ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಟ ಶುರು..

click kavite shilabalike

ಫೋಟೋ ಕೊಟ್ಟು ಕವಿತೆ ಕೇಳಿದ್ದೆ ತಡ ಕವಿತೆಗಳು ಸಾಲು ಸಾಲಾಗಿ ಬಂದು ‘ಅವಧಿ’ಯ ಬಾಗಿಲು ತಟ್ಟಿವೆ.

ಅದರಲ್ಲಿ ಆಯ್ದ ಕೆಲವನ್ನು ಇನ್ನು ಮುಂದೆ ಪ್ರಕಟಿಸುತ್ತಾ ಹೋಗುತ್ತೇವೆ 

ಆಮೇಲೆ ಗೊತ್ತಲ್ಲಾ- ಪ್ರಕಟವಾದ ಒಂದು ಬೆಸ್ಟ್ ಗೆ ಜೋಗಿ ಸ್ಪರ್ಶವಿರುತ್ತದೆ 

ಇಲ್ಲಿರುವ ಎರಡು ನಿಮ್ಮ ಓದಿಗಾಗಿ  

ಚಿದಂಬರ ನರೇಂದ್ರ ಭರ್ತೃಹರಿಯನ್ನು ನೆನಪಿಸಿಕೊಂಡಿದ್ದಾರೆ ಗೀತಾ ತಮ್ಮ ಲಹರಿ ನೆಚ್ಚಿದ್ದಾರೆ –

 

ಬಿ ಯು ಗೀತಾ 

ನಡು ಸಣ್ಣ
ತುಂಬು ನಿತಂಬ
ಬಳಿ ಸೆಳೆದುಕೊಳ್ಳಲು
ನೀಳ ಜಡೆ
ಸಾಕಷ್ಟೇ ನೀರೆ ನನಗೆ.

ಒಲ್ಲೆನ್ನುವ ಬಾಯಿರುವ
ಮುಕಾರವಿಂದ ಬೇಡ.
ಬಳಿ ಸೆಳೆದರೆ
ದೂರ ನೂಕುವ ಹಸ್ತ ಬೇಡ.

ಕಲ್ಲಾಗಿ ನಿಂತರೂ
ಕಾಲರಳಿಸಿದರೆ ಸಾಕು
ಹೆಣೇ ಸಾಕು
ಬೊಂಬೆಯಂತಹ ನಿನ್ನ ನಿಲುವು

ಮಾತನಾಡಬೇಡ.
ಚಲಿಸಬೇಡ.
ಸ್ಪಂದಿಸಲೂ ಬೇಡ.
ಸಹಕರಿಸು ಸಾಕು

chidambara narendra

ಚಿದಂಬರ ನರೇಂದ್ರ 

ನೆನಪಾದ ಭರ್ತೃಹರಿಯ ಕವಿತೆ-

ಮಡಿವಂತಿಕೆ ಬಿಟ್ಟು
ಹೇಳುತ್ತಿರುವೆ ಕೇಳಿ,
ಇದು ಗಂಡಸರ ನಡು-
ವಿನ ಅಂಗೀಕೃತ ಸತ್ಯ.
ಯಾವುದೂ ಹೊತ್ತಿಸುವುದಿಲ್ಲ ನಮ್ಮಲ್ಲಿ
ತುಂಬು ಜಘನದ ಹೆಣ್ಣಿನ
ನಡಿಗೆಯಷ್ಟು ಕಾವು.
ಇನ್ನಾವುದೂ ನೀಡುವುದಿಲ್ಲ
ಅಷ್ಟು ನೋವು.

‍ಲೇಖಕರು Admin

24 August, 2016

1 Comment

  1. hema

    sakkath geeta mam

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading