ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅವಧಿ’ ಓದುಗರ ಟಾಪ್‌ಟೆನ್ : ಎಂ ಎಂ ಶೇಕ್ ಮೆಚ್ಚಿದ್ದು

ಎಂ ಎಂ  ಶೇಖ್ ಯಾದಗಿರಿ

೧ ಭೂಮಿಗೊಂದು ಚರಮಗೀತೆ
ಒ ಎನ್ ವಿ ಕುರುಪ್ .. ಕನ್ನಡಕ್ಕೆ ಸುಷ್ಮಾ ಶಂಕರ್

೨. ಕಪ್ಪು ಕವಿತೆ (ಆಫ್ರಿಕನ್ ಕವಿತೆಗಳು )
ಅನುವಾದ .. ಎಚ್ .ಎಸ್ .ರಾಘವೇಂದ್ರ ರಾವ್
 
೩. ಎದೆಗೆ ಬಿದ್ದ ಅಕ್ಷರ
ದೇವನೂರ ಮಹಾದೇವ .
 
೪. ಶಂಖದೊಳಗಿನ ಮೌನ
ಎಚ್ .ಎಸ್ . ವೆಂಕಟೇಶ ಮೂರ್ತಿ

೫. ಮಬ್ಬಿನ ಹಾಗೆ ಕಣಿವೆಯಾಸಿ
ಎಚ್. ಎಸ್. ಶಿವಪ್ರಕಾಶ
 
೬. ಮಾತು ಮಂತ್ರವಾಗುವವರೆಗೆ
ಎಚ್. ಎಸ್. ಶಿವಪ್ರಕಾಶ
 
೭. ಒಂದಿಷ್ಟು ಭಾರತೀಯ ಕವಿತೆಗಳು
ಅನುವಾದ.. ಡಿ. ಎನ್. ಶ್ರೀನಾಥ್
 
೮. ಭಾಷೆಯಿಂದ ಭಾಷೆಗೆ
ಡಾ. ಮೈ. ಶ್ರೀ . ನಟರಾಜ್
 
೯. ಧ್ಯಾನಕೆ ತಾರೀಖಿನ ಹಂಗಿಲ್ಲ
ಕಾವ್ಯಾಕಡಮೆ

 
೧೦. ಮರಗಳು ಹನಿಗಳು
ಜರಗನಳ್ಳಿ ಶಿವಶಂಕರ್

‍ಲೇಖಕರು G

22 May, 2014

5 Comments

  1. kvtirumalesh

    ನೀವೊಬ್ಬರಾದರೂ ಕಾವ್ಯಪ್ರಿಯರಿದ್ದೀರಲ್ಲ! ಅಷ್ಟು ಸಾಕು. ಕಾವ್ಯಕ್ಕೆ ಯಾವತ್ತೂ ಕಡಿಮೆ ಓದುಗರೇ ಇರೋದು. ಹಾಗೇ ಇರಲಿ. ಅದಲ್ಲದಿದ್ದರೆ ಕಾವ್ಯವೂ ಮಾರ್ಕೆಟ್ ಇಕಾನಮಿಯ ಭಾಗವಾಗಿಬಿಡುತ್ತದೆ ಅಂತ ಕಾಣುತ್ತದೆ. ಮೊನ್ನೆ ಸ್ನೇಹಿತರೊಬ್ಬರು ನನಗೆ ಫೋನ್ ಮಾಡಿ ಹೇಳಿದರು: ಸಾರ್, ನಮ್ಮ ಇಂದಿನ ಜನರೇಶನಿನವರಿಗೆ ಕವಿತೆ ಹಿಡಿಸುವುದಿಲ್ಲ; ನಮಗೆ ಸುಲಭವಾಗಿ ಅರ್ಥವಾಗಬೇಕು; ನಮ್ಮದು ವೇಗದ ಬದುಕು; ಹೆಚ್ಚು ಪರಿಶ್ರಮಕ್ಕೆ ಸಮಯವಿಲ್ಲ–ಇತ್ಯಾದಿ. ಅವಧಿಯಲ್ಲಿ ನಾನೊಂದು ಕವನಸಂಕಲನಗಳ ಪಟ್ಟಿ ನೀಡಿದ್ದೆನಲ್ಲ–ಇದರ ಹಿನ್ನೆಲೆಯಲ್ಲಿ ಅವರು ಈ ಮಾತು ಹೇಳಿದ್ದು. ನಾನು ಸಪ್ಪೆಯಾದೆ; ಅವರ ಜತೆ ವಾದಿಸುವುದಕ್ಕೆ ಹೋಗಲಿಲ್ಲ. ಯಾಕೆಂದರೆ ಯಾವುದು ಓದಬೇಕು, ಅಥವಾ ಯಾವುದನ್ನಾದರೂ ಓದಬೇಕೇ ಎಂಬುದೆಲ್ಲ ಅವರವರಿಗೆ ಬಿಟ್ಟ ವಿಷಯ. ನನ್ನಂಥ ಕೆಲವು ವಿಚಿತ್ರ ವ್ಯಕ್ತಿಗಳಿದ್ದಾರೆ (ನನ್ನ ಬಗ್ಗೆಯೇ ಹೇಳಿಕೊಳ್ಳುತ್ತಿರುವುದಕ್ಕೆ ಕ್ಷಮೆಯಿರಲಿ): ಅಂಥವರಿಗೆ ಎಲ್ಲ ತರದ ಪುಸ್ತಕಗಳೂ ಗ್ರಾಸವೇ. ನಾನು ರಿಚರ್ಡ್ ಫೆಯ್ನ್ ಮನ್ ನ Six Easy Pieces, Six Not-So-Easy Pieces ಓದುವ ಕುತೂಹಲದಲ್ಲೇ ಪೇಜಾವರ ಸದಾಶಿವರಾಯರ `ವರುಣ’ ಅಥವಾ ವಿ.ಕೃ. ಗೋಕಾಕರ `ಸಮುದ್ರ ಗೀತಗಳು’ಓದಬಲ್ಲೆ. ಎಲ್ಲವೂ ಅರ್ಥವಾಗುತ್ತವೆಯೇ? ಖಂಡಿತಾ ಇಲ್ಲ! ಕೆಲವು ಸಲ ಮತ್ತೆ ಮತ್ತೆ ಓದಬೇಕಾಗುತ್ತದೆ.
    ಇದೇ ಒಂದು ಮಾದರಿ ಎಂದು ಹೇಳಲಾರೆ. ಆದರೆ ಇಂಥ ಓದು ಪ್ರಯೋಜನವಾದಿಗಳಿಗೆ (Pragmatists) ಹೇಳಿದ್ದಲ್ಲ. ಯಾಕೆಂದರೆ ಇದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ನನಗೆ ವೇಳೆಯಿದೆ, ಓದುತ್ತೇನೆ ಎಂದು ಹೇಳಬಹುದೇ? ಹಾಗಲ್ಲ, ಕೈತುಂಬ ಕೆಲಸವಿದ್ದಾಗಲೂ ನಾನು ಹೀಗೆ ಓದುತ್ತಿದ್ದೆ–ಬಹುಶಃ ಇಂದಿಗಿಂತಲೂ ಹೆಚ್ಚು. ಇದು ನನ್ನ ಮನಸ್ಸಿನಲ್ಲಿ ಗೊಂದಲವುಂಟುಮಾಡಿದೆ ಎನ್ನುವುದು ನಿಜ. ನಿಧಾನಿಯೂ ಸ್ವಲ್ಪ ಅನುಮಾನಿಯೂ ಆಗಿದ್ದೇನೆ. ಆದರೆ ಹೊರಜಗತ್ತಿನಷ್ಟೇ ವಿಶಾಲವಾದ ಒಂದು ಒಳಜಗತ್ತೂ ಲಭಿಸಿದೆ–ಅವು ಪರಸ್ಪರ ಸಂಬಂಧದಲ್ಲಿವೆ. ಒಂದರ ಮೇಲೊಂದು ಪ್ರಕಾಶ ಬೀರುತ್ತಿವೆ ಎಂದೆನಿಸುತ್ತದೆ.
    ಕೆ.ವಿ.ತಿರುಮಲೇಶ್

  2. mmshaik

    sir,
    nanna olavu kavite.kaviteya savi ballavane balla..sir!!tamma abhipraya nija..!!!

  3. udaykumar habbu

    .ಕೈಗೆ ಸಿಕ್ಕಿದ್ದನ್ನು ಓದುವ ಅಭ್ಯಾಸ ನನಗೂ ಇದೆ. ಅದು ಕವಿತೆಯ ಸಂಗ್ರಹವಾಗಿರಬಹುದು. ಪ್ರಾಚೀನ ಕಾವ್ಯವಾಗಿರಬಹುದು. ಪ್ರಯೋಜನ ಎಂಬುದು ಅವರವರ ಭಾವನೆಗೆ ಅವರವರ ನಿಲುವಿಗೆ ಸಂಬದ್ಧಪಟ್ಟದ್ದಾಗಿದೆ. ನಾವು ಬದುಕಿ ಏನು ಪ್ರಯೋಜನ? ಒಂದಿಷ್ಟೂ ಜನ ನನ್ನ ಬಗ್ಗೆ ಮಾತಾಡಿಕೊಳ್ಳಲಿ ಎಂದಲ್ಲವೇ ನಾವೆಲ್ಲ ಒದ್ದಾಡುವುದು? ನನ್ನ ಕ್ಱ್ತಿಗಳ ಕುರಿತಾಗಿ ಪ್ರಶಂಸೆಯ ಮಾತುಗಳನ್ನಾಡಲಿ ಎಂದಲ್ಲವೇ ಮನುಷ್ಯ ಎಂದೆನಿಸಿಕೊಂಡವನ ಹುನ್ನಾರ? ಒಬ್ಬ ಎಂಜಿನಿಯರ್ ಕೈಕೆಳಗೆ ಕೆಲಸ ಮಾಡುವ ರೈಟರ್ ಕೇಳಿದ: `ನಿಮ್ಮ ಪುಸ್ತಕಗಳನ್ನು ಓಡುವುದರಿಂದ ನನಗೇನೂ ಲಾಭ? ಆಗ ನಾನು ಹಣ ಮಾಡುವುದು ಹೇಗೆ ಎಂಬ ಪುಸ್ತಕ ಕೊಟ್ಟೆ. ಅದರ ಪೂರ್ತಿ ಹಣ ಕೊಟ್ಟು ಖರೀದಿಸಿದ. ನನ್ನ ಓದಿನಿಂದ ನನ್ನ ಆರೋಗ್ಯ ಸುಧಾರಿಸಿದೆ. ನಾನು ಯೋಚಿಸುವ ರೀತಿ ಬದಲಾಗಿದೆ. ನಾನು ನೆಮ್ಮದಿಯಿಂದ ಇದ್ದೇನೆ. ನನಗೆ ಓದಿನಲ್ಲಿ ಸುಖ ಸಂತೋಷ ಸಿಕ್ಕಿದೆ. ಮತ್ತಿನ್ನೇನು ಬೇಕು? ನಾವು ತುಂಬಾ ಭೌತಿಕವಾದಿಗಳಾಗುತ್ತಿದ್ದೇವೆ. ಅವರನ್ನು ಕಾಪಾಡುವವರು ಯಾರು?

    • mmshaik

      pustakagaLannu aayke maadabekaadare prayojanavenu ennuva shabda taleyalli suLiyodilla anta,nanna abhipraya..!!!

  4. sunanda kadame

    ಪ್ರಿಯ ಎಂ ಎಂ ಶೇಖ್ ಅವರೇ, ನಿಮ್ಮ ದೂರವಾಣಿ ನ೦ಬರು ನನ್ನಲ್ಲಿ ಇಲ್ಲದಿರುವುದರಿ೦ದ ಇಲ್ಲಿಯೇ ಸ೦ಪರ್ಕಿಸುತ್ತಿದ್ದೇನೆ.
    ವಿಭಾ ಸಾಹಿತ್ಯ ಸ್ಪರ್ಧೆ -೨೦೧೪ ಆಹ್ವಾನಿಸಿದ್ದೇವೆ, ದಯವಿಟ್ಟು ನಿಮ್ಮ ೩೦ ಪದ್ಯಗಳನ್ನು ಕಳುಹಿಸಿ.ಜೂನ್ ೩೦ ಕಡೆಯ ದಿನ.

Trackbacks/Pingbacks

  1. ಕೆ ವಿ ತಿರುಮಲೇಶ್ ಖುಷಿಯಾದ್ರು « ಅವಧಿ / Avadhi - [...] ಅವರು ಕೊಟ್ಟಿದ್ದ ಅವರ ಮೆಚ್ಚಿನ ಪುಸ್ತಕಗಳ ಪಟ್ಟಿಯನ್ನು [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading