ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ recommends..

ಲೆಟ್ ಪಾಲಿ ಥ್ರೈವ್

ಯಾನೆ ಯಾರೇ ಕೂಗಾಡಲಿ

ರಚನೆ : ಕೋಟಗಾನಹಳ್ಳಿ ರಾಮಯ್ಯ

ನಿರ್ದೇಶನ ಮತ್ತು ಪ್ರಸ್ತುತಿ : ಆದಿಮ ರಂಗ ತಂಡ

ಸಮಯ : ಮಾರ್ಚ 28 ಸಂಜೆ 7.30

ಸ್ಥಳ : ರಂಗಶಂಕರ ,ಬೆಂಗಳೂರು.

ಟಿಕೆಟ್ ದರ : 100 ರೂ.

ಟಿಕೆಟ್ ದೊರೆಯುವ ಸ್ಥಳ : ರಂಗಶಂಕರ, http://www.indianstage.in/EventDetails.do?eventId=4363

9591728050

ನಾಟಕದ ಕುರಿತು

ಸಗಣಿ ಗಂಜಳಗಳಲ್ಲೂ ತಾರತಮ್ಯ ನೆಲೆಗೊಂಡಿರುವ ಭಾರತೀಯ ಮನೋಧರ್ಮದ ನಿಜನೆಲೆಯ ಶೋಧನೆಯ ಕಿರುಪ್ರಯತ್ನ ಈ ನಾಟಕದಲ್ಲಿದೆ. ಇದಕ್ಕಾಗಿ ನಾಟಕಕಾರರು,ಮರಸುನಾಡು ಮಣ್ಣಿನ ಜನಪದ ಕಥೆಯೊಂದನ್ನು ,ಸಂಪತ್ತಿಗೆ ಸವಾಲ್ ಎಂಬ ಜನಪ್ರಿಯ ಸಿನೆಮಾ ಎಳೆಯನ್ನೂ ಹಾಗೂ ಅದಕ್ಕೆ ಸ್ಫೂರ್ತಿ ನೀಡಿದ ದುತ್ತರಗಿಯವರ ಜನಪ್ರಿಯ ವೃತ್ತಿ ನಾಟಕದ ಕಥಾ ಹಂದರವನ್ನೂ ಬೀಡು ಬೀಸಾಗಿ ಬಳಸಿಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಐಡೆಂಟಿಟಿ ಪಾಲಿಟಿಕ್ಸ್‍ನ ಪರಿಣಾಮವಾಗಿ ಒಂದು ಕೋಣಕ್ಕೆ ರಾಜತ್ವದ ಅರ್ಥಾತ್ ಪಟ್ಟದರಸನ ಆಸೆ-ಆಕಾಂಕ್ಷೆಗಳು ಒತ್ತರಿಸಿ ಬರುವಂತಹ ರೀತಿಯಲ್ಲಿ ‘ಡೆಮೊಗ್ರಸಿ ಸ್ಪೇಸು’ ಮಾಡಿಕೊಟ್ಟರೆ ಏನಾಗಬಹುದು? ಸಾವುಗಳನ್ನು,ಚಟ್ಟಗಳನ್ನು,ಸ್ಮಶಾನ-ಸ್ಮಶಾನಮೌನಗಳನ್ನು ಹಾಗೂ ಸಾವಿನ ರೋಧನೆಗಳನ್ನೇ ಕಣ್ಣಲ್ಲಿ ತುಂಬಿಕೊಂಡವನಿಗೆ ಅರಸೊತ್ತಿಗೆಯ ಸುಖಸಂಪತ್ತಿನ ಪಲ್ಲಂಗ ಶಯನದ ಯಾನೆ ರಾಸಲೀಲೆಗಳ ಈಸ್ಟಮನ್ ಕಲರ್ ಕನಸುಗಳು ಬಿದ್ದಲ್ಲಿ ಏನಾಗಬಹುದು ?. ಇಂತಹ ತಾತ್ವಿಕ ಪ್ರಶ್ನೆಗಳನ್ನು ಎತ್ತುತ್ತಲೇ ಈ ನಾಟಕವು- ಆಡುವವರಿಗೆ,ಆಡಿಸುವವರಿಗೆ ಮತ್ತು ನೋಡುವ ಪ್ರೇಕ್ಷಕರಿಗೆ ಮುದ ಕೊಡುವುದರಲ್ಲಿ ಸಂದೇಹವಿಲ್ಲ.

ಮತ್ತೆ ಏಕಲವ್ಯ

ಮೂಲ : ಕುಲ್‍ದೀಪ್ ಕುನಾಲ್

ಅಳವಡಿಕೆ : ಭಾಗ್ಯಲಕ್ಷ್ಮೀ ಮತು ಕೋಟಗಾನಹಳ್ಳಿ ರಾಮಯ್ಯ

ನಿರ್ದೇಶನ : ಸತ್ಯಭ್ರತ್ ರಾವತ್

ತಂಡ : ಆದಿಮ ಕೋಲಾರ.

ಸಮಯ : ಮಾರ್ಚ 29 ಸಂಜೆ 7.30

ಸ್ಥಳ : ರಂಗಶಂಕರ ,ಬೆಂಗಳೂರು.

ಟಿಕೆಟ್ ದರ : 100 ರೂ.

ಟಿಕೆಟ್ ದೊರೆಯುವ ಸ್ಥಳ : ರಂಗಶಂಕರ,

http://www.indianstage.in/EventDetails.do?eventId=4362

9591728050

ಮತ್ತೆ ಏಕಲವ್ಯ ನಾಟಕವು ರಾಜ್ಯದ ಪ್ರತಿಷ್ಥಿತ ನಾಟಕೋತ್ಸವವಾದ ರಂಗಾಯಣದ ಬಹುರೂಪಿ ಹಾಗು ದೆಹಲಿಯ ಅಂತರಾಷ್ಟ್ರೀಯ ನಾಟಕ ಹಬ್ಬಗಳಾದ ಭಾರತ್ ರಂಗ ಮಹೋತ್ಸವ ಮತ್ತು ಮೆಟಾ(ಮಹೀಂದ್ರ ಎಕ್ಸಲೆನ್ಸ್ ಇನ್ ಥಿಯೇಟರ್ ಎವಾರ್ಡ) ಗಳಲ್ಲಿ ಪ್ರದರ್ಶನಗೊಂಡಿದೆ ಹಾಗೂ ಮೆಟಾ ಉತ್ಸವದಲ್ಲಿ ಮುಖ್ಯ ವಿಭಾಗಳಾದ ಶ್ರೇಷ್ಠ ನಿರ್ದೇಶನ, ಶ್ರೇಷ್ಠ ನಟನೆ ಮತ್ತು ವಸ್ತ್ರವಿನ್ಯಾಸ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದೆ.

ನಾಟಕದ ಬಗ್ಗೆಗೆ ಮಾತನಾಡಿದ ಕೋಟಿಗಾನಹಳ್ಳಿ ರಾಮಯ್ಯನವರು, “ಏಕಲವ್ಯ ಈ ನೆಲದ ನಿರ್ಲಕ್ಷಿತ ಸಮುದಾಯಗಳ ಕರಾಳ ಭವಿಷ್ಯವನ್ನು ಪ್ರತಿಬಿಂಬಿಸುತ್ತಾನೆ. ವ್ಯಾಸರು ಕರ್ಣನಂಥವನನ್ನೆ ಮಹಾಭಾರತ ಮಹಾವೃಕ್ಷದ ಒಂದೇ ಒಂದು ಎಲೆ ಎನ್ನುತ್ತಾನೆ. ಕರ್ಣನ ಕತೆಯೇ ಹಾಗಾದಮೇಲೆ ಇನ್ನೂ ಏಕಲವ್ಯನಿಗೆ ಶೂನ್ಯದ ಸ್ಥಾನವೂ ಮಹಾಭಾರತದಲ್ಲಿ ಇಲ್ಲದಿರುವುದು ಆಶ್ಚರ್ಯವೇನಲ್ಲ. ಆದರೂ ಏಕಲವ್ಯ ತನ್ನ ಸಂಕಲ್ಪ ಮತ್ತು ಸ್ವಕಲಿಕೆಯಿಂದ ಸಾಧನೆ ತೋರಿದ ವೀರನಾಗಿ ಸದಾ ನಮ್ಮೆಲ್ಲರಿಗೂ ಸ್ಪೂರ್ತಿಯ ಸೆಲೆ”. ಏಕಲವ್ಯ ಮಹಾಭಾರತದ ವಿಸ್ತಾರವಾದ ಸಮುದ್ರದ ಪಯಣಕ್ಕೆ ಒಂದು ಕಿರುದೋಣಿಯಿದ್ದಂತೆ ಎಂದರು.

 

‍ಲೇಖಕರು G

24 March, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading