೨೦೨೦ ನೇ ಸಾಲಿನ ‘ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ’ಗೆ ಅಲ್ಲಾಗಿರಿರಾಜ ಕನಕಗಿರಿ ಅವರ ‘ಸರಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ’ ಕಾವ್ಯ ಕೃತಿ ಆಯ್ಕೆಯಾಗಿದೆ.
ಕವಿ ಮೋಹನ ಕುರುಡಗಿಯವರ ನೆನಪಿನಲ್ಲಿ ಕೊಡಮಾಡುವ ಈ ಪ್ರಶಸ್ತಿಯು ರೂ. ೧೦,೦೦೦ ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನಗಳನ್ನೊಳಗೊಂಡಿದ್ದು, ಮೇ ತಿಂಗಳ ೧೦ ರಂದು ಗದಗಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮೋಹನ ಕುರಡಗಿ ಕಾವ್ಯ ಪ್ರಶಸ್ತಿ-೨೦೨೦ ಸಮಿತಿ ಪರವಾಗಿ ಸುನಂದಾ ಕಡಮೆ ಅವರು ತಿಳಿಸಿದ್ದಾರೆ.

ಪ್ರಸ್ತುತ ಸಾಲಿನಲ್ಲಿ ಪ್ರಶಸ್ತಿಗೆ ರಾಜ್ಯದ ವಿವಿಧ ಕಡೆಗಳಿಂದ ೯೨ ಕೃತಿಗಳು ಬಂದಿದ್ದು, ಕೊನೆಗೆ ‘ಸರಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ’ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಚಾಲಕರಾದ ಗಣೇಶ ಪಿ. ನಾಡೋರ ತಿಳಿಸಿದ್ದಾರೆ.
ವೃತ್ತಿಯಿಂದ ಪತ್ರಕರ್ತರಾದ ಅಲ್ಲಾಗಿರಿರಜ ಅವರು ಕೊಪ್ಪಳ ಜಿಲ್ಲೆಯ ಕನಕಗಿರಿ ಅವರು. ಗಜಲ್ ಬರೆಯುವುದರಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರ ‘.ಆಜಾದಿ ಗಜಲ್’ ‘ಸುರೂರು ಗಜಲ್’ ‘ನೂರ್ ಗಜಲ್’ ಮುಂತಾದ ಕೃತಿಗಳು ಪ್ರಕಟವಾಗಿವೆ.






ಹೃತ್ಪೂರ್ವಕ ಅಭಿನಂದನೆಗಳು