ಕೆರೆಮನೆ ಶಿವಾನಂದ ಹೆಗಡೆ
**
ವಿದುಷಿ ಹಂಸಾ ಮೊಯ್ಲಿ ನಿನ್ನೆ ನಿಧನರಾದ ತೀವ್ರ ವಿಷಾದನೀಯ ಸುದ್ದಿ ಬಂತು.
ಅವರು ತಮ್ಮ ತಂದೆಯವರಾದ ಮಾನ್ಯ ವೀರಪ್ಪ ಮೊಯ್ಲಿ ಯವರು ಬರೆದ “ರಾಮಾಯಣ ಮಹಾನ್ವೇಷಣ” ದ ಒಂದು ಭಾಗ ‘ಅಹಲ್ಯಾಂತರಂಗ’ ಯಕ್ಷಗಾನ ಮತ್ತು ಭರತನಾಟ್ಯ ಈ ಎರಡು ನಾಟ್ಯ ಪ್ರಕಾರದಲ್ಲಿ ನಿರ್ದೇಶಿಸಲು 2001 ರಲ್ಲಿ ನಮ್ಮ ಯಕ್ಷಗಾನ ಕೇಂದ್ರಕ್ಕೆ ಬಂದಿದ್ದರು. ವಾರಗಟ್ಟಳೆ ಉಳಿದು ಅದನ್ನ ಸಿದ್ಧ ಮಾಡಿಕೊಳ್ಳಲಾಯಿತು. ಈ ವಿಶೇಷ ಪ್ರಯೋಗ ಕೆಲವು ಕಡೆ ನಡೆದು ಯಶಸ್ವಿಯೂ ಆಯಿತು.
ವಿದುಷಿ ಹಂಸಾ ಮೊಯ್ಲಿ ಸರಳ ಹಾಗೂ ಅತ್ಯಂತ ಪ್ರತಿಭಾವಂತೆ, ಅವರ ಅಗಲುವಿಕೆ ತುಂಬ ನೋವಿನದ್ದು. ಒಬ್ಬ ಒಳ್ಳೆಯ ಕಲಾವಿದೆಯನ್ನ ಕಳೆದು ಕೊಂಡಿದೆ ಕನ್ನಡ ನಾಡು. ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ.
ಅವರ ಆಗಲುವಿಕೆಯ ನೋವು ಸಹಿಸುವ ಶಕ್ತಿ ಅವರ ಕುಟುಂಬಕ್ಕೆ, ಮಿತ್ರರಿಗೆ, ಬಂಧುಗಳಿಗೆ ದೇವರು ನೀಡಲಿ ಎಂದು ಪ್ರಾರ್ಥನೆ. ‘ಅಹಲ್ಯಾಂತರಂಗ’ ದಲ್ಲಿ ಅಹಲ್ಯೆಯ ಅಂತರಂಗ ಹಂಸಾ (ಭರತನಾಟ್ಯ) ಅವರದ್ದು, ನನ್ನದು ಅಹಲ್ಯೆಯ ಬಹಿರಂಗ (ಯಕ್ಷಗಾನದಲ್ಲಿ ) ಲಕ್ಷ್ಮಣ –ಸಂಜಯ ಬೆಳೆಯೂರು ಹೀಗೆ ಸುಮಾರು ಒಂದು ಕಾಲು ಗಂಟೆಯ ಈ ರೂಪಕ ಅತ್ಯಂತ ಗಮನ ಸೆಳೆಯಿಯಿತು. ಇಂದು ಅಳಿದುಳಿದ ಭಾವ ಚಿತ್ರಗಳು ಒಂದಿಷ್ಟು ಸಾಂತ್ವನಕ್ಕೆ.
ಭಾವ ಚಿತ್ರಗಳು ಮಾತ್ರ ಇನ್ನು ನೆನಪಾಗಿ ಉಳಿಯಿತು…












0 Comments