
ಅಸ್ಕರಿ ಪ್ರಶಸ್ತಿ ಸಮಿತಿಯು 2011ನೇ ಸಾಲಿನ ಪ್ರಶಸ್ತಿಗಾಗಿ ಛಾಯಾಚಿತ್ರಗಳನ್ನು ಆಹ್ವಾನಿಸಿದೆ. ಇದೇ ಆಗಸ್ಟ್ 19ರ ವಿಶ್ವ ಛಾಯಾಚಿತ್ರ ದಿನಾಚರಣೆಯಂದು ನಗರದ ನೃಪತುಂಗ ಯುವಜನ ಕೇಂದ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಆಯ್ಕೆಯಾದ ಎರಡು ಅತ್ಯುತ್ತಮ ಛಾಯಾಚಿತ್ರಗಳಿಗೆ ತಲಾ 1500 ರೂಪಾಯಿ ನಗದು, ಟ್ರೋಫಿ ನೀಡಲಾಗುವುದು. ಮುವ್ವತ್ತೈದು ವರ್ಷಗಳ ಒಳಗಿನವರು ಮಾತ್ರ ಸ್ಪರ್ಧಿಸಲು ಅವಕಾಶ. ಅದಕ್ಕಾಗಿ ಹುಟ್ಟಿದ ದಿನಾಂಕದ ಸರ್ಟಿಫಿಕೇಟಿನ ಜೆರಾಕ್ಸ್ ಕೊಡಬೇಕಾಗುತ್ತದೆ. ಆಸಕ್ತರು ವರ್ಣಮಯ ಇಲ್ಲವೇ ಕಪ್ಪು-ಬಿಳುಪಿನ ಛಾಯಾಚಿತ್ರದ ನಾಲ್ಕು ಪ್ರತಿಗಳನ್ನು ಇದೇ ಆಗಸ್ಟ್ 15ರೊಳಗೆ ಕಳುಹಿಸಬಹುದು.
ಈ ಮೊದಲು ಈ ಸ್ಪರ್ಧೆಗೆ ಭಾಗವಹಿಸಿ ಪ್ರಶಸ್ತಿಯನ್ನು ಗೆದ್ದವರು ಮತ್ತೆ ಸ್ಪರ್ಧಿಸುವಂತಿಲ್ಲ.
ಸಂಪರ್ಕ ವಿಳಾಸ : H.Harish, Askary Awards 2011, No.35. 1st Main road, Vysya bank colony. BTM Layout. Bangalore-560076.
Mobile : 9448687595
ಬ್ಲಾಗ್, ಬಜ್, ಫೇಸ್‍ಬುಕ್, ಹವ್ಯಾಸಿ ಮತ್ತು ವೃತ್ತಿಪರ ಛಾಯಾಗ್ರಾಹಕ ಗೆಳೆಯರೆ, ಈ ಅವಕಾಶವನ್ನ ತಪ್ಪಿಸಿಕೊಳ್ಳಬೇಡಿ.
ಅರ್ಜಿ ಮತ್ತು ಮಾಹಿತಿಗೆ : http://www.askaryphotographyawards.com/






0 Comments