ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮ ಪ್ರಶಸ್ತಿ ಪ್ರಕಟ: ಜೋಗಿ, ಸುಧಾ ಆಡುಕಳ, ಜಿ ಎನ್ ನಾಗರಾಜ್ ಸೇರಿದಂತೆ 6 ಮಂದಿಗೆ ಪ್ರಶಸ್ತಿ

ಪ್ರತಿಷ್ಠಿತ `ಅಮ್ಮ ಪ್ರಶಸ್ತಿ’ಯನ್ನು ಘೋಷಿಸಲಾಗಿದ್ದು ಕಾದಂಬರಿಕಾರ ಜೋಗಿ, ಲೇಖಕಿ ಸುಧಾ ಆಡುಕಳ, ಚಿಂತಕ ಜಿ.ಎನ್. ನಾಗರಾಜ್, ಅನುವಾದಕ ಪ್ರಭಾಕರ ಸಾತಖೇಡ, ಕಥೆಗಾರ ಚನ್ನಪ್ಪ ಕಟ್ಟಿ, ಹಾಗೂ ಕವಯತ್ರಿ ಭುವನಾ ಹಿರೇಮಠ ಅವರ ಕೃತಿಗಳು ಪ್ರಶಸ್ತಿ ಪಡೆದಿವೆ.

ಇಂದು ಕಲಬುರ್ಗಿಯ ಸೇಡಂನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯವನ್ನು ಅಮ್ಮ ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದರು.

ಜೋಗಿ ಅವರ `ಎಲ್’ (ಕಾದಂಬರಿ), ಸುಧಾ ಆಡುಕಳ ಅವರ `ಬಕುಲದ ಬಾಗಿಲಿನಿಂದ’ (ಲಲಿತ ಪ್ರಬಂಧ), ಜಿ.ಎನ್. ನಾಗರಾಜ್ ಅವರ ನಿಜ ರಾಮಾಯಣ ಅನ್ವೇಷಣೆ (ವೈಚಾರಿಕ ಬರಹ), ಪ್ರಭಾಕರ ಸಾತಖೇಡ ಅವರ `ಮಾಸ್ತರರ ನೆರಳಾಗಿ’ (ಅನುವಾದ), ಚನ್ನಪ್ಪ ಕಟ್ಟಿ ಅವರ `ಏಕತಾರಿ’ (ಕಥಾ ಸಂಕಲನ) ಮತ್ತು ಭುವನಾ ಹಿರೇಮಠ ಅವರ `ಟ್ರಯಲ್ ರೂಮಿನ ಅಪ್ಸರೆಯರು’ (ಕವನ ಸಂಕಲನ) ಕೃತಿಗಳನ್ನು ೧೯ ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ತಲಾ ೫೦೦೦ ರೂ. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ ಒಳಗೊಂಡಿರುತ್ತದೆ. ಇದೇ ನವೆಂಬರ್ ೨೬ ರಂದು ಸಂಜೆ ೫.೩೦ಕ್ಕೆ ಕಲಬುರಗಿ ಜಿಲ್ಲೆಯ ಸೇಡಮ್ ನಲ್ಲಿ `ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

 

‍ಲೇಖಕರು avadhi

10 November, 2019

2 Comments

  1. Lalitha siddabasavayya

    ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು.

  2. Sudha Hegde

    Thank u soo much

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading