ಉಷಾ ಕಟ್ಟೆಮನೆ
ನಿನ್ನೆ ’ಕೆಡ್ಡಸ’ದ ಎರಡನೆಯ ದಿನ. ತುಳುನಾಡಿನ ವಿಶಿಷ್ಟ ಆಚರಣೆಯಿದು.
ಭೂಮಿಯನ್ನು ಸ್ತ್ರೀಗೆ ಹೋಲಿಸಿದ ನಮ್ಮ ಪೂರ್ವಜರು, ಅವಳು ಕೂಡಾ ವರ್ಷಕ್ಕೊಮ್ಮೆ ರಜಸ್ವಲೆಯಾಗುತ್ತಾಳೆ ಎಂದುಕೊಂಡು ಆ ನಾಲ್ಕು ದಿನಗಳನ್ನು ಹಬ್ಬವನ್ನಾಚರಿಸುತ್ತಾರೆ.
ಆಕೆಯ ಋತುಸ್ನಾನ [ಸೋಮವಾರ]ದಂದು ಮನೆಯ ಅಂಗಳವನ್ನು ಸೆಗಣಿ ನೀರಿನಿಂದ ಸಾರಿಸಿ ಮಣೆಯ ಮೇಲೆ ಕಳಶವನ್ನಿರಿಸಿ, ಬಳೆ-ಕುಂಕುಮ,ಬಾಚಣಿಗೆಯನ್ನಿಟ್ಟು, ಎದುರಲ್ಲಿ ಮಾವು, ಹಲಸು ಸರಳಿ ಎಲೆಗಳನ್ನಿಟ್ಟು ಕುರ್ದಿ ನೀರನ್ನು ಸಿಂಪಡಿಸಿ, ಗರಿಕೆಯ ಹುಲ್ಲಿನಿಂದ ಭೂಮಾತೆಗೆ ಹಾಲನ್ನೆರೆದು, ಬಳಿಕ ಎಣ್ಣೆಯನ್ನು ಬಿಡುತ್ತಾರೆ.
ತುಳುನಾಡಿನಲ್ಲಿ ಹುಡುಗಿ ಋತುಮತಿಯಾದಾಗ ಮತ್ತುಕೆಡ್ಡಸದಲ್ಲಿ ’ನನ್ನೆರಿ’ ಎಂಬ ತಿಂಡಿ ಮಾಡುವುದು ಸಂಪ್ರದಾಯ.
ಈ ನಾಲ್ಕು ದಿನಗಳಲ್ಲಿ ಆಕೆಗೆ ಯಾವ ರೀತಿಯಲ್ಲೂ ನೋವಾಗಬಾರದೆಂದು ಯಾವುೇ ಕೃಷಿ ಚಟುವಟಿಕೆಗಳನ್ನು ನಡೆಸುವುಇದಿಲ್ಲ.
ಪುಷ್ಫವತಿಯಾದ ಭೂತಾಯಿ ಫಲವತಿಯಾಗಲು ಹೊರಟಾಗ ಮಕ್ಕಳು ಸಂಭ್ರಮ ಪಡುವ ಪರಿಯಿದು
]]>
ಆಕೆಯ ಋತುಸ್ನಾನ..
ನಿಮಗೆ ಇವೂ ಇಷ್ಟವಾಗಬಹುದು…





ಈ ಜಗತ್ತಿನಲ್ಲಿ ಎಸ್ತೆಸ್ತು ವಿಚಿತ್ರ, ವಿಭಿನ್ನ ಆಚರಣೆಗಳಿವೆ ,ನಿಜಕ್ಕೂ ಆಶ್ಚರ್ಯವಾಗುತ್ತದೆ ,ನಿಮ್ಮ ಈ ಸಂಪ್ರದಾಯದ ಬಗ್ಗೆ ನನಗೆ ತಿಳಿದಿರಲಿಲ್ಲ . ಅಥವಾ ಈವರೆಗಿನ ತುಳು ಪುಸ್ತಿಕೆಗಳಲ್ಲಿ ಕೂಡ ಇದರ ಬಗ್ಗೆ ಪ್ರಸ್ತಾಪವಿಲ್ಲ. ನಿಮ್ಮ ಹುಡುಕಾಟದ ಮನಸು,ಬದುಕಿನ ಬಗೆಗಿರುವ ಅದಮ್ಯ ಪ್ರೀತಿ ಇದೆಲ್ಲವನ್ನು ಗ್ರಹಿಸಲು, ಅನುಭವಿಸಲು ಸಾದ್ಯವಗಿದೇನೋ …………
ರವಿ ವರ್ಮ ಹೊಸಪೇಟೆ