ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆನಂದ್ ತೇಲ್ತುಂಬ್ಡೆಯವರೊಂದಿಗೆ ಒಂದು ಸಂವಾದ

ಆತ್ಮೀಯರೇ,

ಡಾ. ಆನಂದ್ ತೇಲ್ತುಂಬ್ಡೆಯವರು ಭಾರತದ ಜನಪರ ಚಿಂತಕರಲ್ಲಿ ಅತಿ ದೊಡ್ಡ ಹೆಸರು. ಅದರಲ್ಲೂ ಅವರು ಈ ದೇಶದ ಜಾತಿ ಪದ್ಧತಿ, ಅದರ ವಿಕಾಸ, ಜಾತಿ ಪದ್ಧತಿಯ ಸಮಕಾಲೀನ ರೂಪಾಂತರ, ಜಾಗತೀಕರಣ ಮತ್ತು ಹಿಂದೂತ್ವ ಅದನ್ನು ಪ್ರಭಾವಿಸುತ್ತಿರುವ ರೀತಿ, ಅಂಬೇಡ್ಕರ್ ಚಿಂತನೆಗಳು, ಮತ್ತು ಅಂಬೇಡ್ಕರೋತ್ತರ ದಲಿತ ಚಳವಳಿಯ ಸ್ಥಿಗತಿಗಳ ಬಗ್ಗೆ ಅಪಾರವಾದ ಅಧ್ಯಯನ ನಡೆಸಿ ದಾರಿದೀಪವಾಗಬಲ್ಲಂತ ಚಿಂತನೆಗಳನ್ನು ದೇಶದ ಮುಂದಿಡುತ್ತಿದ್ದಾರೆ. ಅವರ ಖೈರ್ಲಾಂಜಿ, ಹಿಂದೂತ್ವ ಮತ್ತು ದಲಿತ ಕಾರ್ಯಯೋಜನೆಯ ಮೇಲೆ ಅದರ ಪ್ರಭಾವ, ಅಂಬೇಡ್ಕರೋತ್ತರ ದಲಿತ ಚಳವಳಿ. ಅಂಬೇಡ್ಕರ್ ಮತ್ತು ಮುಸ್ಲಿಮರು ಎಂಬ ಪುಸ್ತಕಗಳು ಕನ್ನಡಕ್ಕೂ ಅನುವಾದವಾಗಿ ಅತ್ಯಂತ ಜನಪ್ರಿಯವಾಗಿವೆ.

ಡಾ. ಆನಂದ್ ತೇಲ್ತುಂಬ್ಡೆಯವರು ಇದೇ ಏಪ್ರಿಲ್ 14ರಂದು ಸ್ಫೂರ್ತಿಧಾಮದಲ್ಲಿ ವಾರ್ಷಿಕ ಅಂಬೇಡ್ಕರ್ ಸ್ಮಾರಕ ಭಾಷಣ ನೀಡಲು ಬೆಂಗಳೂರಿಗೆ ಬರುತ್ತಿದ್ದಾರೆ. ಈ ಸಂದರ್ಭವನ್ನು ಬಳಸಿಕೊಂಡು ಲಂಕೇಶ್ ಬಳಗವು ಇದೇ ಏಪ್ರಿಲ್ 15ರಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ಕರೂರ್ ವೈಶ್ಯ ಬ್ಯಾಂಕ್ ಯೂನಿಯನ್ ಕಟ್ಟಡದ ಆವರಣದಲ್ಲಿ ಅವರ ಭಾಷಣ ಮತ್ತು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿದೆ. ತಾವೆಲ್ಲರೂ ಇದರಲ್ಲಿ ಭಾಗವಹಿಸಬೇಕೆಂದೂ ತಮ್ಮ ಗೆಳೆಯ/ಗೆಳತಿಯರನ್ನೂ ಕರೆತರಬೇಕೆಂದೂ ಈ ಮೂಲಕ ಕೋರುತ್ತೇವೆ.

ಲಂಕೇಶ್ ಬಳಗ

ಮಾರುಕಟ್ಟೆ ಬಂಡವಾಳವಾದ ಮತ್ತು ಅಂಬೇಡ್ಕರ್ ಸಮಾಜವಾದ

ಡಾ. ಆನಂದ್ ತೇಲ್ತುಂಬ್ಡೆಯವರೊಂದಿಗೆ ಒಂದು ಸಂವಾದ

 

ದಿನಾಂಕ: 15-4-2011 (ಶುಕ್ರವಾರ)

ಸಮಯ: ಸಂಜೆ 5.30ಕ್ಕೆ

ಸ್ಥಳ: ಕರೂರ್ ವೈಶ್ಯ ಬ್ಯಾಂಕ್ ಯೂನಿಯನ್ ಆಫೀಸ್

(ಬಿಎಮ್ಎಸ್ ಮಹಿಳಾ ಕಾಲೇಜಿನ ಎದುರು,

ಬಸವನಗುಡಿ)

ಭಾಷಣಕಾರರು: ಡಾ. ಆನಂದ್ ತೇಲ್ತುಂಬ್ಡೆ

 

ಎಲ್ಲರಿಗೂ ಸ್ವಾಗತ

 

 

‍ಲೇಖಕರು G

13 April, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading