ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅವ್ವ’ ಯುವ ಸಾಹಿತ್ಯ ಪುರಸ್ಕಾರಕ್ಕೆ ಹಸ್ತಪ್ರತಿಗಳ ಆಹ್ವಾನ

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಕೆಂಚನಹಳ್ಳಿ ಗ್ರಾಮದ ಶ್ರೀಮಾನ್ ಲೇ. ನರಸಯ್ಯ ಅವರ ಸ್ಮರಣಾರ್ಥ, ಅವ್ವ ಪುಸ್ತಕಾಲಯದಿಂದ ಕೊಡಮಾಡುವ ‘ಅವ್ವ ಪ್ರಶಸ್ತಿ – 2021’ ಕ್ಕಾಗಿ ನಾಡಿನಾದ್ಯಂತ ಲೇಖಕರಿಂದ ಹಸ್ತಪ್ರತಿ ಹಾಗೂ ಕೃತಿಗಳನ್ನು ಆಹ್ವಾನಿಸಲಾಗಿದೆ.

ಅವ್ವ ಯುವ ಸಾಹಿತ್ಯ ಪುರಸ್ಕಾರ 2021 ಕ್ಕಾಗಿ ಹಸ್ತಪ್ರತಿಗಳ ಆಹ್ವಾನ :

* ಇನ್ನೂ ಒಂದು ಕೃತಿಯನ್ನೂ ಸ್ವತಂತ್ರವಾಗಿ ಪ್ರಕಟಿಸಿರದ 50 ವರ್ಷ ಒಳಗಿನ ಯಾರು ಬೇಕಾದರೂ ಅವ್ವ ಪ್ರಶಸ್ತಿಗಾಗಿ ಕನ್ನಡದಲ್ಲಿ ಹಸ್ತಪ್ರತಿ ಸಲ್ಲಿಸಬಹುದು.
* ಕನಿಷ್ಟ 70 ಪುಟಗಳನ್ನು ಮೀರಿದ ಕಥೆಗಳು, ಕವನಗಳು, ಕಾದಂಬರಿ, ಪ್ರವಾಸ ಕಥನ ಮತ್ತು ನಾಟಕ ಪ್ರಕಾರದ ಸಾಹಿತ್ಯವನ್ನು ಮಾತ್ರ ಡಿಟಿಪಿ/ಮೊಬೈಲ್ ನಲ್ಲಿ ಟೈಪ್ ಮಾಡಿ A4 ಅಳತೆಯಲ್ಲಿ ಪ್ರಿಂಟ್ ತೆಗೆದು ಕಳಿಸಬೇಕು.
* ಹಸ್ತಪ್ರತಿಯ ಜೊತೆ ನಿಮ್ಮ ಎಸ್.ಎಸ್.ಎಲ್.ಸಿ ಅಥವಾ ಆಧಾರ್ ಕಾರ್ಡಿನ ನಕಲು ಪ್ರತಿಯನ್ನು ಕಳುಹಿಸಬೇಕು. ಪ್ರತಿಯ ಮೇಲೆ ಸಂಪರ್ಕಿಸಬೇಕಾದ
ಫೋನ್ ನಂಬರನ್ನು ನಮೂದಿಸಿರಬೇಕು.
* ಹಸ್ತ ಪ್ರತಿಯು ಶೀರ್ಷಿಕೆಯನ್ನು ಒಳಗೊಂಡಿರಬೇಕು. ಕೈಬರಹದ ಹಸ್ತಪ್ರತಿಗಳನ್ನು ಪರಿಗಣಿಸುವುದಿಲ್ಲ. ಒಬ್ಬರು ಒಂದು ಹಸ್ತಪ್ರತಿಯನ್ನು ಮಾತ್ರ ಸಲ್ಲಿಸಬಹುದು.
* ಆಯ್ಕೆಯಾದ ಒಂದು ಹಸ್ತಪ್ರತಿಗೆ 2500 ರೂಗಳ ಪ್ರೋತ್ಸಾಹ ಬಹುಮಾನ ಹಾಗೂ ಪ್ರಶಸ್ತಿ ನೀಡಿ ಅಭಿನಂದಿಸಲಾಗುವುದು.

ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ 2021 ಕ್ಕಾಗಿ ಕೃತಿಗಳ ಆಹ್ವಾನ :

* 2016 ಜುಲೈ ಇಂದ 2021 ಜೂನ್ ಅಂತ್ಯದವರೆಗೆ ಪ್ರಕಟವಾಗಿರುವ ಕಥಾ ಸಂಕಲನ, ಕವನ ಸಂಕಲನ, ಕಾದಂಬರಿ, ಪ್ರವಾಸ ಕಥನ, ನಾಟಕ ಮತ್ತು ಇತರೆ ಯಾವುದೇ ಪ್ರಕಾರದ ಕನ್ನಡ ಸಾಹಿತ್ಯ ಕೃತಿಗಳನ್ನು ಪ್ರಶಸ್ತಿಗಾಗಿ ಕಳಿಸಬಹುದು.
* ಒಂದು ಕೃತಿಯ ಮೂರು ಪ್ರತಿಗಳು ಮತ್ತು ಎಸ್.ಎಸ್.ಎಲ್.ಸಿ ಅಂಕಪಟ್ಟಿ/ಆಧಾರ್ ಕಾರ್ಡ್ ನಕಲು ಪ್ರತಿಯೊಂದಿಗೆ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಬಹುದು. ಪಿ. ಎಚ್. ಡಿ ಪ್ರಂಬಂಧಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ.
* ಒಬ್ಬ ಲೇಖಕ ತನ್ನ ಇತರೆ ಮೂರು ಕೃತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಆದರೆ ಈ ಹಿಂದೆ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಗೆದ್ದಿರುವ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ.
* ಆಯ್ಕೆಯಾದ ಕೃತಿಗೆ 2500 ರೂ ಮೌಲ್ಯದ ಪುಸ್ತಕ ಬಹುಮಾನ ಹಾಗೂ ಪ್ರಶಸ್ತಿ ನೀಡಿ ಅಭಿನಂದಿಸಲಾಗುವುದು.

ಹಸ್ತ ಪ್ರತಿ ಹಾಗೂ ಕೃತಿಗಳನ್ನು ದಿನಾಂಕ ಸೆಪ್ಟೆಂಬರ್ 15 – 2021 ರ ಒಳಗೆ ಕೆಳಗೆ ನೀಡಲಾದ ವಿಳಾಸಕ್ಕೆ ರಿಜಿಸ್ಟರ್ ಫೋಸ್ಟ್ ಮಾಡಬೇಕು.
ಅವ್ವ ಪುಸ್ತಕಾಲಯ
#189, ಕೆಂಚನಹಳ್ಳಿ ಅಂಚೆ
ಹೆಚ್.ದುರ್ಗ ಹೋ, ಕುಣಿಗಲ್ ತಾ
ತುಮಕೂರು ಜಿ – 572123
ಮೊ : 8548948660

ಪ್ರಶಸ್ತಿಗಾಗಿ ಕಳಿಸಿದ ಹಸ್ತಪ್ರತಿ ಮತ್ತು ಕೃತಿಗಳನ್ನು ಹಿಂತಿರುಗಿಸುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ avvapustakaalaya@gmail.com ಗೆ ಬರೆಯಬಹುದು.

‍ಲೇಖಕರು Admin

25 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading