ಅರವಿಂದ್ ಕುಪ್ಳಿಕರ್ ಎನ್ನುವ ನಾಚಿಕೆಯ ತರುಣ

ಕಲೀಮ್ ಉಲ್ಲಾ 

ಮೊನ್ನೆ ನೀನಾಸಂಗೆ ಹೋದಾಗ ಅನೇಕ ಗೆಳೆಯರು ಸಿಕ್ಕರು. ಅಪರೂಪಕ್ಕೆ ಒಳ್ಳೆಯ ಸಿನಿಮಾ ಬಂತೆಂದು ಗೆಳೆಯರು ಹೇಳಿದರೆ ಥಿಯೇಟರ್ ಕಡೆ ಸುಳಿಯುವ ನಾನು, ಪತ್ನಿ ಹಾಗೂ ಅವಳ ತಮ್ಮ ನೂರ್ ಜೊತೆಗೆ “ಇದೊಳ್ಳೆ ರಾಮಾಯಣ” ಸಿನಿಮಾ ಹಿಂದಿನ ದಿನವಷ್ಟೇ ನೋಡಿದ್ದೆ.

aravinda-kuplikar2ನನಗೂ ಗೆಳೆಯ ನೂರ್ ಅಹಮದ್ ಗೆ ಸಿನಿಮಾ ಇಷ್ಟವಾಗಿತ್ತು. ಯಾಕೋ ಸಿನಿಮಾ ಇಷ್ಟ ಪಡದ ಹೆಂಡತಿ ಅಷ್ಟೊಂದು ಚೆನ್ನಾಗಿಲ್ಲ ಎಂದು ಮೂಗು ಮುರಿದಳು. ನನಗೂ ಗೆಳೆಯನಿಗೂ ಸಿನಿಮಾ ಇಷ್ಟವಾಗಿ ಮಾರನೆಯ ದಿನ ನೀನಾಸಂ ತಲುಪುವವರೆಗೂ ಅದೇ ವಿಷಯ ಮಾತಾಡಿದೆವು.

ಆಶ್ಚರ್ಯ ಎನ್ನುವಂತೆ ಅಲ್ಲಿ ಹೋದಾಗ ಅದೇ ಸಿನಿಮಾದಲ್ಲಿ ಆಟೋ ಡ್ರೈವರ್ ಶಿವು ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದ ಅರವಿಂದ್ ಕುಪ್ಳಿಕರ್ ಸಿಕ್ಕರು.

ಮತ್ತೆ ಅದೇ ಸಿನಿಮಾ ಚರ್ಚೆ ಮುಂದುವರೆಯಿತು. ಅರವಿಂದ್ ಸರಳ ಸಜ್ಜನಿಕೆಯ ನಾಚಿಕೆಯ ತರುಣ. ಒಟ್ಟಿಗೆ ಕೂತು ಮಂಡಕ್ಕಿ ಮೆಣಸಿನಕಾಯಿ ತಿಂದು, ಟೀ ಹೀರಿ ಅನೇಕ ವಿಷಯ ಮಾತಾಡುವ ಅವಕಾಶ ಸಿಕ್ಕಿತು. ಅರವಿಂದ್ ಕುಪ್ಳಿಕರ್ ಕನ್ನಡಕ್ಕೆ ಒಬ್ಬ ಭರವಸೆಯ ನಟರಾಗಲಿ ಎಂದು ನಿಮ್ಮೆಲ್ಲರ ಪರವಾಗಿ ಹಾರೈಸುವೆ.

‍ಲೇಖಕರು Admin

October 16, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: