ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಷ್ಟು ಕ್ಯೂಟ್ ಆಗಿದ್ದ ಹುಡುಗ ಇಷ್ಟು ದೆವ್ವದ ಥರ ಆಗಿದ್ದು ಹೇಗಮ್ಮ?

ಮೈಕೆಲ್ ಎಂಬ ಮಾಂತ್ರಿಕನಿಗೆ ಕಾಡಿದ್ದು ಯಾವ ಪೀಡೆ?

michael-jackson

ಮೈಕೆಲ್ ಜಾಕ್ಸನ್ ತನ್ನ ಕೊನೆ ಶೋ ಗೆ ಬಂಗಾರದ ನೀರು ಎರೆದ ಪೆಟ್ಟಿಗೆಯಲ್ಲಿ ಲಾಸ್ ಎಂಜಲಿಸ್ಸಿನಲ್ಲಿ ತಯಾರಾಗ್ತಾ ಇದ್ದಾನೆ. ಅವನ ಮೆಮೊರಿಯಲ್ ಸರ್ವೀಸ್ ನೋಡಲಿಕ್ಕೂ ಟಿಕೆಟ್ಟುಗಳಿವೆಯಂತೆ…

ಈ ಮೂಳೆ-ರಹಿತ ಮಾಂತ್ರಿಕ ಸತ್ತ ದಿನದಿಂದ ಪೇಪರ್ರುಗಳ ತುಂಬ ಇವನ ಒಂದಲ್ಲ ಒಂದು ಪುರಾಣ : ಇವನ ಸಾವಿಗೆ ಹೊಣೆ ಯಾರು? ಅವನಿಗೆ ಸಾಲ ಎಷ್ಟಿತ್ತು? ಜುಲೈನಲ್ಲಿ ಆಗಬೇಕಿದ್ದ ಅವನ ಲಂಡನ್ ಟೂರ್ ಅವನ ಸಾಲದ ಹೊರೆಯನ್ನು ತಗ್ಗಿಸುತ್ತಿತ್ತೆ? ಸಾಯುವಾಗ ಅವನ ತಲೆಯಲ್ಲಿ ಎಷ್ಟು ಕೂದಲು ಉಳಿದಿತ್ತು? ಹೊಟ್ಟೆಯಲ್ಲಿ ಎಷ್ಟು ಔಷಧಿ ತುಂಬಿತ್ತು? ಅವನ ಮಕ್ಕಳ ನ್ಯಾನಿ ಅವನ ಬಗ್ಗೆ ಏನೇನು ಹೇಳ್ತಾಳೆ?… ಇತ್ಯಾದಿ.

ಇದೆಲ್ಲಾ ಓದಿ, ಓದಿ ಬೇಜಾರಾಗಿ ಅವನ ಕೆಲವು ಹಾಡುಗಳ ವಿಡಿಯೊ ಸುಮ್ಮನೆ ನೋಡುತ್ತಾ ಕೂತಿದ್ದೆ. ಜಾಕ್ಸನ್ ಚೆಹರೆ ಬದಲಾಗುತ್ತಾ ಹೋಗಿದ್ದನ್ನು ಬಿಂಬಿಸುವ ಬಿಬಿಸಿ ವೀಡಿಯೊ ನೋಡುತ್ತಿದ್ದಾಗ (http://news.bbc.co.uk/2/hi/entertainment/8121391.stm) ನನ್ನ ೯ ವರ್ಷದ ಮಗಳು ತಾನೂ ಕುತೂಹಲದಿಂದ ನನ್ನ ಜೊತೆ ನೋಡತೊಡಗಿದಳು. ಮುಗಿದ ಮೇಲೆ ತುಂಬಾ ಆಶ್ಚರ್ಯದಿಂದ “ಅಷ್ಟು ಕ್ಯೂಟ್ ಆಗಿದ್ದ ಹುಡುಗ ಇಷ್ಟು ದೆವ್ವದ ಥರ ಆಗಿದ್ದು ಹೇಗಮ್ಮ?” ಅಂತ ಕೇಳಿದಳು. ನನಗೆ ಥಟ್ಟನೆ ನೆನಪಾದದ್ದು ಕೆ.ವಿ.ಅಯ್ಯರ್ ಅವರ “ರೂಪದರ್ಶಿ”.

ಸಂಪೂರ್ಣ ಓದಿಗೆ ಭೇಟಿ ಕೊಡಿ: ಭಾಗೇಶ್ರೀ

‍ಲೇಖಕರು avadhi

6 July, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading