ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮ ನನಗೆ ಕಾಣದಂತೆ ಕಣ್ಣು ಒರೆಸಿಕೊಂಡಳು….

ಸುನಿತಾ ಮಂಜುನಾಥ್

ಆ ವರ್ಷ ಬರಗಾಲ….ಇದ್ದ ಹಿಟ್ಟು ಬಳಸಿ ಅಮ್ಮ ಒಂದು ರೊಟ್ಟಿ ಮಾಡಿದ್ಲು.
ಅವಳಿಗೆ ಗೊತ್ತು ಆ ರೊಟ್ಟಿ ನನಗೆ ಸಾಲದು ಎಂದು… ನಾ ಮತ್ತೊಂದು ರೊಟ್ಟಿ ಕೇಳಿಬಿಟ್ಟರೇ ಇಲ್ಲ ಅನ್ನಬೇಕಲ್ಲ .. ಎನ್ನೋ ನೋವೂ ಇತ್ತು ..
‘ಮಗ ಒಂದು ಪ್ರಶ್ನೆ ಕೇಳ್ತೀನಿ ಸರಿ ಉತ್ತರ ಕೊಟ್ರೆ ನಿನ್ನ ಉತ್ತರದ ಅಷ್ಟೂ ರೊಟ್ಟಿ ..ನಿನಗೆ ತಪ್ಪು ಉತ್ತರ ಕೊಟ್ರೆ ಒಂದು ರೊಟ್ಟಿ ಮಾತ್ರ ನಿನಗೆ’ ಅಂದ್ಲು….
‘ಸರಿ ಅಮ್ಮ ಕೇಳು” ಅಂದೇ ..
‘ಖಾಲಿ ಹೊಟ್ಟೆಯಲ್ಲಿ ನೀನು ಎಷ್ಟು ರೊಟ್ಟಿ ತಿನ್ನಬಲ್ಲೆ’ ಎಂದಳು…
‘ಆರು ರೊಟ್ಟಿ ಅಮ್ಮ” ಅಂದೆ ….
‘ತಪ್ಪು ಮಗ, ಒಂದು ರೊಟ್ಟಿ ತಿಂದ ಮೇಲೆ ನಿನ್ನ ಹೊಟ್ಟೆ ಖಾಲಿ ಹೇಗೆ ‘ ಅಂದ್ಲು…’ತಗೋ ಇವತ್ತು ನಿಂಗೆ ಒಂದೇ ರೊಟ್ಟಿ ಮತ್ತೆ ಕೇಳೋಹಾಗಿಲ್ಲ ‘ ಅಂದ್ಲು…….ಒಳಮನೆಗೆ ಹೋಗುತ್ತಾ ನನಗೆ ಕಾಣದಂತೆ ಕಣ್ಣು ಒರೆಸಿಕೊಂಡಳು ……………………..
 

‍ಲೇಖಕರು avadhi

21 February, 2013

10 Comments

  1. Harish Karkera

    Nice one!

  2. Santosh

    Hmmm

  3. Indiresh

    ನಿಮ್ಮ ಲೇಖನವನ್ನು ಓದುತ್ತಿದ್ದಂತೆ , ನನ್ನ ಚಿಕ್ಕಮ್ಮ ( ಆಕೆಯ ಮನೆಯಲ್ಲಿ ನಾನು ನಾಲ್ಕಾರು ವರ್ಷ ಬಾಲ್ಯವನ್ನು ಕಳೆದಿದ್ದೇನೆ ) ಮನೆಯಲ್ಲಿನ ಆರೂ ಮಕ್ಕಳಿಗೆ ರೊಟ್ಟಿ ತಟ್ಟಲು ಹಿಟ್ಟು ಸಾಲದೆಂದು ಒಂದೆರಡು ಹಸಿಮೆಣಸಿನಕಾಯಿ ಹಾಕಿ ಮುದ್ದೆ ತಿರುವಿ ಬಡಿಸುತ್ತಿದ್ದುದು ನೆನಪಾಗಿ ನನ್ನ ಕಣ್ಣುಗಳು ಒದ್ದೆಯಾದವು.

  4. ರವಿ ಮೂರ್ನಾಡು, ಕ್ಯಾಮರೂನ್

    ಸುನೀತ ಮಂಜುನಾಥರ ಇಂತಹ ಹಲವು ಗಮನ ಸೆಳೆಯುವ ಬರಹಗಳನ್ನು ಸಂಗ್ರಹಿಸಿ ಪುಸ್ತಕ ಮಾಡುವ ಪ್ರಕಾಶಕರು ಮುಂದೆ ಬಂದರೆ ಒಳ್ಳೆಯದಿತ್ತು. ಇಲ್ಲದಿದ್ದರೆ ಇಂತಹ ಬರಹಗಳು ನೇಪಥ್ಯಕೆ ಸರಿಯುವ ಆತಂಕವಿದೆ. ಅದು ಸಾಹಿತ್ಯ ಕ್ಷೇತ್ರದ ನಷ್ಟ.ಒಂದು ಹಸಿವಿನ ಚಿತ್ರಣ ಮನ ಮುಟ್ಟುವಂತಿದೆ.

  5. Pramod

    ಹಸಿವಿನ ಗಾಢ ಚಿತ್ರಣ.

  6. ಉದಯಕುಮಾರ್ ಹಬ್ಬು

    ಇಷ್ಟು ಸಣ್ಣ ಕಥೆಯಲ್ಲಿ ಅಮ್ಮನ ಆಸಹಾಯಕತೆ, ಮಗುವಿನ ಮುಗ್ಧತೆ, ಬಡತನದ ತೀವ್ರತೆ ವಾರೆವ್ಹಾ! ಕತೆಗಾರನಿಗೆ ನಮೋ ಎನ್ನುವೆ. ಕತೆಗಾರನದೇ ಅನುಭವವಾಗಬೇಕೆಂದೆನಿಲ್ಲ. ಒಂದು ವೇಳೆ ಅವನ ಅನುಭವವವಾಗಿದ್ರೆ ಅವನು ಕತೆನೆ ಬರೀತಿರಲಿಲ್ಲ. ಊಟ ಎಲ್ಲಿ ಸಿಕ್ಕಂತೆ ಅಂತ ತಿರುಗಾಡುತ್ತಿದ್ದ. ಉದಯಕುಮಾರ ಹಬ್ಬು, ಕಿನ್ನಿಗೋಳಿ ದ ಕ

  7. shobhavenkatesh

    mana kalakide eeeeeeeee lekhana.

  8. ಜಿ.ಎನ್ ನಾಗರಾಜ್

    ಆ ಅಮ್ಮನ ಹೊಟ್ಟೆ ಕಥೆ ಏನು ?ಮನ ಕಲಕುವ ಕಥೆ. ಅಮ್ಮ ಮಕ್ಕಳಿಬ್ಬರನ್ನು ಹಸಿವೆಗೆ ದೂಡಿದ್ದು ಬರವೇ ಸಮಾಜವೇ ?

  9. Vani

    Real situation of india poor family..

  10. ಮಾಲಾ

    ನಾಲ್ಕು ಸಾಲಿನಲ್ಲಿ ಅಗಾಧ ಜೀವನಸಾರ. ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading