ವಿ ಆರ್ ಕಾರ್ಪೆ೦ಟರ್ ಹ೦ಚಿಕೊ೦ಡಿದ್ದು
ವಿ ಆರ್ ಕಾರ್ಪೆ೦ಟರ್
ಮೋದಿಯನ್ನು ಪ್ರಧಾನಿ ಅಭ್ಯರ್ಥಿಯೆಂದು ಒಂದು ವರ್ಗ ಎಗ್ಗಿಲ್ಲದೇ ಬಿಂಬಿಸುತ್ತಿರುವ ಈ ಹೊತ್ತಿನಲ್ಲಿ
ಬ್ರೆಕ್ಟ್ ಬರೆದ ಕವಿತೆ (ಅನುವಾದ ಶಾ. ಬಾಲುರಾವ್)
ಮಡಿವಂತ ಪ್ರಧಾನಿಯ ಬಗ್ಗೆ… ನೆನಪಾಯ್ತು!
ಕೇಳಿದ್ದೇನೆ; ಆ ಪ್ರಧಾನಿ ಕುಡಿಯುವುದಿಲ್ಲವಂತೆ
ಮೀನು ಮಾಂಸ ತಿನ್ನುವುದಿಲ್ಲವಂತೆ, ಸಿಗರೇಟು ಸೇದುವುದಿಲ್ಲವಂತೆ
ಅವನಿರುವುದು ಒಂದು ಸಾಧಾರಣ ಮನೆಯಲ್ಲಂತೆ.
ಮತ್ತೆ ಇದನ್ನೂ ಕೇಳಿದ್ದೇನೆ; ಆ ದೇಶದ ಬಡಜನ
ಹೊಟ್ಟೆಗಿಲ್ಲದೆ ಪಾಡು ಪಡುತ್ತಿದ್ದಾರಂತೆ.
ಅದರ ಬದಲು ಹೀಗೆಂದು ಕೇಳುವುದು ಎಷ್ಟು ಮೇಲು
ಪ್ರಧಾನಿ ಕ್ಯಾಬಿನೆಟ್ ಮೀಟಿಂಗುಗಳಲ್ಲೂ ಕುಡಿದು ಕೂತಿರುತ್ತಾನೆ
ತಜ್ಞರಲ್ಲದ ಕೆಲಮಂದಿ ಕಾಯಿದೆ ಕಾನೂನುಗಳನ್ನು ಬದಲಾಯಿಸುತ್ತಿದ್ದಾರೆ
ಅವನು ಅವರ ಪೈಪಿಂದೇಳುವ ಹೊಗೆಯನ್ನೇ ನೋಡುತ್ತಿರುತ್ತಾನೆ
ಆ ದೇಶದಲ್ಲಿ ಬಡಜನರೇ ಇಲ್ಲ.
]]>





ನಿಮ್ಮ ಚಿಂತನೆ ತುಂಬಾ ಅರ್ಥಪುರ್ನವಾಗಿದೆ.ದಾಸರು ಎಂದೋ ಹೇಳಿದ ಈ ಮಾತು ನೆನಪಿಗೆ ಬರ್ತಿದೆ'” ಲೊಳಲೊಟ್ಟೆ ಎಲ್ಲ ಲೊಳಲೊಟ್ಟೆಉತ್ತಮ ಪ್ರಭುತ್ವ ಎನ್ನುವುದು ಲೊಳಲೊಟ್ಟೆ “
ನಮ್ಮ ಕನಾಟಕದ ಹೊಸ ಮುಖ್ಯಮಂತ್ರಿ ಜಗದೀಶ ಶೆಟ್ಟರ್ಅವರ ಬಗ್ಗೆ ನಮ್ಮ ಮಾಧ್ಯಮದವರು ತುಂಬಾ ಸಜ್ಜನ ಅಂತ ಬೊಗಳೆ ಬೀಡುತ್ತಿದ್ದರೆ.ಹಿಂಬಾಗಿಲಿನ ಮೂಲಕ ಮತ್ತು ಭ್ರಷ್ಟರ ಅಣತಿಯಂತೆ ಆಯ್ಕೆಯಾದವರು ಸಜ್ಜನರೇ?
ಬ್ರೆಕ್ಟ್ ರ ಪದ್ಯ ತುಂಬಾ ಸಕಾಲಿಕ.ವಂದನೆಗಳು.