ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಪತ್ರವನ್ನು ಕಪ್ಪೆಗೆ ಹಸ್ತಾಂತರಿಸಿದ..

Prasad

ದೂರದ ಅಂಗೋಲಾದಿಂದ 

ಪ್ರಸಾದ್ ಕೆ 

ರಿಪಬ್ಲಿಕ್ ಆಫ್ ಅಂಗೋಲಾ ದೇಶದ, ಅಂಬುಡು ಜನಾಂಗದ, ಬಾಕಾ ಬುಡಕಟ್ಟಿನ ಒಂದು ಜಾನಪದ ಕಥೆಯೆಂದು ಹೇಳಲಾಗುವ ಪುಟ್ಟ ಕಥೆಯೊಂದನ್ನು ಇತ್ತೀಚಿಗೆ ಓದಿದೆ. ಓದಿ, ಖುಷಿಪಟ್ಟು ಅನುವಾದಿಸಿ, ಸಕಾಲಿಕವೆಂದು ತಿಳಿದು  ನಿಮ್ಮ ಮುಂದಿರಿಸಿದ್ದೇನೆ.

fairiesಒಂದಾನೊಂದು ಕಾಲದಲ್ಲಿ ಕಿಮಾನ (ಕಿಮನೌಝ್) ಎಂಬ ತರುಣನೊಬ್ಬನಿದ್ದ. ಅವನಿಗೆ ಆಕಾಶ ಸುಂದರಿಯನ್ನು ವಿವಾಹವಾಗಬೇಕು ಎಂಬ ಹೊಸ ಮಹದಾಸೆಯೊಂದು ಹುಟ್ಟಿಕೊಂಡಿತ್ತು. ಈ ಸಂಬಂಧ ಆಕಾಶದ ಅಧಿದೇವತೆಯಾದ ಸೂರ್ಯದೇವನಿಗೆ ಪತ್ರವೊಂದನ್ನು ಬರೆದ. ಪತ್ರ ಬರೆದನೇನೋ ನಿಜ, ಆದ್ರೆ ಅದನ್ನು ತಲುಪಿಸುವುದು ಹೇಗೆ ಎಂಬ ಸಂದಿಗ್ಧ ಪರಿಸ್ಥಿಯುಂಟಾಯಿತು.

ಕಿಮಾನಾ ಮೊಲವೊಂದರ ಬಳಿ ಹೋಗಿ ಕೇಳಿದ. “ಈ ಪತ್ರವನ್ನು ಸೂರ್ಯದೇವನಿಗೆ ತಲುಪಿಸುವೆಯಾ?” “ಸ್ವರ್ಗಕ್ಕೆ ಹೋಗಲು ನನ್ನಿಂದಾಗುವುದಿಲ್ಲ”, ಮೊಲ ಉತ್ತರಿಸಿತು.

ಬೇಸರಗೊಂಡ ಕಿಮಾನಾ ಸಾರಂಗವೊಂದರ ಬಳಿ ಹೋಗಿ ಕೇಳಿದ , “ಈ ಪತ್ರವನ್ನು ಸೂರ್ಯದೇವನಿಗೆ ತಲುಪಿಸುವೆಯಾ?” “ಸ್ವರ್ಗಕ್ಕೆ ಹೋಗಲು ನನ್ನಿಂದಾಗುವುದಿಲ್ಲ”, ಸಾರಂಗವು ಉತ್ತರಿಸಿತು.

ಕಿಮಾನಾ ಗಿಡುಗವೊಂದರ ಬಳಿ ಹೋಗಿ ಕೇಳಿದ, “ಈ ಪತ್ರವನ್ನು ಸೂರ್ಯದೇವನಿಗೆ ತಲುಪಿಸುವೆಯಾ?” “ನಾನು ಅರ್ಧದಾರಿಯನ್ನಷ್ಟೇ ಕ್ರಮಿಸಬಲ್ಲೆ, ಆದರೆ ಸ್ವರ್ಗದವರೆಗೆ ತಲುಪಲು ನನ್ನಿಂದಾಗುವುದಿಲ್ಲ”, ಗಿಡುಗವು ಉತ್ತರಿಸಿತು.

ಕಿಮಾನಾನನ್ನು ದೂರದಿಂದಲೇ ಗಮನಿಸುತ್ತಿದ್ದ ಕಪ್ಪೆಯೊಂದು ಅವನ ಬಳಿ ಬಂದು ಹೇಳಿತು, “ನೀನೇ ಖುದ್ದಾಗಿ ಹೋಗಿ ಪತ್ರವನ್ನು ತಲುಪಿಸಬಹುದಲ್ಲವೇ?” “ಇದೊಂದು ಕೆಲಸ ನನ್ನಿಂದಾಗಲ್ಲಪ್ಪ”, ಕಿಮಾನಾ ನಿರಾಶೆಯ ನಿಟ್ಟುಸಿರಿಟ್ಟು ಉತ್ತರಿಸಿದ. “ಈ ಪತ್ರವನ್ನು ನನಗೆ ಕೊಡು. ನಿನ್ನ ಪರವಾಗಿ ನಾನೇ ತಲುಪಿಸುತ್ತೇನೆ “, ಕಪ್ಪೆ ಹೇಳಿತು.

ಕಪ್ಪೆಯ ಆತ್ಮವಿಶ್ವಾಸದ ಮಾತನ್ನು ಕೇಳಿ ಕಿಮಾನ ನಕ್ಕ. “ಕಪ್ಪೆಯೊಂದು ಸ್ವರ್ಗಕ್ಕೆ ತೆರಳಿ ಪತ್ರವನ್ನು ತಲುಪಿಸುವುದುಂಟೇ?”,  ಆತ ಕುಹುಕದ ನಗೆಯನ್ನೆಸೆದ.”ಏನೋ ಗೋತ್ತಿಲ್ಲ, ಆದ್ರೂ ಆಗಬಹುದು. ಆದ್ರೆ ಪ್ರಯತ್ನವನ್ನೇ ಮಾಡದಿದ್ದರೆ ಹೇಗೇ?” ಕಪ್ಪೆ ಉತ್ತರಿಸಿತು.

ಕಿಮಾನಾ ಮರುಮಾತಿಲ್ಲದೆ ತನ್ನ ಪತ್ರವನ್ನು ಕಪ್ಪೆಗೆ ಹಸ್ತಾಂತರಿಸಿದ

 

‍ಲೇಖಕರು Admin

29 June, 2016

2 Comments

  1. ಸಂತೋಷ

    ಒಳ್ಳೆಯ ಕತೆ. ಅಷ್ಟೇ ಚೆನ್ನಾದ ಅನುವಾದ.

  2. shama nandibetta

    ಪ್ರಯತ್ನವನ್ನೇ ಮಾಡದಿದ್ದರೆ ಹೇಗೇ?”

    Sooooooooper like

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading