ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಶಾ ಜಗದೀಶ್, ರೇವಣಸಿದ್ಧಪ್ಪ, ಅಕ್ಷತಾ ಕೃಷ್ಣಮೂರ್ತಿ ಸೇರಿದಂತೆ 10 ಸಾಹಿತಿಗಳಿಗೆ ಪ್ರಶಸ್ತಿ 

ಮಂಡ್ಯದ ‘ಅಡ್ವೈಸರ್’ ಪತ್ರಿಕೆ ಪ್ರಕಟಿಸಿರುವ ೨೦೨೨ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ೧೦ ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕರಾದ ಸಿ.ಬಸವರಾಜು ಅವರು ತಿಳಿಸಿದ್ದಾರೆ. 

ಎಲ್ಲಾ ೧೦ ಪ್ರಶಸ್ತಿಗಳು ಮೂರು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರ ಹೊಂದಿದೆ. ಪ್ರಶಸ್ತಿ ವಿಜೇತರನ್ನು ಹಿರಿಯ ಸಾಹಿತಿ ಡಾ.ಪ್ರದೀಪಕುಮಾರ ಹೆಬ್ರಿ ನೇತೃತ್ವದ ತೀರ್ಪುಗಾರರ ಮಂಡಳಿ ಆಯ್ಕೆ ಮಾಡಿದೆ.  

ಪ್ರಶಸ್ತಿ ವಿಜೇತರು 

ಕವನ ಸಂಕಲನ ವಿಭಾಗದಲ್ಲಿ 

ಡಾ.ಎಂ.ಎ.ಪದ್ಮನಾಭ ಹೆಬ್ರಿ ಸ್ಮರಣಾರ್ಥ ಪ್ರಶಸ್ತಿ – ರೇವಣ್ಣಸಿದ್ದಪ್ಪ ಜಿ.ಆರ್ ರವರ ‘ಬಾಳನೌಕೆಗೆ ಬೆಳಕಿನ ದೀಪ’ 

ಜಾನಪದ ತಜ್ಞ ದಿ.ಪ್ರೊ.ಡಿ.ಲಿಂಗಯ್ಯರವರ ಸ್ಮರಣಾರ್ಥ ಪ್ರಶಸ್ತಿ – ಆಶಾ ಜಗದೀಶ್‌ರವರ ‘ನಡು ಮಧ್ಯಾಹ್ನದ ಕಣ್ಣು’
ಕಥಾ ಸಂಕಲನ ವಿಭಾಗದಲ್ಲಿ 

ವಿಜಯೇಂದ್ರ ಬಂಧುಕಾರ ಸ್ಮರಣಾರ್ಥ ಪ್ರಶಸ್ತಿ – ತೇಜಸ್ವಿನಿ ಹೆಗೆಡೆರವರ ‘ಜೋತಯ್ಯನ ಬಿದಿರು ಬುಟ್ಟಿ ’

ಚುಟುಕ ಸಂಕಲನ ವಿಭಾಗದಲ್ಲಿ 

ಶ್ರೀಮತಿ ವನಜಾಕ್ಷಮ್ಮ ಅಂಗಡಿಹಟ್ಟಿ ಪುಟ್ಟಸ್ವಾಮಪ್ಪರವರ ಸ್ಮರಣಾರ್ಥ ಪ್ರಶಸ್ತಿ – ಶಿಲ್ಪ ಸಂತೋಷ್ ವಡ್ಡರಹಳ್ಳಿ ರವರ ‘ಮೌನಿಯ ಅಂತರಾಳ’

ವಚನ ಸಾಹಿತ್ಯ ವಿಭಾಗದಲ್ಲಿ 

ಗರಕಹಳ್ಳಿ ಚನ್ನಮಲ್ಲಪ್ಪ ಶಿವಬಸಪ್ಪ ಸ್ಮರಣಾರ್ಥ ಪ್ರಶಸ್ತಿ – ಡಾ.ಎಂ.ಬಿ.ಹೂಗಾರ ರವರ ‘ವಚನ ಸಾಹಿತ್ಯ’

ಮಹಿಳಾ ಸಾಹಿತ್ಯ ವಿಭಾಗದಲ್ಲಿ 

ಶ್ರೀಮತಿ ಗಿರಿಜಮ್ಮ ಮತ್ತು ಚಂದ್ರಪ್ಪ ಸ್ಮರಣಾರ್ಥ  ಪ್ರಶಸ್ತಿ – ಅಕ್ಷತಾ ಕೃಷ್ಣಮೂರ್ತಿ ರವರ  ‘ಇಸ್ಕೂಲು’

ಪುಸ್ತಕ ಪ್ರಶಸ್ತಿ ವಿಭಾಗದಲ್ಲಿ 

ಡಿ.ಸತ್ಯನಾರಾಯಣ ಸ್ಮರಣಾರ್ಥ ಪ್ರಶಸ್ತಿ – ಡಾ.ದಯಾನಂದ ಈ ನೂಲಿ ರವರ                                 ‘ಮರಳುಶಂಕರದೇವರು’

ಎ.ಎಸ್.ಬಿ.ಮೆಮೋರಿಯಲ್ ಟ್ರಸ್ಟ್ (ರಿ)  ಪುಸ್ತಕ ಪ್ರಶಸ್ತಿ – ಜಯಂತಿ ಚಂದ್ರಶೇಖರ್ ರವರ ‘ರಾಧಾ ಮಾಧವ’

ಮಕ್ಕಳ ಸಾಹಿತ್ಯ ವಿಭಾಗದಲ್ಲಿ 

ಶ್ರೀಮತಿ ಚನ್ನಮ್ಮ ಮತ್ತು ಸಿ.ಚಿಕ್ಕಣ್ಣ (ಮೈಸೂರು) ಸ್ಮರಣಾರ್ಥ ಪ್ರಶಸ್ತಿ – ನಿರ್ಮಲ ಸುರತ್ಕಲ್ ರವರ ‘ತ್ರಿವಿಕ್ರಮನಾದ ರೋಹನ’

ಆಧ್ಯಾತ್ಮಿಕ ಸಾಹಿತ್ಯ ವಿಭಾಗದಲ್ಲಿ ೧೦. ಪಿ.ಆರ್.ಸುಬ್ಬರಾವ್ ಸ್ಮರಣಾರ್ಥ ಪ್ರಶಸ್ತಿ (ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಪ್ರಾಯೋಜಿತ) –  ಡಾ.ಗುರುದೇವಿ ಉ.ಹುಲೆಪ್ಪನವರಮಠ ರವರ ‘ಚಿತ್ಪçಭೆ’

‍ಲೇಖಕರು avadhi

20 August, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading