ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮ ಇದು ನಿನಗಾಗಿ..

ಅವಳೊಬ್ಬಳೇ ಅಪ್ರತಿಮ, ಅವಿರತ, ಅಖಂಡ ಅಮ್ಮ!!!

ವಿನಾಯಕರಾಮ ಕಲಗಾರು

ನೀವು ನಂಬಲಾರಿರಿ…ಇದೇ ನನ್ನಮ್ಮನ ವಿಶ್ವ. ಬರೋಬ್ಬರಿ ಹದಿನೈದು ವರುಷದಿಂದ ಇದೇ ಅಂಗಡಿ ಕಟ್ಟೆ. ಇರುವುದು ತಾಳಗುಪ್ಪ ಎಂಬ ಸಾಮಾನ್ಯ ಗ್ರಾಮದಲ್ಲಿ. ಅದೇ ದಿನಸಿ ಸಾಮಾನು ಅವರ ದಿನನಿತ್ಯದ ದೀವಿಗೆ.. ಇಂದು ನಾನು ಎಲ್ಲೋ ಇದ್ದೇನೆ. ದಿನನಿತ್ಯ ಪುರಸೊತ್ತಿಲ್ಲದಷ್ಟು ಕೆಲಸ. ಕೆಲವೊಮ್ಮೆ ಅಂತೂ ಅದೇ ಅಮ್ಮ ಫೋನ್ ಮಾಡಿದಾಗ ರಿಸೀವ್ ಮಾಡಿ ಮಾತನಾಡದಷ್ಟು ಬ್ಯುಸಿ. ಆ ಎಲ್ಲಾ ತಪ್ಪು ಒಪ್ಪುಗಳಿಗೆ ಕ್ಷಮೆ ಕೇಳಲು ಇದೇ ಸರಿಯಾದ ದಿನ…ಅದೇ ವಿಶ್ವ ಅಮ್ಮಂದಿರ ದಿನ..

ಹದಿನೆಂಟು ವರುಷದ ಹಿಂದೆ ನನ್ನ ಜೊತೆ ಅದೊಬ್ಬಳೇ ಅಮ್ಮ…ಕೆಟ್ಟ ಪ್ರಪಂಚವೂ ಇದೆ ಎಂದು ಗೊತ್ತಾಗದಷ್ಟು ಮುಗ್ಧೆ ಅವಳು. ಆಸ್ತಿ ಪಾಸ್ತಿ ಎಲ್ಲವೂ ನನ್ನೊಬ್ಬನಿಗೋಸ್ಕರ ಬಿಟ್ಟು ಬಂದ ಬಂಧಮುಕ್ತೆ ಆಕೆ. ಅವಳಿಗೆ ತೊಂದರೆ ಕೊ(ಕೆ)ಟ್ಟವರು ಇಂದು ಅಲ್ಲೇ ಎಲ್ಲೋ ನೆಲ ಸವರಿಕೊಂಡು, ನೆಲ ತಿಕ್ಕಿಕೊಂಡು ಅಲ್ಲೆಲ್ಲೋ ಇದ್ದಾರೆ. ಅದೇ ಅವಳ ಮಗ ಅನ್ನಕ್ಕೆ ದಾರಿಕೊಂಡಿದ್ದಾನೆ.

ಅವಳನ್ನು ನೆನೆಸಿಕೊಂಡಾಗಲೆಲ್ಲಾ ನೆನಪಿನ ಬುತ್ತಿ ಬತ್ತದ ತೆನೆಯಂತೆ ಅರಳುತ್ತದೆ.. ಅಂದು ಅವಳನ್ನು ಬಿಟ್ಟರೆ ನನಗೆ ಬೇರೆ ಜಗತ್ತೇ ಗೊತ್ತಿಲ್ಲ. ಹಗಲು ರಾತ್ರಿ ಎನ್ನದೇ ನಮಗಾಗಿ ದುಡಿದಳು. ಮಗ ಓದಿ ಉದ್ದಾರವಾಗಲಿ ಎಂದು ಹಾಸ್ಟೆಲ್ಲಿಗೆ ಸೇರಿಸಿದಳು. ಅಲ್ಲಿಂದಲೂ ಜೂಟ್ ಆಗುವ ಜಾಯಮಾನ ನಮ್ಮದು. ಅದೆಷ್ಟೋ ಕಷ್ಟಗಳನ್ನು ಕಂತುಕಂತಾಗಿ ಕೊಟ್ಟ ನೆನಪಿದೆ.ಆ ನೋವನ್ನೇ ಹಿತವಾಗಿಸುವ ಹಿಮಾಲಯದಂಥ ಮನಸ್ಸು ಅವಳದ್ದು. ಹೆಸರು ಕನ್ಯಾಕುಮಾರಿ ಹೆಗಡೆ …

ನನ್ನ ಬದುಕಿನ ಬಹುದೊಡ್ಡ ಆಸ್ತಿ ಅವಳು.. ಇದೇ ಅಂಗಡಿ ನನ್ನನ್ನು ಓದಿಸಿದ್ದು. ಅಲ್ಲಿ ಅಮ್ಮ ಪಟ್ಟ ಪಾಡು ಇಂದು ನನ್ನ ಬದುಕಿನ ಭಾವಪರ್ವ. ಬರವಣಿಗೆಗೆ ಸ್ಫೂರ್ತಿ. ಧಾರಾವಾಹಿ-ಲೇಖನ-ಸಿನಿಮಾ ಸಂಭಾಷಣೆ ಬರೆಯುವುದರಿಂದ ಹಿಡಿದು, ಪ್ರತೀ ಹೆಜ್ಜೆ-ಕಣ್ಣೀರು-ಕನವರಿಕೆ-ಎಲ್ಲ ಹಂತದಲ್ಲೂ ಜೊತೆಗಿದ್ದ ಅದೇ ನನ್ನ ಅಮ್ಮನಂಥ ಅದೆಷ್ಟೋ ಅಮ್ಮಂದಿರು ಹುಟ್ಟಿದ ದಿನ..ಈ ಸುದಿನ… ಹೇ ಅಮ್ಮಾ..ನೀ ಮತ್ತೊಮ್ಮೆ ನನ್ನ ಅಮ್ಮನಾಗಿ ಹುಟ್ಟಿ ಬಾ… ನೂರಾರು ಜನ್ಮದಲ್ಲೂ ನೀನು ನನ್ನ ಜೊತೆ ಇರಲೇಬೇಕು… ಇಲ್ಲದಿದ್ದರೆ ನಿನ್ನ ಮಡಿಲಾಣೆ!!!

‍ಲೇಖಕರು avadhi

12 March, 2013

1 Comment

  1. D.Ravivarma

    aa nimma ammanigondu nanna vinamra namaskaara…manakalakuva baraha…odutta hodante nanna kannu hanigudidavu…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading