ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವನು ಓಮರ್ ಶರೀಫ್…

ಹಾಲಿವುಡ್  ಚಾರಿತ್ರಿಕ ನಟ ಓಮಾರ್ ಶರೀಫ್ ಇನ್ನಿಲ್ಲ

– ಎಚ್ ಎ ಪಾಟೀಲ್


ಇಂದು ಬೇಳಿಗ್ಗೆ ನನ್ನ ಪರಿಚಿತ ಸ್ನೇಹಿತರಾದ ರಮೇಶ ಕಾಮತರು ಫೋನ್ ಮಾಡಿ ಇಂದಿನ ದಿನ ಪತ್ರಿಕೆ ನೋಡಿದಿರಾ ಎಂದು ಕೇಳಿದರು. ಹೌದು ಏನು ವಿಶೇಷ ಎಂದು ಕೇಳಿದೆ. ಹಾಲಿವುಡ್ ನಟ ಓಮಾರ್ ಶಾರೀಫ್ ತೀರಿಕೊಂಡ ಸುದ್ದಿ ಬಂದಿದೆ ಎಂದರು. ಇಲ್ಲ ನಾನು ಗಮನಿಸಿಲ್ಲ ಎಂದೆ. ಒಂದು ಪುಟದಲ್ಲಿ ಸಣ್ಣದಾಗಿ ಸುದ್ದಿ ಪ್ರಕಟಗೊಂಡಿದೆ ಎಂದರು. ತಕ್ಷಣವೆ ಪತ್ರಿಕೆಯ ಪುಟ ತಿರುಗಿಸಿ ನೋಡಿದೆ. ಒಂದು ಸಣ್ಣ ಕಾಲಂನಲ್ಲಿ ಕೆಲ ಸಾಲುಗಳಲ್ಲಿ ಆತನ ನಿಧನದ ಸುದ್ದಿ ಪ್ರಕಟಗೊಂಡಿತ್ತು. ವೇಗದ ಇಂದಿನ ಹೊಸ ಯುಗದಲ್ಲಿ ಅದೊಂದು ಇತಿಹಾಸ ಸೇರಿ ಮರೆತು ಹೋದ ಹೆಸರು ಅದಾಗಿತ್ತು.. ಓಮಾರ್ ಶಾರೀಫ್ ಎಂದ ತಕ್ಷಣ ನನ್ನ ಕಣ್ಮುಂದೆ ಬಂದ ಚಿತ್ರಗಳು ‘ದಿ ಲಾರೆನ್ಸ್ ಆಫ್ ಅರೇಬಿಯಾ, ಡಾ.ಜಿವಾಗೋ, ಚೆಂಗಿಜ್ ಖಾನ್ ಮತ್ತು ಮೆಕನ್ನಾಸ್ ಗೋಲ್ಡ್ ಚಿತ್ರಗಳ ಅಭಿನಯದ ಆತನ ಪಾತ್ರಗಳು. ಅಷ್ಟು ಎತ್ತರವೂ ಅಲ್ಲದ ಅಷ್ಟು ಕುಳ್ಳಗೂ ಅಲ್ಲದ ಮಧ್ಯಮ ಗಾತ್ರದ ಶರೀರ ರೇಶಿಮೆ ನುಣುಪಿನ ಜೊಂಪೆ ಗೂದಲು ಹೊಳೆವ ಕಣ್ಣುಗಳ ಒಂದು ತರಹದ ಆಕರ್ಷಕ ವ್ಯಕ್ತಿತ್ವ ಕಣ್ಣೆದುರು ಬಂದು ನಿಂತಿತು.

1966 ನೇ ಇಸವಿಯ ಜನೇವರಿ ತಿಂಗಳ 26 ನೇ ತಾರೀಕು ಹುಬ್ಬಳ್ಳಿಯ ಮೋಹನ್ ಟಾಕೀಸ್ನಲ್ಲಿ 1962 ರಲ್ಲಿ ತೆರೆ ಕಂಡ ಡೆವಿಡ್ ಲೀನ್ ತಯಾರಿಕೆಯ ಅನೇಕ ಅಕಾಡೆಮಿ ಅವಾರ್ಡಗಳನ್ನು ಬಾಚಿ ಕೊಂಡಿದ್ದ ಅಗ್ಗಳಿಕೆಯ ಅತ್ಯಂತ ಯಶಸ್ವಿ ಚಿತ್ರ ಮರು ಪ್ರದರ್ಶನಕ್ಕೆ ಬಂದಿತ್ತು. ರಜೆಯ ದಿನವಾದ್ದರಿಂದ ಎಲ್ಲ ಥಿಯೆಟರ್ಗಳೂ ಹೌಸ್ಫುಲ್. ಹದಿನಾರು ವಾರಗಳು ಕಳೆದಿದ್ದರೂ ಕೆಲ ಹಿಂದಿ ಚಿತ್ರಗಳ ಟಿಕೆಟ್ಗಳು ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದ್ದವು. ಅವೆಲ್ಲ ನೋಡಿದ ಚಿತ್ರಗಳಾಗಿದ್ದು ದುಬಾರಿ ಬೆಲೆ ತೆತ್ತು ನೋಡುವ ಆಸಕ್ತಿ ಯಾರಿಗೂ ಇರಲಿಲ್ಲ. ಆಗಲೆ ಮಧ್ಯಾನ್ಹದ ಒಂದು ಗಂಟಯ ಸಮಯವನ್ನು ನಮ್ಮ ವಾಚ್ಗಳು ತೋರಿಸುತ್ತಿದ್ದವು. ನಿರಾಸೆಯಿಂದ ಕೊಪ್ಪಿಕರ್ ರಸ್ತೆಗುಂಟ ಸಾಗುತ್ತಿದ್ದ ನಮ್ಮ ಗುಂಪಿಗೆ ಮೋಹನ್ ಟಾಕಿಸಿನಲ್ಲಿ ನಡೆಯುತ್ತಿದ್ದ ಮೇಲಿನ ಚಿತ್ರ ನಮ್ಮೆಲ್ಲರ ಗಮನ ಸೆಳೆಯಿತು ಜನ ಸಂದಣಿ ಇರಲಿಲ್ಲ. ರಜೆಯ ದಿನವಾಗಿದ್ದರಿಂದ ಯಾವುದಾದರೂ ಚಿತ್ರ ನೋಡಲೇ ಬೇಕೆಂಬ ಇರಾದೆ ನಮ್ಮ ಅನೇಕ ಸ್ನೇಹಿತರದಾಗಿತ್ತು.
ಸುಮ್ಮನೆ ಮೋಹನ್ ಟಾಕೀಸು ಹತಿರ ಹೋದೆವು ಮೊದಲ ಶೋ 1 ಗಂಟೆಗೆ ಎಂದು ಪೋಸ್ಟರರನಲ್ಲಿ ನಮೂದಿಸಿದ್ದು ಯಾವುದೇ ಒಂದು ಚಿತ್ರ ನೋಡಿದರಾಯಿತು ಎಂಬ ಮನಸ್ಥಿತಿಯಲ್ಲಿದ್ದ ಅನೇಕರ ಆಯ್ಕೆ ದಿ ಲಾರೆನ್ಸ್ ಆಫ್ ಅರೇಬಿಯಾ ಚಿತ್ರ ಆಗಿತ್ತು.. ಆಗಲೆ ಚಿತ್ರ ಮಂದಿರದ ಎಲ್ಲ ಬಾಗಿಲುಗಳು ಮುಚ್ಚುತ್ತಿದ್ದವು. ಎರಡನೆ ದಜೇಯ ಟಕೆಟ್ ಪಡೆದು ಒಳ ನಡೆದೆವು. ಸಿನೆಮಾದ ಟೈಟಲ್ ಕಾರ್ಡ ಪರದೆಯ ಮೇಲೆ ಚಲಲಿಸುತ್ತಿತ್ತು. ಅರೇಬಿಯಾದ ಮರಳುಗಾಡಿನಲ್ಲಿ ಸೂರ್ಯೋದಯವಾಗುತ್ತಿತ್ತು. ಕ್ಷಣ ಕ್ಷಣಕ್ಕೂ ಬದಲಾಗುತ್ತಿದ್ದ ಮರಳುಗಾಡಿನ ಪರಿಸರ ಮರಳುಗಾಡಿಗೂ ಒಂದು ಸೌಂದರ್ಯವಿದೆ ಎಂಬುದನ್ನು ಡೆವಿಡ್ಲೀನ್ ಆ ಚಿತ್ರದ ಮೂಲಕ ತೋರಿಸಿದ್ದ. ಆ ಚಿತ್ರದಲ್ಲಿ ನಾಯಕಿ ಬಿಡಿ ಒಂದು ಹೆಣ್ಣು ಮುಖವೂ ಇರಲಿಲ್ಲ. ನಮಗೆಲ್ಲರಿಗೂ ಒಂದು ವಿಶಿಷ್ಟ ಸುಂದರ ಅನುಭವ ನೀಡಿದ ಬಹು ಕಾಲ ನೆನಪಿನಲ್ಲುಳಿದು ಕಾಡಿದ ಇಂದಿಗೂ ಕಾಡುತ್ತಿರುವ ಚಿತ್ರ ಅದಾಗಿತ್ತು. ಅದರಲ್ಲಿ ಗ್ರಗರಿ ಪೆಕ್ ನಾಯಕನ ಪಾತ್ರವಾದರೆ ಓಮಾರ್ ಶಾರೀಫ್ನದು ಸಪೋರ್ಟಿಂಗ್ ಪಾತ್ರವಾಗಿತ್ತು.. ಅದು ಆತನ ಮೊದಲ ಹಾಲಿವುಡ್ ಚಿತ್ರವಾಗಿತ್ತು. ಈ ಚಿತ್ರದ ಆ ರೋಲ್ಗಾಗಿ ಡೆವಿಡ್ ಲೀನ್ ಭಾರತಕ್ಕೆ ಬಂದಾಗ ಮೊದಲು ದಿಲೀಪ ಕುಮಾರ್ನನ್ನು ಸಂಪಕರ್ಿಸಿದ್ದನಂತೆ ಆದರೆ ಆತ ಒಪ್ಪದಿದ್ದಾಗ ಈಜಿಪ್ಸಿಯನ್ ನಟ ಓಮಾರ್ಗೆ ಆ ಪಾತ್ರ ದಕ್ಕಿತ್ತು. ಅದನ್ನು ಆತ ಸಮರ್ಥವಾಗಿ ಬಳಸಿಕೊಂಡು ಹೆಸರು ಮಾಡಿದ. ಅದರಲ್ಲಿನ ಅಭಿನಯಕ್ಕಾಗಿ ಆತನಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮತ್ತು ನ್ಯೂ ಸ್ಟಾರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಪಡೆದ. ಅದೇ ವರ್ಷ ಆ ಪಾತ್ರಕ್ಕಾಗಿ ಅಕಾಡೆಮಿ ಅವಾರ್ಡಗಾಗಿ ಹೆಸರಿಸಲ್ಪಟ್ಟಿದ್ದು ಆತನ ಅಗ್ಗಳಿಕೆಯಾಗಿತ್ತು.
ಮುಂದೆ 1965 ರಲ್ಲಿ ಅದೇ ಡೆವಿಡ್ಲೀನ್ ತಯಾರಿಕೆಯ ಎಂಜಿಎಂ ಲಾಂಛನದಲ್ಲಿ ತಯಾರಾಗಿ ತೆರೆಕಂಡ ಖ್ಯಾತ ರಶಿಯನ್ ಕಾದಂಬರಿಕಾರ ಬೋರಿಸ್ ಪ್ಯಾಸ್ಟರ್ನಾಕ್ನ ರಶಿಯಾದಲ್ಲಿ ನಿಚೇಧಿಸಲ್ಪಟ್ಟಿದ್ದ ಕೃತಿಯಾಧಾರಿತಚಿತ್ರ ಡಾ.ಜಿವಾಗೊ ಚಿತ್ರದಲ್ಲಿ ಓಮಾರ್ನಿಗೆ ನಾಯಕನ ಪಾತ್ರ ಕೊಡಲಾಗಿತ್ತು. ಆತನಿಗೆ ನಾಯಕಿಯಾಗಿ ನಟಿಸಿದವಳು ನೀಲಿಗಂಗಳ ಕೆಂಗೂದಲಿನ ಸುಂದರ ನಟಿ ಜ್ಯೂಲಿ ಕ್ರೈಸ್ತ್ ಎಂಬ ಖ್ಯಾತ ನಟಿ. ಈ ಚಿತ್ರದ ನಾಯಕ ಡಾ.ಯೂರಿ ಜಿವಾಗೋ ಪಾತ್ರದಲ್ಲಿ ನಟಿಸಿದವನೀತ. ಇದು ಕವಿ ಮತ್ತು ವೈದ್ಯನ ಪಾತ್ರವಾಗಿದ್ದು ಅದರಲ್ಲಿ ಸಮರ್ಥ ಅಭಿನಯ ಈತನದಾಗಿತ್ತು..ಸತ್ವಪೂರ್ಣ ಕಥೆ ಸಂಭಾಷಣೆ ಕಾವ್ಯಾತ್ಮವಾದ ಕಥಾ ನಿರೂಪಣೆ ಹಿಮಾಚ್ಛಾದಿತ ಸೈಬೀರಿಯಾದ ಸುಂದರವಾದ ಕಾಡಿನ ದೃಶ್ಯ ಸಂಯೋಜನೆ ಮಾರಿಸ್ ಜಾರ್ನ ಸುಮಧುರ ಸಂಗೀತ ಇದೊಂದು ಯಶಸ್ವಿ ಚಿತ್ರವಾಗಿ ಹೆಸರು ಮಾಡಿತ್ತು. ಇದರಲ್ಲಿನ ಅಭಿನಯಕ್ಕಾಗಿ ಓಮಾರ್ ಮತ್ತು ಜ್ಯೂಲಿ ಕ್ರೈಸ್ತ್ ಅತ್ಯುತ್ತಮ ನಟ ಮತ್ತು ನಟಿಯರೆಂದು ಅಕಾಡೆಮಿ ಪಶ್ರಶ್ತಿಗೆ ಹೆಸರಿಸಲ್ಪಟ್ಟಿದ್ದು ಪ್ರಶಸ್ತಿ ಪಡೆದವಳು ಜ್ಯೂಲಿ ಮಾತ್ರ. ಒಟ್ಟು ಹತ್ತು ಅಕಾಡೆಮಿ ಪ್ರಶಸ್ತಿಗಳನ್ನು ಈ ಚಿತ್ರ ಪಡೆಯಿತು. ಆದರೆ ಓಮಾರ್ಗೆ ಅಕಾಡೆಮಿ ಪ್ರಶ್ತಿ ಕೈತಪ್ಪೊಇದರೂ ಗೋಲ್ಡನ್ ಗ್ಳೊಬ್ ಆತನ ಆಭಿನಯದ ಅತ್ವವನ್ನು ಗುರುತಿಸಿ ಪ್ರಶಸ್ತಿ ನೀಡಿತು. ಅದೇ ವರ್ಷ ಇನ್ನೊಂದು ಹಾಲಿವುಡ್ ಚಿತ್ರ್ ಚೆಂಗೀಜ್ಖಾನ್ ಚಿತ್ರದಲ್ಲಿ ಮಂಗೋಲಿಯಾದ ವೀರ ಸಾಹಸಿ ಆರ್ಭಟದ ಯೋದನೆಂದು ಕರೆಯ;ಪಟ್ಟಿದ್ದ ಚೆಂಗೀಜ್ಖಾನ್ನ ಪಾತ್ರದಲ್ಲಿ ಅಭಿನಯಿಸಿದ. ಈತನ ಇನ್ನೊಂದು ಯಶಸ್ವಿ ಹಾಲಿವುಡ್ ಚಿತ್ರ 1969 ರಲ್ಲಿ ತೆರೆ ಕಂಡು ಯಶಸ್ಸು ಪಡೆದ ಚಿತ್ರ ಮೆಕನ್ನಾಸ್ ಗೋಲ್ಡ್. ಇದರಲ್ಲಿ ಈತನದು ಖಳನ ಪಾತ್ರವಾಗಿದ್ದರೆ ಗ್ರೆಗರಿ ಪೆಕ್ ನಾಯಕ ನಟನಾಗಿ ಅಭಿನಯಿಸಿದ್ದ. ಇವಲ್ಲದೆ ಈತ ಇನ್ನೂ ಕೆಲವು ಚಿತ್ರಗಳಲ್ಲಿ ನಟಿಸಿದ.

ಇಂತಹ ಈ ಬಹು ಪ್ರತಿಭೆಯ ನಟ 10.4.1932 ರಂದು ಇಜಿಪ್ತಿನ ಅಲೆಕ್ಝಾಂಡ್ರಿಯಾದಲ್ಲಿ ಜನಿಸಿದ. ಈತನ ತಂದೆಯ ಹೆಸರು ಜೋಸೇಫ್ ಫಾರೋತ್ ಜಾಹಲ್ ಮೂಲದವನಾಧ ಈತ ಮರ ಮುಟ್ಟುಗಳ ವ್ಯಾಪಾರಿಯಾಗಿ ಇಜಿಪ್ತನಲ್ಲಿ ಇದ್ದ. ಈತನಿಗೆ ಇಜಿಪ್ತ ದೊರೆ ಫಾರೂಖ್ ಜೊತೆಗೆ ಪರಸ್ಪರರ ಮನೆಗಳಿಗೆ ಹೋಗಿ ಬರುವಷ್ಟು ಸ್ನೇಹ ಸಂಬಂಧ ಈ ಎರಡೂ ಕುಟುಂಬಗಳ ಮಧ್ಯೆ ಇತ್ತು. 1952 ರಲ್ಲಿ ದೊರೆ ಸಾಯುವವರೆಗೂ ಈ ನಿಕಟ ಬಾಂಧವ್ಯವಿತ್ತು. ಈತ ಅಲೆಕ್ಝಾಂಡ್ರಿಯಾಧ ವ್ಹಿಕ್ಟೋರಿಯಾ ಕಾಲೇಜಿನಲ್ಲಿ ಮ್ಯಾಥ ಮ್ಯಾಟಿಕ್ಸ್ ಮತ್ತು ಫಿಸಿಕ್ಸ್ಗಳಲ್ಲಿ ಪದವಿ ಪಡೆದ. ಗ್ರೀಕ್ ಕೆಥೋಲಿಕ್ ಧರ್ಮದ ಈತ 1955 ರಲ್ಲಿ ಮುಸ್ಲಿಮ್ ಧರ್ಮಕ್ಕೆ ಮತಾಂತರಗೊಂಡ. ಮುಂದೆ ಈತ ಇಜಿಪ್ಸಿಯನ್ ಮೂಲದ ನಟಿ ಫಾತೆಂ ಹಮಾಮ್ಳನ್ನು ಪ್ರೀತಿಸಿ ಮದುವೆಯಾದ. ನಟನಾ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿ ಅನೇಕ ಇಜಿಪ್ಸಿಯನ್ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ. ಅನೇಕ ರೊಮ್ಯಾಂಟಿಕ್ ಚಿತ್ರಗಲ್ಲಿ ತನ್ನ ಹೆಂಡತಿ ಜೊತೆಗೆ ಇಜಿಪ್ಸಿಯನ್ ಚಿತ್ರಗಳಲ್ಲಿ ಹೆಸರು ಪಡೆದ. ಇವರ ದಾಂಪತ್ಯಕ್ಕೊಂಡು ಗಂಡು ಮಗುವಿದ್ದು ಆತನ ಹೆಸರು ತಾರೆಕ್ ಅಲ್ ಶರೀಫ್. ಈತನ ಹೆಂಡತಿ 1974 ರಲ್ಲಿ ಇಲ್ಲವಾದಳು. ಒಮಾರ್ ಕೊನೆಯ ತನಕ ಈ ತನ್ನ ಮಗನ ಜೊತೆಗೆಯೆ ಇದ್ದದ್ದು ಇಂದಿನ ದಿನಮಾನಗಳಿಗೆ ಹೋಲಿಸಿದ್ದಲ್ಲಿ ಸಂತಸ ಪಡುವಂತಹುದೆ ಎನ್ನಬಹುದು. ಈತನಿಗೆ ಇಂಗ್ಲೀಷ್ ಅಲ್ಲದೆ ಫ್ರೆಂಚ್, ಗ್ರೀಕ್, ಇಟಾಲಿಯನ್, ಸ್ಪ್ಯಾನಿಶ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಪರಿಣಿತಿಯಿತ್ತು ಎನ್ನುವುದು ಹೆಮ್ಮೆ ಪಡಬೇಕಾದ ಸಂಗತಿ. ಈತ ಇಜಿಪಿಯನ್ ಮತ್ತು ಹಾಲಿವುಡ್ ಚಿತ್ರಗಳಲ್ಲಿ ಅಲ್ಲದೆ ಅನೇಕ ಟೆಲಿವಿಜನ್ ಚಿತ್ರಗಳಲ್ಲಿ ಸಹ ನಟಿಸಿ ಹೆಸರು ಮಾಡಿದ. 2015 ನೇ ವರ್ಷ ಆತ ಅಲ್ಜಮೀರ್ ಕಾಯಿಲೆಯಿಂದ ಬಳುತ್ತಿದ್ದು ಆತನ ನೆನಪುಗಳು ಅಸ್ಪಷ್ಟವಾಗಿರುತ್ತಿದ್ದವು. ಈ ದಿನ ತನ್ನ ಸಮಸ್ತ ಬದುಕಿಗೆ ವಿದಾಯ ಹೇಳಿ ಕೈರೋದ ಆಸ್ಪತ್ರೆಯಲ್ಲಿ ಹೃದಯ ಸ್ತಂಭದಿಂದ ಮೃತ ಪಟ್ಟಿರುತ್ತಾನೆ. ಆತನ ಅರ್ಥಪೂರ್ಣ ಬದುಕಿಗೊಂದು ವಿದಾಯ ಹೇಳೋಣ.
 

‍ಲೇಖಕರು G

15 July, 2015

8 Comments

  1. ಲಕ್ಷ್ಮೀಕಾಂತ ಇಟ್ನಾಳ

    ಹೆಚ್ ಎ ಪಾಟೀಲ್ ಸರ್, ಓಮರ್ ಶರೀಫನ ಬದುಕಿನ ಸಾಧನೆಯ ನೋಟ ಮೆಚ್ಚುಗೆಯಾಯಿತು. ಅವನೊಬ್ಬ ಮಹಾನ್ ಕಲಾವಿದ. ಮೆಕಾನಾಸ್ ಗೋಲ್ಡ್ ನೋಡಿದ್ದೆ. ಅವನ ಇತರೆ ಚಿತ್ರಗಳ ಬಗ್ಗೆಯೂ ಕೇಳಿದ್ದೆ. ಹುಬ್ಬಳ್ಳಿಯ ಅಂದಿನ ದಿನಮಾನಗಳಲ್ಲಿ, ಉತ್ತರಕರ್ನಾಟಕದ ಯುವಜನಾಂಗಗಳ ಲಕ್ಷುರಿಯೆಂದರೆ ಹುಬ್ಬಳ್ಳಿಯ ಐಷಾರಾಮಿ ಚಿತ್ರಮಂದಿರಗಳಲ್ಲಿ ಚಿತ್ರವೊಂದನ್ನು ನೋಡುವುದು. ಅದೊಂದು ಜೀವಮಾನವೂ ನೆನಪಿಡುವ ಸಂಗತಿಯೇ ಆಗಿತ್ತಲ್ಲವೇ ಸರ್. ಒಮರ್ ನೊಂದಿಗೆ ಅಂದಿನ ನೆನಪುಗಳನ್ನು ದಾಖಲಿಸುತ್ತ ಹಂಚಿಕೊಂಡಿರುವುದು ಮೆಚ್ಚುಗೆಯಾಯಿತು. ಒಮರ್ ಶರೀಫ್ ಗೆ ನನ್ನದೊಂದು ನಮನ. ಅವನ ಆತ್ಮ ತಣ್ಣಗಿರಲೆಂದು ಪ್ರಾರ್ಥನೆ ನನ್ನದೂ ಈ ಸಂದರ್ಭದಲ್ಲಿ. ನಮಸ್ಕಾರ.

  2. Hanumanth Ananth Patil

    ಇಟ್ನಾಳರಿಗೆ ವಂದನೆಗಳು ಲೇಖನದ ಮೆಚ್ಚುಗೆಗೆ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.

  3. Palahalli Vishwanath

    ಲೇಖನಕ್ಕೆ ಧನ್ಯವಾದಗಳು ! ಝಿವಾಗೋ ಒ೦ದು ರೀತಿಯ ಕಾಡಿಸುವ ಚಿತ್ರ. ೧೯೬೫/೬೬ರಲ್ಲಿ ಮು೦ಬಯಿಯಲ್ಲಿ ನೋಡಿದ ನೆನಪು. ನಾನು ಇನ್ನೂ ಹಿಮವನ್ನು ನೋಡಿರಲಿಲ್ಲ, ಅನುಭವಿಸಿರಲಿಲ್ಲ. ಝಿವಾಗೋ ಚಿತ್ರದಲ್ಲಿ ಹಿಮವಿಲ್ಲದ ದೃಶ್ಯ್ವೆವೇ ಇಲ್ಲವೋ ಎನೋ ! ರಷ್ಯದ ಅ೦ತರ್ಯುದ್ಧದಲ್ಲಿ ಸಿಕ್ಕಿಹಾಕಿಕೊ೦ಡ ಸೂಕ್ಷ್ಮ ಸ೦ವೇದನೆಯ ಯುವಕ ಝಿವಾಗೊ ! ಲಾರಾ ಮತ್ತು ಝಿವಾಗೋರ ಪ್ರೀತಿಯೂ ಅಲೌಕಿಕವಾಗಿದ್ದಿತು ! ಈ ಅಪೂರ್ವ ಚಿತ್ರವನ್ನು ಒಮಾರ್ ಶರೀಫ್ ಇಲ್ಲದೆ ಊಹಿಸಿಕೊಳ್ಳುವುದು ಆಗದು !

    • Hanumanth Ananth Patil

      ವಿಶ್ವನಾಥರವರಿಗೆ ವಂದನೆಗಳು
      ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ ನಾನು ಡಾ.ಝಿವಾಗೋ ಚಿತ್ರವನ್ನು 1966 ರಲ್ಲಿ ಹುಬ್ಬಳ್ಳಿಯಲ್ಲಿ ನೋಡಿದ್ದೆ, ವಿಶಾಲ ಹಿಮದ ರಾಶಿ ಹಿಮಕ್ಕೂ ಒಂದು ಸೌಂದರ್ಯವಿದೆ ಎಂಬುದನ್ನು ಮನದಟ್ಟು ಮಾಡಿಸಿದ ಚಿತ್ರವದು. ನನ್ನನ್ನು ಬಹಳವಾಗಿ ಕಾಡಿದ ಚಿತ್ರವದು ಓಮಾರ್ ಮತ್ತು ಜೂಲಿ ಯೂರಿ ಝಿವಾಗೋ ಮತ್ತು ಲಾರಾ ಪಾತ್ರಗಳನ್ನು ಅಮರಗೊಳಿಸಿದ್ದಾರೆ.ನನ್ನ ನೆಚ್ಚಿನ ನಟರ ಪೈಕಿ ಓಮಾರ್ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾನೆ.

  4. Ajith

    Omar sharif separated from his wife in 1974. And she died in January 2015. Not in 1974 as you have written.

    • Hanumanth Ananth Patil

      ajitharavarige vandanegailu neevu tilisida sangati nanage tilidiralilla mahitige dhanyavadagalu.

  5. ಶುರೆಶ

    ಜೀನಪಾಲ್ ಬೆಲ್ಮೆಂಡೊನೊಂದಿಗೆ ಒಮರ್ ಷರೀಫ್ ನಟಿಸಿದ ದ ಬರ್ಗಲರ್ಸ್(೧೯೭೧) ಒಂದು ಸಾಹಸ ಮತ್ತು ಥ್ರಿಲ್ಲಿಂಗ್ ಸಿನೆಮಾ. ಇದರಲ್ಲಿಯೂ ಒಮರ್ ಷರೀಫನ ಅಭನಯ ಗಮನಾರ್ಹವಾದುದು.

    • Hanumanth Ananth Patil

      ಸುರೇಶರವರಿಗೆ ವಂದನೆಗಸಳು
      ನಾನು ಓಮಾರ್ ಶಾರೀಫ್ ನಟಿಸಿದ ಬೆರಳೆಣಿಕೆಯ ಚಿತ್ರಗಳನ್ನು ಮಾತ್ರ ನೋಡಿರುವೆ, ಅವಕಾಶ ಸಿಕ್ಕರೆ ಅತನ ಅಭಿನಯದ ನೀವು ಹೆಸರಿಸಿದ ದಿ ಬರ್ಗಲರ್ಸ್‌ ಚಿತ್ರವನ್ನು ಖಂದಿತ ನೋಡುವೆ ತಮ್ಮ ಮಾಹಿತಿಗೆ ಮತ್ತು ಅದನ್ನು ಪ್ರತಿಕ್ರಿಯೆ ಮೂಲಕ ತಿಳಿಸಿದ್ದಕ್ಕೆ ದನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading