ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆತ್ಮಸಾಕ್ಷಿಯನ್ನು ಎಚ್ತರಿಸುತ್ತಿದ್ದ ಆಪ್ತಜೀವಕ್ಕೆ ನಮನ…

ಅಯ್ಯೋ…ಇದೆಂಥ ಸಂಕಟ…ನಮ್ಮೆಲ್ಲರ ಆತ್ಮಸಾಕ್ಷಿಯನ್ನು ಎಚ್ತರಿಸುತ್ತಿದ್ದ ಆಪ್ತಜೀವಕ್ಕೆ ನಮನ…

-ಗೀತಾ ವಸಂತ

ಅಯ್ಯೋ ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸುವ ಧ್ವನಿಯೊಂದು ಇಂತಹ ಸಂದಿಗ್ಧತೆಯಲ್ಲೇ ಕ್ಷೀಣಿಸಿತೆ. ಅತ್ಯಂತ ನೋವಿನ, ದು: ಖದ ಸಂಗತಿ.ಅಗಲಿದ ಡಿ.ಎಸ್.ನಾಗಭೂಷಣ ಅವರಿಗೆ ವಿದಾಯದ, ಅಭಿಮಾನದ ನಮನಗಳು. ಹೋಗಿ ಬನ್ನಿ ಸರ್. ನೀವು ನಿಮ್ಮ ಆದರ್ಶದಿಂದ, ಮೌಲಿಕವಾದ ಗಾಂಧಿ ಕಥನದಿಂದ ನಮ್ಮದೆಯೊಳಗೆ, ಈ ಮಡಿಲೊಳಗೆ ಸದಾ ಅಜರಾಮರ.

-ಅನಾರ್ಕಲಿ ಸಲೀಂ

ಅಪಾರ ಬದ್ಧತೆಯ, ಆದರ್ಶಗಳ ಬದುಕಿನ ಮೇಧಾವಿ ಮಿತ್ರನ ಕಣ್ಮರೆ…ನೋವಿನ ಸಂಗತಿ.

-ಕಾಳೇಗೌಡ ನಾಗವಾರ

ಕೊಳೆಯುತ್ತಿದ್ದ ಸಮಾಜಕ್ಕೆ ಸದಾ ಚುಚ್ಚುಮದ್ದು ನೀಡುತ್ತಿದ್ದ, ನಿರಂತರ ಬಂಡಾಯಗಾರ ನಾಗಭೂಷಣ ಅವರು ಕನ್ನಡ ಸಮಾಜದ ಜಾಗೃತ ಆತ್ಮಸಾಕ್ಷಿಯಂತೆ ಸದಾ ಎಚ್ಚರವಾಗಿದ್ದರು. ಸಾವಿರಾರು ಹೊಸ ಮನುಷ್ಯರನ್ಬು ಜಾಗೃತಗೊಳಿಸಿದ ನಿಜ ಸಮಾಜವಾದಿ.

-ಬಿ ಎಂ ಹನೀಫ್

‍ಲೇಖಕರು Admin

19 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading