ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಟೋದಲ್ಲಿ, ಮೆಟ್ರೋದಲ್ಲಿ, ಪಾರ್ಲರ್ ನಲ್ಲಿ ರಂಗ 'ಕೀರ್ತಿ'

ಆಟೋದಲ್ಲಿ, ಮೆಟ್ರೋದಲ್ಲಿ, ಪಾರ್ಕ್ ನಲ್ಲಿ, ಹೋಟೆಲ್ ನಲ್ಲಿ.. ಎಲ್ಲೆಂದರಲ್ಲಿ ಅವತ್ತು ಕಂಡಿದ್ದು ಇವರು
‘ತಾಳ ತಂಬೂರಿ ಹಿಡಿ ಹಿಡಿ, ಜೊತೆಯಲಿ ನೀನು ನಡಿ ನಡಿ..’  ಎಂಬ ದಾಸರ ಗೀತೆಯಂತೆ ಈ ಮೂವರೂ ಗೆಜ್ಜೆ, ಡೋಲಕ್ ಹಿಡಿದು ಬೀದಿಗಿಳಿದೇಬಿಟ್ಟರು. ಆಟೋದಲ್ಲಿ ಹೋಗುವಾಗ ಡ್ರೈವರ್ ಅಣ್ಣನಿಗೂ ಖುಷಿ, ಇವರು ಮೆಟ್ರೋ ರೈಲು ಹತ್ತಿದಾಗ ಬೋಗಿಯಲ್ಲಿದ್ದವರೆಲ್ಲಾ ಖುಶ್. ಲಾಲ್ ಬಾಗ್, ಬ್ಯೂಗಲ್ ಪಾರ್ಕ್ ಹೊಕ್ಕರೆ ಎಲ್ಲೆಲ್ಲೂ ಸ್ಮೈಲಿ ಸ್ವಾಗತ..
ಎಂ ಟಿ ಆರ್ ನಲ್ಲಿ ತಿಂಡಿ ತಿನ್ನುತ್ತಿದ್ದವರು ಒಂದಷ್ಟು ಕ್ಷಣ ಕೈಗೆ ಬಾಯಿಗೆ ಕೆಲಸ ಕೊಡುವುದನ್ನೇ ಮರೆತರು
ನಂದಿನಿ ಮಿಲ್ಕ್ ಪಾರ್ಲರ್ ನಲ್ಲಿ ಬಾದಾಮಿ ಹಾಲಿನ ಬಿಸಿ ಕುಡಿಯುವಷ್ಟರಲ್ಲಿ ತಣ್ಣಗಾಗಿತ್ತು
ಹೌದು, ಈ ಮೂವರೂ ಅಂದರೆ- ಚಂದ್ರ ಕೀರ್ತಿ, ಬೃಂದಾ ವಿಕ್ರಮ್, ವಾಸುಕಿ ವೈಭವ್ ಹಾಗೆ ಸಿಕ್ಕ ಸಿಕ್ಕಲ್ಲಿ ನುಗ್ಗಿದ್ದು ರಂಗ ಪ್ರೀತಿ ಹರಡಲು..
ವಿಶ್ವ ರಂಗ ದಿನಾಚರಣೆ ಬಂದದ್ದೆ ತಡ ಇವರು ಕೂತಲ್ಲಿ ನಿಂತಲ್ಲಿ ರಂಗ ಗೀತೆಗಳನ್ನು ಹಾಡಿದರು
ರಂಗ ಗೀತೆಯ ಒಂದು ಝಲಕ್ ಮೂಲಕ ರಂಗ ನಾಟಕ ಹೇಗಿರುತ್ತದೆ ಎಂಬ ಹಕ್ಕಿ ನೋಟ ನೀಡಿಬಿಟ್ಟರು
ಖಂಡಿತಾ ನಾಟಕ ನೋಡೇ ನೋಡ್ತೀವಿ ಅಂತ ಭರವಸೆ ನೀಡಿದ ತಕ್ಷಣ ಖುಷಿಯಾಗಿ ಮತ್ತೊಂದೆಡೆಗೆ ಹೆಜ್ಜೆ ಹಾಕಿದರು
ಆಟೋ ಡ್ರೈವರ್ ಗಳು, ಸೆಕ್ಯುರಿಟಿ ಗಾರ್ಡ್ ಗಳು, ಜಾಗಿಂಗ್ ಮಾಡ್ತಾ ಇದ್ದವರು, ಬಿ ಟಿ ಎಸ್ ಪ್ರಯಾಣಿಕರು..  ಇವರೆಲ್ಲಾ ಈಗ ಈ ಮೂವರಿಗೂ ಫ್ರೆಂಡ್ಸ್ .. ಹಾಗಾಗಿ ರಂಗಭೂಮಿಗೂ ಫ್ರೆಂಡ್ಸ್..
BMTC bus
MTR
Namma Metro
Nandini Milk parlor
VAIBHAV, BRUNDA, CHANDRA KEERTHI (Right to left)

‍ಲೇಖಕರು Avadhi

31 March, 2016

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. ಋತಊಷ್ಮ

    ಅದ್ಭುತ ಪ್ರಯತ್ನ.

    • ಚಂದ್ರ ಕೀರ್ತಿ

      ಧನ್ಯವಾದಗಳು!!

  2. Sridhar

    ರಂಗಭೂಮಿ ನಿಂತ ನೀರಾಗದೆ, ಸದಾ ಹರಿಯುವ ಗಂಗೆಯಾಗಲಿ. ನಿಮ್ಮ ಈ ಪ್ರಯತ್ನ ನಿರಂತರವಾಗಿರಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading