ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅಮ್ಮ ಪ್ರಶಸ್ತಿ’ ಪ್ರಕಟ: ಬಿ ಸುರೇಶ್, ಸುನಂದಾ ಕಡಮೆ, ಗೀತಾ ವಸಂತ ಸೇರಿದಂತೆ 11 ಮಂದಿಗೆ ಪ್ರಶಸ್ತಿ..

ರಾಜ್ಯಮಟ್ಟದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ ಘೋಷಿಸಲಾಗಿದ್ದು ಗೀತಾ ವಸಂತ, ಡಾ.ಬಸವರಾಜ ಸಾದರ, ಬಿ.ಸುರೇಶ್, ಸುನಂದಾ ಕಡಮೆ, ವಿಜಯಶ್ರೀ ಹಾಲಾಡಿ, ಸದಾಶಿವ ಸೊರಟೂರು, ಆನಂದ ಕುಂಚನೂರು, ಮುದಿರಾಜ ಬಾಣದ, ಚಂದ್ರಶೇಖರ ಮದಭಾವಿ, ಸದಾನಂದ ಪಾಟೀಲ ಹಾಗೂ ಇದೇ ವರ್ಷದಿಂದ ಆರಂಭಿಸಿರುವ ಮಕ್ಕಳ ವಿಭಾಗದಲ್ಲಿ ‘ಬಹುರೂಪಿ’ ಪ್ರಾಯೋಜಿತ ಅರುಣಾ ನರೇಂದ್ರ ಕೊಪ್ಪಳ ಅವರ ಕೃತಿಗಳು ಸೇರಿದಂತೆ 11 ಸಾಹಿತಿಗಳ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ಈ ಪ್ರತಿಷ್ಟಿತ ಪ್ರಶಸ್ತಿಗೆ ಈ ಬಾರಿ 25ನೇ ವರ್ಷದ ಸಂಭ್ರಮ.

ಪ್ರಶಸ್ತಿ ವಿಜೇತರು- ಕೃತಿಗಳು

ಕಾವ್ಯ ವಿಭಾಗದಲ್ಲಿ ಗೀತಾ ವಸಂತ (ಪ್ರಾಣಪಕ್ಷಿಯ ರೆಕ್ಕೆ) ಹಾಗೂ ಸದಾಶಿವ ಸೊರಟೂರು (ದೇವರನ್ನು ಹೊರ ಹಾಕುತ್ತೇನೆ), ಕಥಾ ವಿಭಾಗದಲ್ಲಿ ವಿಜಯಶ್ರೀ ಹಾಲಾಡಿ (ಉಮ್ಮಲ್ತಿ ಗುಡಿಯ ಸಾಕ್ಷಿ) ಹಾಗೂ ಆನಂದ ಕುಂಚನೂರು (ನಿರೂಪ), ಕಾದಂಬರಿ ವಿಭಾಗದಲ್ಲಿ ಸುನಂದಾ ಕಡಮೆ (ಹೈವೇ ೬೩) ಹಾಗೂ ಮುದಿರಾಜ ಬಾಣದ (ಸಿಕ್ಕು), ಸಂಕೀರ್ಣ ವಿಭಾಗದಲ್ಲಿ ಬಿ.ಸುರೇಶ್ (ಅಡುಗೆ ಮನೆಯಲ್ಲೊಂದು ಹುಲಿ) ಹಾಗೂ ಚಂದ್ರಶೇಖರ ಮದಭಾವಿ (ಮುರಿದ ಕಡಲು), ಪ್ರಬಂಧ ವಿಭಾಗದಲ್ಲಿ ಡಾ.ಬಸವರಾಜ ಸಾದರ (ಮೂವತ್ತು ಕ್ರಾಂತಿಕಾರಿ ವಚನಗಳು) ಹಾಗೂ ಸದಾನಂದ ಪಾಟೀಲ (ಕೊರೋನಾದ ಕಣ್ಣೀರಿನ ಕಥೆಗಳು), ಹಾಗೂ ಇದೇ ವರ್ಷದಿಂದ ಮಕ್ಕಳ ವಿಭಾಗದಲ್ಲಿ ‘ಬಹುರೂಪಿ’ ಪ್ರಾಯೋಜಿತ ಅರುಣಾ ನರೇಂದ್ರ (ಕಮಲಿಯ ಕುರಿಮರಿ) ಕೃತಿಗಳನ್ನೂ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ತಲಾ ೫೦೦೦ ರೂ. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಸತ್ಕಾರ ಮತ್ತು ಈ ನೆಲದ ಸಿರಿಧಾನ್ಯ ತೊಗರಿ ಬೇಳೆ ಒಳಗೊಂಡಿರುತ್ತದೆ. ಎಲ್ಲ ವಿಭಾಗದಲ್ಲಿ ಲೇಖಕರು ಪ್ರಶಸ್ತಿಯನ್ನು ಹಂಚಿಕೊoಡಿದ್ದು, ಇದೇ ವರ್ಷದಿಂದ ಆರಂಭಿಸಿರುವ ಬೆಂಗಳೂರಿನ ಬಹುರೂಪಿ ಪ್ರಾಯೋಜಿತ ಮಕ್ಕಳ ವಿಭಾಗದಲ್ಲಿ ಎರಡೂವರೆ ಸಾವಿರ ರೂ. ಪುಸ್ತಕ ಬಹುಮಾನವನ್ನು ಸಹ ಇದೇ ನವೆಂಬರ್ 26 ರಂದು ಸಂಜೆ 5.30ಕ್ಕೆ ಸೇಡಮ್‌ನ ಶ್ರೀ ಪಂಚಲಿoಗೇಶ್ವರ ದೇವಾಲಯದ ಶಾಂಭವಿ ರಂಗಮoಟಪದಲ್ಲಿ ನಡೆಯುವ ಸಮಾರಂಭದಲ್ಲಿ ‘ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು  ‘ಅಮ್ಮ ಪ್ರಶಸ್ತಿ’ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಅಮ್ಮ ಪ್ರಶಸ್ತಿಗೆ ‘ಬೆಳ್ಳಿ ಹಬ್ಬದ ಸಂಭ್ರಮ’

ಕಳೆದ ೨೫ ವರ್ಷಗಳಿಂದ ನಿರಂತರವಾಗಿ ತಾಲೂಕು ಕೇಂದ್ರವೊoದರಿoದ ದಿನಾಂಕ, ಸ್ಥಳ ಸೇರಿದಂತೆ ಎಲ್ಲವನ್ನೂ ಬದ್ಧತೆಯಿಂದ ನಡೆಸಿಕೊಂಡು ಬರಲಾಗುತ್ತಿರುವ ಅಮ್ಮ ಪ್ರಶಸ್ತಿಗೆ ಈ ಬಾರಿ ಬೆಳ್ಳಿ ಹಬ್ಬದ ಸಂಭ್ರಮ. ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ ‘ಅಮ್ಮ ಪ್ರಶಸ್ತಿ’ಗೆ ಈಗ 25 ನೇ ವರ್ಷದ ಸಂಭ್ರಮ. ಕನ್ನಡದ ಪ್ರತಿಭಾವಂತ ಬರಹಗಾರರು ‘ಅಮ್ಮ ಪ್ರಶಸ್ತಿ’ಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿದ್ದಾರೆ ಹಾಗೂ ಗೌರವಿಸಿದ್ದಾರೆ. ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ‘ಅಮ್ಮ ಪ್ರಶಸ್ತಿ’ ರಾಜ್ಯದ ಗಣನೀಯ ಪ್ರಶಸ್ತಿಗಳಲ್ಲಿ ಒಂದಾಗಬೇಕು ಎಂಬ ಪ್ರತಿಷ್ಠಾನದ ಆಶಯಕ್ಕೆ ಅನುಗುಣವಾಗಿ ನಾಡಿನ ಖ್ಯಾತ ಲೇಖಕರು, ಕವಿಗಳು, ಪ್ರಕಾಶಕರು ಮತ್ತು ಲೇಖಕರ ಅಭಿಮಾನಿ ಓದುಗರು ಸ್ಪಂದಿಸಿದ್ದೇ ಇದೊಂದು ಗೌರವಾನ್ವಿತ ಪ್ರಶಸ್ತಿಯಾಗಿ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿ ಎಂದು ತಿಳಿಸಿದ್ದಾರೆ.

‍ಲೇಖಕರು Admin

13 November, 2025

1 Comment

  1. ಪ್ರಕಾಶಚಂದ ತಾರಾಚಂದ ಜೈನ ಸುರಪುರ ಜಿಲ್ಲಾ ಯಾದಗಿರ

    ೨೫ ವರ್ಷಗಳ ನಿರಂತರ ಸಾಹಿತ್ಯಸೇವೆ ಎಂಬುದು ಕೇವಲ ಒಂದು ಕಾರ್ಯಕ್ರಮದ ಆಯೋಜನೆ ಅಲ್ಲ — ಇದು ಕನಸುಗಳ ಬೆಂಬತ್ತಿದ ದೀರ್ಘ ನಡಿಗೆ. ‘ಅಮ್ಮ ಪ್ರಶಸ್ತಿ’ ವರ್ಷದಿಂದ ವರ್ಷಕ್ಕೆ ಸಾಹಿತ್ಯಾಸಕ್ತರನ್ನು, ರಚನಾಶೀಲರನ್ನು ಮತ್ತು ಓದುಗರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಸಾಹಿತ್ಯಕ್ಕೆ ಗೌರವ ನೀಡುವ ಒಂದು ಪುಣ್ಯ ಕಾರ್ಯವಾಗಿದೆ. ಮುತ್ತೈದೆಯಂತೆ ಸಾಹಿತ್ಯವನ್ನು ಪಾಲಿಸಿಕೊಂಡು ಬಂದ ಈ ಪ್ರಶಸ್ತಿಯು ಇಂದು “ಬೆಳ್ಳಿ ಹಬ್ಬ” ತಲುಪಿರುವುದು ನಿಜಕ್ಕೂ ಕನ್ನಡ ಸಾಹಿತ್ಯ ಲೋಕಕ್ಕೆ ಹೆಮ್ಮೆಯ ಕ್ಷಣ.

    ಈ ವರ್ಷದ ‘ಅಮ್ಮ ಪ್ರಶಸ್ತಿ’ಗೆ ಆಯ್ಕೆಯಾದ 11 ಮಂದಿ ಬರಹಗಾರರು ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯದ ವಿಸ್ತಾರ ಮತ್ತು ವೈವಿಧ್ಯತೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ. ಅವರ ಪ್ರತಿಯೊಬ್ಬರ ಸಾಧನೆ ಕನ್ನಡದ ಸೃಜನಶೀಲತೆಯ ಹೊಸ ಮೆರಗು.

    ತಮ್ಮ ಅಮ್ಮನ ಸ್ಮರಣೆಯನ್ನು ಸಾಹಿತ್ಯಸೇವೆಯಾಗಿ ಪರಿವರ್ತಿಸಿ 25 ವರ್ಷಗಳಿಂದ ಅಮ್ಮ ಪ್ರಶಸ್ತಿಯನ್ನು ಬೆಳೆಯಿಸಿ, ಗೌರವಾನ್ವಿತ ವೇದಿಕೆಯನ್ನಾಗಿ ಮಹಿಪಾಲರೆಡ್ಡಿ ಮುನ್ನೂರು ಮತ್ತು ರತ್ನಕಲಾ ಮ್ಯೆಡಂ ಅವರಿಗೆ ಹೃತ್ಪೂರ್ವಕ ಅಭಿನಂದನೆ. ಇವರ ತ್ಯಾಗ, ಬದ್ಧತೆ ಮತ್ತು ದೃಷ್ಟಿಯಿಂದಲೇ ಈ ಪ್ರಶಸ್ತಿ ಇಂದು ರಾಜ್ಯದ ಗಣನೀಯ ಸಾಹಿತ್ಯ ಸಮ್ಮಾನದಾಗಿ ರೂಪುಗೊಂಡಿದೆ.-ಪ್ರಕಾಶಚಂದ ತಾರಾಚಂದ ಜೈನ ಸುರಪುರ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading