ಹೀಗೊಂದು ಕಥೆ
– ಪ್ರಸನ್ನ ಚಲಂ
ಅಂದು ನಿಜಕ್ಕೂ ಮಲಗಬೇಕಿತ್ತು.ಮನಸ್ಸಾಗಲಿಲ್ಲ.ಮನದ ತುಂಬಾ ಆ ಹುಡುಗನದೇ ನೆನಪು.ಬಟ್ಟೆ ಕೊಳಕಾಗಿದ್ದು ಮುಖತೊಳೆದು ಎಷ್ಟು ದಿನವಾಯಿತೋ ಎಂಬಂತೆ ಕಾಣುತ್ತಿದ್ದರೂ ಚಹರೆಯಲ್ಲಿ ಕಾಣುತ್ತಿದ್ದ ತಾಜಾತನ,ಅದು ಯಾವ ಸ್ಟೈಲಿನ ಕಟ್ಟಿಂಗೋ ಗೊತ್ತಾಗದ ಹೇರ್ ಸ್ಟೈಲ್ ಎಲ್ಲವೂ ಸ್ಪಷ್ಟವಾಗಿ ನೆನಪಿದೆ.
ಅವನಿಗೆ ನೀಟಾದ ಬಟ್ಟೆತೊಡಿಸಿ,ಕ್ರಾಫ್ ತೆಗೆದು ತಲೆ ಬಾಚಿದರೆ ಅವನು ನನ್ನ ಮಗನಿಗಿಂತ ಚೆನ್ನಾಗಿ ಕಾಣುವುದರಲ್ಲಿ ಸಂದೇಹವೇ ಇಲ್ಲ.ಬಂದವನು ಸೀದಾ ಸಿಗ್ನಲ್ಲಿನಲ್ಲಿ ತನ್ನ ಬಳಿ ಇದ್ದ ಬಟ್ಟೆಯಿಂದ ಗ್ಲಾಸ್ ಒರೆಸಿ ಸಿಗ್ನಲ್ ಮುಗಗಿಯುವುದರೊಳಗಾಗಿ ನನ್ನ ಬಳಿ ಬಂದು ಕೈಚಾಚಿದನಲ್ಲ ಆಗ ನನಗೆ ಕಾಣಿಸಿದ್ದು ನಾನು ಕೆಲಸ ಮಾಡಿದ್ದೇನೆ ದುಡ್ಡು ಕೊಡಿ ಎಂಬ ಹಕ್ಕಲ್ಲ.ನಿಮ್ಮನ್ನು ಕೇಳದೇ ನಿಮ್ಮ ಕೆಲಸವನ್ನು ಮಾಡಿದ್ದೇನೆ ಎಂಬ ಸಂಕೋಚವೂ ಅಲ್ಲ. ಅವನ ತಾಜಾ ತಾಜಾ ಕಣ್ಣುಗಳಲ್ಲಿ ಕಾಣುತ್ತಿದ್ದುದು ಕೇವಲ ದೈನ್ಯತೆಯಷ್ಟೇ.
ನಾನು ಇಂದು ಪ್ಲಾಟ್ ಖರೀದಿ ಮಾಡಿರಬಹುದು. ಕಾರು ತೆಗೆದುಕೊಂಡಿರಬಹುದು.ಅದರ ಹಿಂದೆ ನನ್ನ ಮನೆಯಲ್ಲಿರುವ ಅಪ್ಪ ಅಮ್ಮಮದಿರ ಕಷ್ಟ ಸಣ್ಣದೇನಿರಲಿಲಲ್ಲ.ಹೇಳಬೇಕೇಂದರೆ ಅರ್ಧ ಎಕರೆ ಜಮೀನಷ್ಟೇ ಇತ್ತು. ನನ್ನ ಮಗ ಓದಲೇಬೇಕೆಂದು ಅಪ್ಪ ಅಲ್ಲಿಇಲ್ಲಿ ಸಾಲ ಕೇಳುತ್ತಿದ್ದ.ಕಡೆಕಡೆಗೇ ಯಾರೂ ಹೇಳದಿದ್ದರೂ ಊರ ದೊಡ್ಡ ಗೌಡನ ತೋಟದಲ್ಲಿ ತೆಂಗಿನಗಿಣಿ ತೆಗೆಯುವುದು. ತೆಂಗಿನಮರದ ಸುತ್ತ ಗುದ್ದಲಿಯಿಂದ ಬಗೆದು ಗೊಬ್ಬರತುಂಬುವುದು ಮಾಡಿ ತೋಟದ ಯಜಮಾನನ ಮುಂದೆ ಎಷ್ಟಾದರೂ ಕೊಡಿ ಎಂದು ಕೈ ಚಾಚುತ್ತಿದ್ದ ದೃಶ್ಯವನ್ನು ತಾನು ಆಗ ನೋಡಿದ್ದರೂ ಈ ಹುಡುಗ ನನ್ನನ್ನು ಕೇಳದೇ ಗ್ಲಾಸ್ ಒರೆಸಿ ಕೈ ಚಾಚಿದಾಗ ಆ ಹಂಹುಡುಗನಲ್ಲಿ ನನ್ನಪ್ಪನೇ ಕಾಣುತ್ತಿದ್ದ.
ಸಿಗ್ನಲ್ ಕ್ಲಿಯರ್ ಆದ ತಕ್ಷಣ ಇಗ್ನಿಷನ್ ತಿರುವಿ ಆಹುಡುಗನ ಕೈಗೆ ಒಂದು ರೂಪಾಯಿಕೊಟ್ಟು ಬಂದುಬಿಟ್ಟೆ.ಹಾಗೆ ಬರದೇ ಹುಡುಗನನ್ನು ಕರೆದು ಕಾರಿನಲ್ಲಿ ಕೂರಿಸಿಕೋಂಡು ಸಮಸ್ಯೆಯೇನಿದೆ ಎಂದು ಕೇಳಿ ಬಗೆಹರಿಸಿದ್ದರೆ ಇಂದು ನಾನು ನಿದ್ದೆಯಿಲ್ಲದೇ ರಾತ್ರಿಗಳನ್ನು ಕಳೆಯಬೇಕಿರಲಿಲ್ಲ.
ನನಗೆ ಈಗ ಕೆಲಸವಿಲ್ಲದೇ ಹೋದರೂ ಮತ್ತೇ ಅದೇ ಸಿಗ್ನಲ್ ಬಳಿ ಹೋಗುತ್ತೇನೆ.ತಾಜಾತಾಜಾ ಕಣ್ಣಿನ ಹುಡುಗ ಸಿಗುತ್ತಾನಾ ಅಂತ ಹುಡುಕುತ್ತೇನೆ,ಆ ಹುಡುಗ ಸಿಗ್ಪ್ನಲ್ ಬಳಿ ಇಲ್ಲ.ಸಿಗ್ನಲ್ ಬಳಿ ಪಕ್ಕದ ಬದಿಗೆ ಕಾರನ್ನು ನಿಲ್ಲಿಸಿ ಅಪ್ಪನಿಗೆ ಪೋನ್ ಮಾಡಿದೆ.ದುಡ್ಡೇನೂ ಕಳುಹಿಸಬೇಡ.ಮುಂದಿನ ತಿಂಗಳು ಬೇಕಾದ್ರೆ ನಾನೇ ಕಾಗದ ಬರೀತಿನಿಅಚಿದ.ಯಾಕೋ ಅಪ್ಪನ ಜತೆ ಹೆಚ್ಚು ಮಾತನಾಡಲಾಗಲಿಲ್ಲ.ಪೋನಿಟ್ಟುಬಿಟ್ಟೆ.
ಹೊರಗೆ ಬಂದು ಕಾರು ನಿಲ್ಲಿಸಿದ್ದ ಜಾಗದಲ್ಲಿ ಬೇರೊಬ್ಬ ಹುಡುಗ ಬಾನೆಟ್ ಒರೆಸುತ್ತಿದ್ದ.






good one
ಇದು ಇಂದಿನ ಕಟು ವಾಸ್ತವ …ಅಸ್ತೆ ಅಲ್ಲ ನಾವು ರೂಪಿಸಿಕೊಂಡಿರುವ,ಕಟ್ಟಿಕೊಂಡಿರುವ ಕ್ರೂರ ,ಸಾಮಾಜಿಕ ಬದುಕಿನ, ಅರ್ಥಿಕ ಬದುಕಿನ ಕೈಗನ್ನಡಿ . ಶಾಲೆಗಳಲ್ಲೋ, ಆಟದ ಮೈದಾನದಲ್ಲೋ , ನಕ್ಕು ನಲಿಯಬೇಕಾದ,ಕಲಿಯಬೇಕಾದ, ಬದುಕು ಕಟ್ಟಿ ಕೊಳ್ಳಬೇಕಾದ ಬಾಲಕರು ಇವರು…ದಿನ ನಿತ್ಯ ನಾವು ಇಂತಹ ಬಾಲಕ,ಬಾಲಕಿಯರನ್ನು ಬಾರುಗಳಲ್ಲಿ, ಹೋಟೆಲ್ಗಳಲ್ಲಿ, ರಸ್ತೆಯಲ್ಲಿ,ರೈಳುನಿಲ್ದಾನಗಳಲ್ಲಿ,ಬಸ್ ನಿಲ್ದಾಣಗಳಲ್ಲಿ, ಅಸ್ತೆ ಏಕೆ, ನಮ್ಮ ನಿಮ್ಮ ಮನೆಗೆ ಹಾಲು ಹಾಕುವ,ಪತ್ರಿಕೆ ಹಾಕುವ. ಹೀಗೆ ಹೀಗೆ ಎಲ್ಲ ಕಡೆಗಳಲ್ಲೂ ನೋಡುತ್ತಿರುತ್ತೇವೆ… ಆದರೆ ನಮ್ಮ ಮನಸುಗಳು ಎಷ್ಟು ಜಡ್ಡು ಗಟ್ಟಿವೆ ಎಂದರೆ ,ನಾವು ಕಿಂಚಿತ್ತು ಅವರ ಬಗ್ಗೆ ಯೋಚಿಸುವುದು ಇಲ್ಲ….ಇನ್ನೊಂದು ಕಡೆ ,ಅವರ ಹೀನಾಯ ಸ್ತಿತಿ ನೋಡಿ ವಾಕರಿಸಿಕೊಳ್ಳುವ,ಅವರನ್ನು ಹೆಚ್ಹು ಹೆಚ್ಹು ಶೋಷಿಸುವ ಹಂತಕ್ಕೂ talupibittiddeve ಸರಕಾರ ಬಾಲಕಾರ್ಮಿಕರ ಬಗ್ಗೆ ಕಿಂಚಿತ್ತು … ಆಲೋಚಿಸದೆ ,ಕಾನೂನನ್ನು ಕೇವಲ ಕಾನುನಾಗಿ ಉಳಿಸಿಕೊಂದಿಯೇ ವಿನಃ ಅದರ ಬಗ್ಗೆ ಕಳಕಲಿಯನ್ನಗಲಿ, ಅನುಸ್ತನವನ್ನಗಲಿ ಮಾಡುವ ಆಲೋಚನೆ ಕೂಡ ಮಾಡುತ್ತಿಲ್ಲ…
ನನಗೆ ಈ ಹಿಂದೆ ಸಮುದಾಯ ಸಂಘಟನೆ ಹಾಡುತ್ತಿದ್ದ ‘ ಹಳ್ಳಿಗಾಡೋ ಹಸು ಗೂಸೇ’ …ಆ ಹಾಡು ನೆನಪು ಬರ್ತಿದೆ….
ಹಳ್ಳಿಗಾಡ ಹಸುಗೂಸೆ ,ಹಸು ಕಾಯೋ ಧೀರ ಬಾಲನೆ ,
ಹಾಲು ಕುಡಿದು ದಿನವೆಸ್ತಾಯಿತೋ …..
ಓ ಹಾಲುಗೆನ್ನೆಯ ಜೀತಗಾರ ,
ಜೀತಸೇರಿ ದಿನವೆಸ್ತಾಯಿತೋ ….
ಸಾಲು ಸಾಲದ ಚಿಂದಿ ಅಂಗಿ ,
ಬಿಸೋಗಾಳಿಗೆ ಪಕ್ಕಸರಿದು ,
ಚಳಿಗಾಳಿಗೆ bennukotteyaa ..
ಓ ಹಾಲು ಗೆನ್ನೆಯ ಜೀತಗಾರ ,
ಚಳಿಗೆ ನೀನು ಮುದುರಿ ಹೋದೆಯಾ ….
ಅಡವಿ ಯೊಳಗಣ ದುಸ್ತಪ್ರಾಣಿ,
ಗುಂಪುಗಟ್ಟಿ ಹಿಂದೆಬೀಳಲು, .
ಓಡಲಾರದೆ ಎಡವಿ ಬಿದ್ದೆಯಾ ..
ಓ ಹಾಲು ಗೆನ್ನೆಯ ಜೀತಗಾರ ,.
ನೆತ್ತರುಚಿಮ್ಮಿ ನೆಲಕೆ ಹರಿಯಿತೆ ….
ಓ ಹಾಲುಗೆನ್ನೆಯ ಜೀತಗಾರ ,
ಈ ಕಳ್ಳರ ಕೂಟ ಅಳಿಯಲಿ ಎನ್ನುವೆಯಾ ,
ಈ ಸುಲಿಗೆ ರಾಜ್ಯ ತೊಲಗಲಿ ಎನ್ನುವೆಯಾ…
ಎಸ,ಎಸ, ಹಿರೆಮಟ್ ,ಬಸಲಿಂಗಯ್ಯ ಜನಾರ್ಧನ್ ಇವರ ದ್ವನಿಯಲ್ಲಿ ಈ ಹಾಡು ಕೇಳಿ ನಾನು ಎಸ್ತೋಬಾರಿ … ಅತ್ತುಬಿಟ್ಟಿದ್ದೆ…..
ರವಿ ವರ್ಮ ಹೊಸಪೇಟೆ
Hadiyudda Bikariyaguthide baduku ‘KATHEGALIGE’
Dundu Aksharagalolagadaru Nayakaragi badukali beedi kanasugalu.