ಅಮಿತಾ ರವಿಕಿರಣ್
ಮೊನ್ನೆ ನನ್ನ ಮಗ ಮತ್ತೆ ಮತ್ತೆ ಒಂದೇ ಶಬ್ದ ಉಚ್ಹರಿಸುತ್ತಿದ್ದ ”ರಂಡಕೀ….ರಂಡಕೀ…ರಂಡಕೀ…” . ಸ್ವಲ್ಪ ಹೊತ್ತು ಕೇಳುತ್ತಲೇ ನಾನು ಮೆತ್ತಗೆ ತಾಳ್ಮೆ ಕಳೆದುಕೊಳ್ಳ ತೊಡಗಿದ್ದೆ …ಯಾಕಿಂಥ ಮಾತು ಆಡ್ತಾ ಇದ್ದಾನೆ ?? ಎಲ್ಲಿಂದ ಕಲಿತ ??? ನಾವ್ಯಾರು ಹೇಳದ ಪದ ಇವ ಎಲ್ಲಿಂದ ಕಲಿತ ?? ಏನೇನೋ ಪ್ರಶ್ನೆಗಳು… ಅಷ್ಟರಲ್ಲಿ ಇವರು ಆಫೀಸ ನಿಂದ ಮರಳಿದ್ದರು..
ಇವರ ಎದುರು ಮಗರಾಯ ಸೇಮ್ ಟು ಸೇಮ್ ಪದವನ್ನ ಮತ್ರದಂತೆ ಹೇಳ್ತಾ ಇದ್ದ ….ಇನ್ನು ಸಹಿಸಲಾಗದೆ ನಾನು ಸೂಚ್ಯವಾಗಿ ಅದು ಬೈಗಳು ಅದರ ಅರ್ಥ ಮತ್ತೆ ಅದನ್ನು ಹಾಗೆಲ್ಲ ಹೇಳಬಾರದು ಅನ್ನೋದನ್ನು ವಿವರಿಸಲು ಪದಗಳನ್ನೂ ಹೆಣೆಯತೊಡಗಿದ್ದೆ ..ಅಷ್ಟರಲ್ಲಿ ಪತಿದೇವ ಕೇಳಿದರು ” ಏನೋ ಹಾಗಂದ್ರೆ ಯಾಕೆ ಹಂಗೆ ಹೇಳ್ತಿದ್ದಿಯ ಯಾಕೆ ಎಲ್ಲಿ ಕಲಿತೆ?? ಮಗು ಅಷ್ಟೇ ಮುಗ್ಧವಾಗಿ ” pappa I am playing some game in my mind its duck race .. DUCK HAS TO RUN FAST – so its ”RUN DUCKI…..”
ಇಷ್ಟು ಕೇಳಿದ ಮೇಲೆ ಅನ್ನಿಸಿದ್ದು ಇನ್ನು ನಾವು ಎಷ್ಟೇ ಬಾಲ್ಯಕ್ಕೆ ಮರಳಬೇಕೆಂದರು ಅದು ಸಾಧ್ಯವಾಗದು ಮುಗ್ಧತೆ ಅನ್ನುವುದು ಬರೀ ಪದ ಮಾತ್ರ ನಮ್ಮ ಮಟ್ಟಿಗೆ…..






– tappenilla bidi uchharaneyalli swalpa tappagide aste.