– ಬಿ.ಸುರೇಶ
ಆತ್ಮೀಯ ದಿನೇಶಣ್ಣ, ನಿಮ್ಮ ಲೇಖನ ಚೆನ್ನಾಗಿದೆ. (ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ) ಆದರೆ ನನ್ನ ಬಗ್ಗೆ ಮಾತಾಡುತ್ತಾ ಯಾಕೆ ಸುರೇಶ ಇಂತಹ ಚಳುವಳಿಯಲ್ಲಿ ಇಲ್ಲ ಎಂದಿದ್ದೀರಿ. ಅದಕ್ಕಾಗಿ ಈ ಪ್ರತಿಕ್ರಿಯೆ ಬರೆಯುತ್ತಾ ಇದ್ದೇನೆ.
೧. ನೈಸ್ ಕಾರಿಡಾರ್ ವಿರುದ್ಧ ಹೋರಾಟ ಮಾಡುತ್ತಿರುವ ಸಂಘಟನೆಯ ಜೊತೆಗೆ ನಾನು ನೇರವಾಗಿ ಭಾಗವಹಿಸುತ್ತಲೇ ಇದ್ದೇನೆ. ಅವರು ತಮ್ಮ ಚಳುವಳಿಯನ್ನು ನಡೆಸುತ್ತಾ ಇರುವ ಹಳ್ಳಿಗಳಲ್ಲಿ ನನ್ನ ಸಿನಿಮಾದ ಪುಕ್ಕಟೆ ಪ್ರದರ್ಶನ ಮಾಡುವುದಕ್ಕೂ ಅವಕಾಶ ಕೊಟ್ಟಿದ್ದೇನೆ. ಇದಲ್ಲದೆ ಅರ್ಬನ್ ಡೆವಲಪ್ಮೆಂಟ್ ಅಂಡ್ ಡಿಸೆಪ್ಲೇಸ್ಡ್ ಪೀಪಲ್ ಕುರಿತಂತೆ ಕೆಲಸ ಮಾಡುತ್ತಾ ಇರುವ ಎನ್ಜಿಒಗಳ ಜೊತೆಗೂ ನಾನು ಸಹಕರಿಸುತ್ತಾ ಇದ್ದೇನೆ.
೨. ಗದಗದ ಪೋಸ್ಕೋ ಚಳುವಳಿಯ ಬಂಧುಗಳ ಜೊತೆಗೆ ನಾನು ನೇರವಾಗಿ ಎರಡು ದಿನ ಹೋರಾಟದಲ್ಲಿ ಭಾಗವಹಿಸಿದ್ದೇನೆ. ದೂರದ ಕಾರಣವಾಗಿ ನಿರಂತರವಾಗಿ ಅವರೊಂದಿಗೆ ಭಾಗವಹಿಸಲು ಆಗಿಲ್ಲ. ಆದರೆ ಆ ಚಳುವಳಿಯ ಜನರ ಜೊತೆಗೆ ಸದಾ ಸಂಪರ್ಕದಲ್ಲಿದ್ದೇನೆ. ಈಚೆಗೆ ಆ ಚಳುವಳಿಯಲ್ಲಿ ಬಂದಿರುವ ತೊಂದರೆಗಳನ್ನು ಸ್ವತಃ ಬಲ್ಲೆ.
೩. ಬಳ್ಳಾರಿಯ ರೈತರ ಜಮೀನು ಕೊಳ್ಳುವ ಹುನ್ನಾರದ ಹಿಂದಿದ್ದ ಹೋರಾಟವು ಸಂಪೂರ್ಣ ಕುಸಿದಿದ್ದಾಗ ‘ಪುಟ್ಟಕ್ಕನ ಹೈವೇ’ ಸಿನಿಮಾದಿಂದಲೇ ಇಡೀ ಹೋರಾಟಕ್ಕೆ ಮರುಜೀವ ಬಂದಿದ್ದನ್ನು ಸ್ವತಃ ಕಂಡಿದ್ದೇನೆ. ಅಲ್ಲಿನ ರೈತರು ಮತ್ತವರ ಮನೆಯಲ್ಲಿ ಸ್ವತಃ ಉಂಡು, ಮಾತಾಡಿ ಆ ಸಮಸ್ಯೆಯನ್ನು ಅರಿಯುವ ಮೂಲಕವೇ ಆ ಹೋರಾಟದ ನಾಯಕರಾದ ರೆಡ್ಡಿ ಮುಂತಾದವರಿಗೆ ಸಹಕಾರ ನೀಡಿದ್ದೇನೆ. ಈ ಎಲ್ಲಾ ಕಾರಣಗಳಿಂದಾಗಿ ರೈತರ ಜಮೀನನ್ನು ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಳ್ಳಬಾರದು ಎಂದು ಹೈಕೋರ್ಟ್ ನೀಡಿದ ಆಜ್ಞೆಯನ್ನು ಓದಿ ಸ್ವತಃ ಸಂತೋಷಪಟ್ಟಿದ್ದೇನೆ. ಇನ್ನು ಮುಂದೆಯೂ ಆ ಚಳುವಳಿಯ ಜೊತೆಗೆ ನನ್ನನ್ನು ಗುರುತಿಸಿಕೊಳ್ಳಲು ಸಿದ್ಧನಿದ್ದೇನೆ.
೪. ಇದಲ್ಲದೆ ಬೆಂಗಳೂರಿನ ಪೌರಕಾರ್ಮಿಕರ ಸಂಘಟನೆ, ಊದುಬತ್ತಿ ಮತ್ತು ಬೀಡಿ ಕಾರ್ಮಿಕರ ಸಂಘಟನೆ ಹಾಗೂ ಸಿದ್ಧ ಉಡುಪು ತಯಾರಕರ ಸಂಘಟನೆಗಳಿಗೆ ಸಲಹೆಗಾರನಾಗಿದ್ದೇನೆ. ನನ್ನ ಈ ಎಲ್ಲಾ ಕೆಲಸಗಳನ್ನು ನಿರಂತರವಾಗಿ ಮಾಡುತ್ತಲೇ ನನ್ನ ವೃತ್ತಿಯಾದ ಸಿನಿಮಾ-ಟೆಲಿವಿಷನ್ ಮತ್ತು ಹವ್ಯಾಸವಾದ ರಂಗಭೂಮಿಯ ಕೆಲಸವನ್ನು ಮಾಡುತ್ತಾ ಇದ್ದೇನೆ.
ಇಷ್ಟೆಲ್ಲಾ ಮಾತು ಕೇವಲ ನಿಮ್ಮ –
“ಎಸ್ಇಜಡ್ಗಳ ವಿರುದ್ಧದ ಹೋರಾಟಕ್ಕೆ ಏಕೆ ಬರಲಿಲ್ಲ? ಕಾರಿಡಾರ್ ರಸ್ತೆಯಿಂದ ಸಂತ್ರಸ್ಥರಾದವರ ಪರವಾಗಿ ಯಾಕೆ ನಿಲ್ಲಲಿಲ್ಲ? ಸಂವೇದನೆ ಅಂದರೆ ಸಮಸ್ಯೆಗಳನ್ನು ಚಿತ್ರಿಸುವ ಸಿನಿಮಾ ಮಾಡುವುದಕ್ಕೆ, ಸಂವೇದನಾಶೀಲ ಲೇಖನ ಬರೆಯೋಕೆ ಮಾತ್ರವೇ? ಜನರ ಕಷ್ಟವನ್ನು ಬಂಡವಾಳ ಮಾಡಿಕೊಂಡು ರಾಷ್ಟ್ರ ಪ್ರಶಸ್ತಿ, ಹೆಸರು ಗಳಿಸುವುದು ಸೋಗಲಾಡಿತನವಲ್ಲವಾ? ಹೀಗೆಲ್ಲ ಪ್ರಶ್ನಿಸುತ್ತ ಹೋಗಬಹುದು. ಪ್ರಶ್ನೆಗಳಿಗೇನು ಬರವೇ ಇವತ್ತಿನ ಪ್ರಶ್ನೆಗಳ ಜಗತ್ತಿನಲ್ಲಿ?”
ಎಂಬ ಮಾತಿಗಾಗಿ ಹೇಳಬೇಕಾಯಿತು. ಉತ್ತರ ಉದ್ದ ಆಗಿದ್ದರೆ ಕ್ಷಮೆ ಇರಲಿ.
ಇಷ್ಟಾದರೂ ನನ್ನ ಕೆಲಸಗಳು ಸೋಗಲಾಡಿತನದ್ದು ಎಂದು ನೀವು ಕರೆಯುವುದಾದರೆ ನಿಮ್ಮ ಅಭಿಪ್ರಾಯಕ್ಕೆ ನಾನು ಗೌರವ ಕೊಡುತ್ತೇನೆ.
]]>






ಪ್ರಿಯ ಸುರೇಶ್ ನಿಮ್ಮ ತಾಳ್ಮೆ ಮತ್ತು ಸವಿನಯದ ಉತ್ತರಕ್ಕೆ ಅಭಿನಂದನೆಗಳು. ಒಮ್ಮೊಮ್ಮೆ Comunication Gap ನಿಂದಾಗಿ, ದಿನೇಶ್ ಬರೆದಿರಬಹುದು. ಇಂತಹ ಆರೋಗ್ಯಕರ ಚರ್ಚೆಗಳು ಕಾಣದಾಗಿರುವ ಇಂದಿನ ದಿನಗಳಲ್ಲಿ ನಿಮ್ಮ ಮತ್ತು ದಿನೇಶ್ ನಡುವಿನ ಬೌದ್ಧಿಕ ವಾಗ್ವಾದಗಳು ಹಲವು ಆಯಾಮಗಳಲ್ಲಿ ಓದುಗರಿಗೆ ಮಾರ್ಗದರ್ಶನವಾಗಿವೆ. ಇದಕ್ಕಾಗಿ ನಿಮ್ಮಿಬ್ಬರನ್ನು ನಾನು ಅಭಿನಂದಿಸುತ್ತೇನೆ.
ಜಗದೀಶ್ ಕೊಪ್ಪ, ಧಾರವಾಡ.
ಜಗದೀಶ್ ಕೊಪ್ಪ ಅವರ ಮಾತು ಹೆಚ್ಚು ಸಮಂಜಸ ಹಿರಿಯರು ಹೇಳಿದಂತೆ ಗಂದದ ಕೊರಡಿನ ಜೊತೆ ಗುದ್ದಡಿದರೆ ಮಯಿಗೆ ಗಂದದ ಪರಿಮಳ ಹತ್ತಿಕೊಳ್ಳುತ್ತೆ.ಪೂರ್ವಗ್ರಹ ಪೀಡಿತರಾಗದೆ ಸಂಯಮ ಹಾಗು ಘಮ್ಬೀರ ಆಲೋಚನೆ ಈ ಸಂವಾದ,ಚರ್ಚೆಗಳು ಹೊಸ ಹಾದಿಯತ್ತ ನಮ್ಮನ್ನು ಕೊಂದ್ಯ್ಯಲು ಸಾದ್ಯವಾಗುತ್ತದೆ, ಈ ಸ್ತರದ ಕ್ಘರ್ಚೆಗಳು ನಿರಂತರವಾಗಿರಲಿ ಅವಧಿ ಈ ನಿಟ್ಟಿನಲ್ಲಿ ತುಂಬಾ ಅರ್ಥಪೂರ್ಣ ಕೆಲಸ ಮಾಡುತ್ತಿದೆ ,
ರವಿ ವರ್ಮ ೯೯೦೨೫೯೬೬೧೪
ಬೀಸು ಸರ್, ನಿಮ್ಮ ಮೇಲಿನ ಹೆಮ್ಮೆ ಇನ್ನೂ ಹೆಚ್ಚಾಯಿತು. ಅಂದ ಹಾಗೆ off topic, ನೀವು ಎಲ್ಲರನ್ನೂ “ಅಣ್ಣಯ್ಯ, ಅಣ್ಣ” ಎಂದು ಹೇಳುವುದು ನನಗೆ ಇನ್ನೂಬ್ಬ ವ್ಯಕ್ತಿಯ ನೆನಪು ತಂದು ಕೊಡುತ್ತದೆ. ನೀವು ಯಕ್ಷಗಾನದ ಜನಪ್ರಿಯ ಕಲಾವಿದ ಬಳ್ಕೂರು ಕೃಷ್ಣಯಾಜಿಯವರ ಹೆಸರನ್ನ ಕೇಳಿರಬಹುದು. ಅವರು ಕೂಡ ಹೀಗೆಯೇ, ಎದುರಿನವರು ವಯಸ್ಸಿನಲ್ಲಿ ಎಷ್ಟೇ ಚಿಕ್ಕವರಿದ್ದರೂ ಎಲ್ಲರನ್ನೂ “ಅಣ್ಣಯ್ಯ, ಅಣ್ಣಯ್ಯ” ಎಂದೇ ಕರೆಯುವುದು. 😀
ಸೈದ್ಧಾಂತಿಕ ಹಿನ್ನೆಲೆ ಮತ್ತು ಸ್ಪಷ್ಟತೆ ಇಲ್ಲದ ಹೋರಾಟಗಳು, ಹಾಗೇ ಯಾವದೇ ಹೋರಾಟಕ್ಕಿಳಿಯದ ಸೈದ್ಧಾಂತಿಕ ಚರ್ಚೆಗಳು ಯಾವದೇ ಬದಲಾವಣೆಯನ್ನು ತರಲಾರವೆಂಬ ನಂಬಿಕೆ-ಅರಿವು ಇರುವ ನಾವೆಲ್ಲ ಈಗ ಮತ್ತೊಮ್ಮೆ ಹೊಸದಾರಿಗಳನ್ನು ಕಂಡುಕೊಳ್ಳಬೇಕಾದ ಅನಿವಾರ್ಯದಲ್ಲಿದ್ದೇವೆ. ಇದಕ್ಕೆ ಇಂತಹ ಚರ್ಚೆ ಖಂಡಿತ ಬೇಕು. ಸುರೇಶರ ಪಟ್ಟಕ್ಕನ ಹೈವೇಯೂ ಬೇಕು- ರೈತರಪರ ಹೋರಾಟವೂ ಬೇಕು. ಅಮೀರಖಾನ್- ಸೀತಾರಾಂ ಜೊತೆ, ಕೇಸರಿಹರವು- ರವಿಕೃಷ್ಣಾ ರೆಡ್ಡಿಗಳೂ ಬೇಕು. ಡಬ್ಬಿಂಗ್ ಬಗ್ಗೆ- ಅವಕಾಶನೀಡಿದರೆ ಎಲ್ಲ ಛಾನಲ್ ಗಳು ದಬ್ಬಂಗ್ ಧಾರಾವಾಹಿಗಳನ್ನು ತೋರಿಸಲು ಪ್ರಾರಂಭಿಸಿದರೆ ತಮ್ಮ ಗತಿಯೇನು ಎಂಬ ಕನ್ನಡ ಕಿರೆತೆರೆಯ ಕಲಾವಿದರ ತಂತ್ರಜ್ಞರ ಆತಂಕವನ್ನು ಅರ್ಥಮಾಡಿಕೊಳ್ಳಬಹುದು ಆದರೆ ಸಿನಿಮಾದವರು ಇದನ್ನು ಸವಾಲಾಗಿ ತೆಗೆದುಕೊಳ್ಳಬೇಕು.ಸದಾಕಾಲಕ್ಕೂ ದಬ್ಬಂಗ್ ಅನ್ನು ವಿರೋಧಿಸುವುದು ಸಾಧುವೂ ಅಲ್ಲ ಸಾಧ್ಯವೂ ಇಲ್ಲ ಅಲ್ಲವೇ .. ಏನಂತೀರಿ ಸುರೇಶ್
Reply