಗಳು. ನಾಯಿಗುತ್ತಿ, ಸರಸೋತಿ, ಪಾರೋತಿಯರೆಲ್ಲ ಸಿಕ್ಕದ್ದು ಇಲ್ಲೇ. ಇಲ್ಲೇ ಆ ಮಹಾವಟವೃಕ್ಷ, ಅದರ ಹರೆಯದಲ್ಲಿ ಗೋವಿಂದ ಕೊಳಲನೂದುತ್ತ, ಕೇಳಬಹುದಾಗಿತ್ತು ಬಗೆಬಗೆಯ ಹಕ್ಕಿಗಳ ಒಡಲಿನುಲಿ, ನಾಡಿಮಿಡಿತ.   ಯಾಕತ್ರಿ ಅನುವವರಿಗೇನು ಹೇಳುವುದು? ಉಪಮೆ-ಅಲಂಕಾರ ಬಿಟ್ಟು ಹೇಳುವುದಾದರೆ ಮಳೆ ಬಂದಾಗ ನೀಡಿದ್ದು ಇದೇ ತಲೆಯ ಮೇಲೊಂದು ಸೂರು. ಮೆಟ್ಟಲುಗಳನ್ನೇರಿ ಹೋದವರಿಗಂತೂ ಅದು ಅವರದೇ ಬಾನಂಗಳ! ಚತುರ್ವಿಧದ ರಸ್ತೆಗಳೂ ಸಂಧಿಸುವ ಒಂದು ಸಾರ್ವಜನಿಕ ಸ್ಥಳ ಪ್ರತಿಯೊಬ್ಬರ ಖಾಸಗಿ ಭಾಗವಾದದ್ದೊಂದು ಪವಾಡ!   ಏನು ಬೇಸರವೋ ಈ ನಡುಗಡ್ಡೆಗೆ, ನೀರಿಕಿಳಿದವನೆ ಬಲ್ಲ! ಅಮುಕಿ ಹಿಡಿದವೆ ಬಾಯಿಯೇ ದೇಹವಾಗಿರುವ ಮಕರಾಕ್ಷ ಬಳಗ? ಎಲ್ಲಿ ಹುಡುಕುವುದಿನ್ನೆಲ್ಲಿ ತಡಕಾಡುವುದು ಆ ಹಸಿರು ಹೊಲ ಬಿದಿರು ಮೆಳೆ ಕೊಳಲ? ತಂತಮ್ಮ ತಾರೆಗಳ ಕೂಡೆ ಪಿಸುನುಡಿಯ ಆಡಗೊಟ್ಟವರ? *** ೩೧ ಮಾರ್ಚ್ ೨೦೧೨ಕ್ಕೆ ಮುಚ್ಚಲ್ಪಡುವ ಮಂಗಳೂರಿನ ಅತ್ರಿ ಬುಕ್ ಸೆಂಟರ್ ಕುರಿತು ರಾಧೇಶ್ ತೋಳ್ಪಾಡಿ ಎಸ್, ಉಪಾಧ್ಯಾಯರು, ನರಿಕೊಂಬು ಅಂಚೆ ಮತ್ತು ಗ್ರಾಮ, ಬಂಟ್ವಾಳ, ದಕ

]]>

‍ಲೇಖಕರು G

27 February, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading