ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಟದ ಮೂಲಕ ಪಾಠ

ಅಶೋಕ್ ಕುಮಾರ್ ಎ

‘ಕನ್ನಡ ಬ್ಲಾಗರ್ಸ್’ ನಿಂದ

arvindgupta

ಆಟದ ಮೂಲಕ ಪಾಠ ಹೇಳಿದರೆ, ಮಕ್ಕಳಿಗೆ ಕಲಿಕೆ ಶಿಕ್ಷೆಯಾಗದು ತಾನೇ? ಮಕ್ಕಳು ಸ್ವತ: ಸಣ್ಣ ಸಣ್ಣ ಪ್ರಯೋಗಗಳ ಮೂಲಕ ಕಲಿಯುವಂತಿದ್ದರೆ, ಕಲಿಕೆಯ ಮಜಾವೇ ಬೇರೆ. ಆದರೆ ಈ ಪ್ರಯೋಗಗಳಿಗೆ ದುಬಾರಿ ಪರಿಕರಗಳು ಬೇಕಾದರೆ, ಹೀಗೆ ಕಲಿಯುವುದು ಕನಸಿನ ಮಾತಾದೀತು. ಆದರೆ ಅಂತರ್ಜಾಲ ತಾಣವನ್ನು ನೋಡಿದರೆ, ಕಲಿಕೆಗೆ ನೆರವಾಗುವ ಆಟಿಕೆಗಳನ್ನು ತಯಾರಿಸುವುದು ಎಷ್ಟು ಸುಲಭ ಎನ್ನುವುದು ಸ್ಪಷ್ಟವಾದೀತು.

ವಿದ್ಯುತ್, ಮೋಟಾರು-ಜನರೇಟರುಗಳು, ಖಗೋಳ ಶಾಸ್ತ್ರ, ಜೀವಶಾಸ್ತ್ರ, ಗಣಿತ, ಗಾಳಿ ಮತ್ತು ನೀರು, ತಿರುಗುವ ಆಟಿಕೆಗಳು, ಹಾರುವ ಆಟಿಕೆಗಳು, ಕಸದಿಂದ ಆಟಿಕೆಗಳು ಹೀಗೆ ಹಲವಾರು ಗುಂಪಿಗೆ ಸೇರಿದ ಆಟಿಕೆಗಳನ್ನು ಅದು ಹೇಗೆ ಸುಲಭವಾಗಿ ಮತ್ತು ಅಗ್ಗವಾಗಿ ತಯಾರಿಸಬಹುದು ಎನ್ನುವ ವಿವರಗಳನ್ನಿಲ್ಲಿ ಚಿತ್ರ ಸಹಿತವಾಗಿ ನೀಡಲಾಗಿದೆ. ವಿವರಣೆಯೂ ಇದೆ. ಮಕ್ಕಳಿಗೆ ಶಾಲೆಯಲ್ಲಿ ನೀಡುವ ಪ್ರಾಜೆಕ್ಟ್ ಕೆಲಸಗಳನ್ನು ಮಾಡಿಸಲು ಸುಲಭವಾಗಿಸುವ ತಂತ್ರಗಳು ಇಲ್ಲಿವೆ.ಹಿರಿ-ಕಿರಿಯರಿಗೆ ಆಸಕ್ತಿ ಹುಟ್ಟಿಸುವ ಪ್ರಯೋಗಗಳನ್ನು ಮಾಡುವ ಸುಲಭ ವಿಧಾನ ಅರವಿಂದ ಗುಪ್ತರ ತಾಣದಲ್ಲಿ ಲಭ್ಯ.

ಐಐಟಿ ಖರಗ್‌ಪುರದಲ್ಲಿ ಇಂಜಿನಿಯರಿಂಗ್ ಡಿಗ್ರಿ ಮುಗಿಸಿದ ಅರವಿಂದ್‌ಗುಪ್ತಾರು ಪುಣೆಯ ಟೆಲ್ಕೋ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು. ಜಯಂತ್ ನಾರ್ಳೀಕರ್ ಅವರ ಪ್ರೋತ್ಸಾಹದೊಂದಿಗೆ ಮಕ್ಕಳಿಗೆ ಕಡಿಮೆ ಖರ್ಚಿನಲ್ಲಿ ಆಟಿಕೆ ತಯಾರಿಸುವುದು ಹೇಗೆನ್ನುವುದರತ್ತ ಚಿಂತಿಸಲು ತೊಡಗಿದ ಅರವಿಂದ್, ಈಗ ಅಂತಹ ನೂರಾರು ಆಟಿಕೆಗಳನ್ನು ಮಾಡುವುದು ಹೇಗೆನ್ನುವುದನ್ನು ಕಂದುಕೊಂಡಿದ್ದಾರೆ. ಹಲವಾರು ಪುಸ್ತಕಗಳನ್ನೂ ಬರೆದಿರುವ ಗುಪ್ತ,ತಮ್ಮ ತಾಣದಲ್ಲಿ ನೂರಾರು ಪುಸ್ತಕಗಳ ಕೊಂಡಿಗಳನ್ನೂ ಹಂಚಿಕೊಂಡಿದ್ದಾರೆ. ಅಗ್ಗದ ಮನೆ ನಿರ್ಮಾಣ ಮಾಡುವ ವಿಧಾನಗಳ ಬಗ್ಗೆ ಲಾರೀ ಬೇಕರ್ ಅವರು ಬರೆದಿರುವ ಪುಸ್ತಕಗಳೂ ಇಲ್ಲಿವೆ. ಇಂಗ್ಲಿಷ್ ಮಾತ್ರವಲ್ಲದೆ, ಮರಾಠಿ ಮತ್ತು ಹಿಂದಿ ಭಾಷೆಯ ಪುಸ್ತಕಗಳ ಕೊಂಡಿಗಳೂ ಇಲ್ಲಿವೆ. ಪುಸ್ತಕಗಳು ಡೌನ್‌ಲೋಡಿಗೂ ಲಭ್ಯ. ಬೇಕೆಂದರೆ ಮನಿ ಆರ್ಡರ್ ಕಳಿಸಿ, ಪುಸ್ತಕಗಳನ್ನು ತರಿಸಿಕೊಳ್ಳಬಹುದು. ಪುಣೆಯಲ್ಲಿ ಆಟಿಕೆ ತಯಾರಿಕಾ ಘಟಕವನ್ನೂ ಗುಪ್ತಾ ಅವರು ನಡೆಸಿಕೊಂಡು ಬರುತ್ತಿದ್ದಾರೆ.

ಈ ತಾಣದಲ್ಲಿ ಹಲವಾರು ವೀಡಿಯೋಗಳ ಕೊಂಡಿಗಳೂ ಇರುವುದು ಇನ್ನೊಂದು ವಿಶೇಷ. ಆಟಿಕೆಗಳನ್ನು ತಯಾರಿಸುವ ವಿಧಾನವನ್ನು ತೋರಿಸುವ ವಿಡಿಯೋ ಕ್ಲಿಪ್ಪಿಂಗ್‌ಗಳಿಲ್ಲಿ ಧಾರಾಳ ಇವೆ. ಜತೆಗೆ ಪರಿಸರ ಮತ್ತು ವಿಜ್ಞಾನದ ಬಗ್ಗೆ ಪ್ರಸಿದ್ಧ ವ್ಯಕ್ತಿಗಳ ಅನಿಸಿಕೆ, ಸಾಕ್ಷ್ಯಚಿತ್ರಗಳೂ ಇಲ್ಲಿವೆ.

‍ಲೇಖಕರು avadhi

1 July, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading