‘ನನ್ನೊಳಗಿನ ಹಾಡು ಕ್ಯೂಬಾ‘ ಬರೆದು ಒಂದಷ್ಟು ಸಮಯವಾಗಿತ್ತು ಅಷ್ಟೇ. ಈ ಪ್ರವಾಸ ಕಥನಕ್ಕಾಗಿ ನಾನು ನೋಟ್ಸ್ ಮಾಡಿಕೊಳ್ಳುವಾಗ ಇನ್ನಷ್ಟು ಮತ್ತಷ್ಟು ನನಗೆ ಗೊತ್ತಿಲ್ಲದ ಕ್ಯೂಬಾ ಗೋಚರಿಸಲಾರಂಭಿಸಿತು. ಅದರಲ್ಲಿ ಒಂದು ಇಡೀ ಜಗತ್ತು ಕ್ಯೂಬಾಗೆ ತೋರಿಸುತ್ತಿದ್ದ ಪ್ರೀತಿ. ಅಷ್ಟೇ ಅಲ್ಲ ಅದನ್ನು ವ್ಯಕ್ತಪಡಿಸಲು ಆರಿಸಿಕೊಳ್ಳುತ್ತಿದ್ದ ಮಾರ್ಗ. ಹಾಗಾಗಿ ನಾನು ಕ್ಯೂಬಾದೆಡೆಗಿನ ಈ ಸೌಹಾರ್ದ ಚಳವಳಿಯ ಬಗ್ಗೆಯೇ ಇನ್ನೊಂದು ಕೃತಿ ಬರೆಯಬೇಕು ಅನಿಸಿತು. ಅದಕ್ಕೆ ಕಾರಣ ಒಂದೆಡೆ ಕ್ಯೂಬಾವನ್ನು ಜಗತ್ತು ಹೇಗೆ ನೋಡುತ್ತಿದೆ ಎನ್ನುವುದಾದರೆ ಇನ್ನೊಂದು ಹೀಗೂ ಚಳವಳಿ ಮಾಡಬಹುದಲ್ಲಾ ಎಂದು ತೋರಿಸುವುದು.
ಅದು ಗೂಗಲ್ ಕಾಲವಲ್ಲ . ಒಂದು ಕ್ಲಿಕ್ ಗೆ ಸಾವಿರ ವಿಷಯ ಹೆಕ್ಕಿಕೊಂಡು ಕೂರಲು. ಹಾಗಾಗಿ ಸಿಕ್ಕ ಸಿಕ್ಕದ್ದನ್ನೆಲ್ಲಾ ಓದಲು ತೊಡಗಿದೆ. ಆಗಲೇ ನನಗೆ ಈ ಕೋರ್ಡಾ ಪರಿಚಯವಾಗಿದ್ದು . ಕೋರ್ಡಾ ಗೊತ್ತಾದರು ಎನ್ನುವ ಸಂತಸದ ಪಸೆ ಇನ್ನೂ ಆರಿರಲಿಲ್ಲ, ಆಗಲೇ ಅವರು ಇನ್ನಿಲ್ಲವಾದರು ಎನ್ನುವ ಸುದ್ದಿ ಬೆನ್ನತ್ತಿ ಬಂತು. ಆಗ ಬರೆದ ಲೇಖನ ಇದು. ನವಕರ್ನಾಟಕ ಪ್ರಕಾಶನದ ‘ಹೊಸತು‘ ಮಾಸಿಕದಲ್ಲಿ ಪ್ರಕಟವಾಯಿತು





0 Comments