ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮಿತಾಬ್ ಸರ್ ಹ್ಯಾಟ್ಸ್ ಆಫ್: ಎಸ್ ಪಿ ಬಾಲಸುಬ್ರಹ್ಮಣ್ಯಂ ಪತ್ರ

s p

ಆ ದಿನ ಕೊಲ್ಕೊತ್ತಾದಲ್ಲಿ ಅಮಿತಾಬ್ ಬಚನ್ ರಾಷ್ಟ್ರಗೀತೆ ಹಾಡಿದ್ದು ಕೇಳಿ ನಾನು ನಿಜಕ್ಕೂ ಭಾವುಕನಾದೆ. ಅವರು ಹಾಡಿದ ರೀತಿ, ಉಚ್ಚಾರಣೆ, ದನಿಯ ಏರಿಳಿತ ಎಲ್ಲವೂ ಘನತೆ ತರುವಂತಿತ್ತು.

ಯಾರೋ ಕೆಲವರು ಅಮಿತಾಬ್ ಅವರು ರಾಷ್ಟ್ರಗೀತೆ ಹಾಡಲು ತೆಗೆದುಕೊಂಡ ಅವಧಿ ನಿಗಧಿತ ಅವಧಿಗಿಂತ ಹೆಚ್ಚಾಯಿತು ಎಂದು ಹೇಳಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದಾರೆ. ಆ ರೀತಿಯ ಕಾನೂನೊಂದು ಇದೆಯೇ ? ಆಶ್ಚರ್ಯ !!

amitabh singing2ಹಾಗಾದರೆ ಲತಾ ಮಂಗೇಶ್ಕರ್, ಭೀಮಸನ್ ಜೋಷಿ, ಬಾಲಮುರುಳಿ ಕೃಷ್ಣ ಹಾಗೂ ನಾನೂ ಸೇರಿದಂತೆ ಇನ್ನೂ ಅನೇಕರು ರಾಷ್ಟ್ರಗೀತೆ ಹಾಡಿದ್ದಾಗ ಯಾಕೆ ಯಾರೂ ರಾಷ್ಟ್ರಗೀತೆ ಹಾಡಲು ನಿಗಧಿತ ಸಮಯ ಇದೆ ಎಂಬುದನ್ನು ಹೇಳಲೇ ಇಲ್ಲ.

ಸಾಹೇಬರೇ, ನ್ಯಾಯಾಧೀಶರುಗಳು ಈಗ ತಮ್ಮ ಮುಂದಿರುವ ಪ್ರಕರಣಗಳನ್ನು ಅಂತಿಮಗೊಳಿಸಲು ಸಮಯ ಸಾಲದೇ ಒದ್ದಾಡುತ್ತಿದ್ದಾರೆ. ಈ ಮಧ್ಯೆ ಅವರ ಕೊರಳಿಗೆ ಇನ್ನೂ ಒಂದು ಪ್ರಕರಣವನ್ನು ತಗುಲಿ ಹಾಕಬೇಕೇ?

 

ದೇಶದ ಮುಂದೆ ಬೇಕಾದಷ್ಟು ಸಮಸ್ಯೆಗಳಿವೆ. ಸಾಧ್ಯವಾದರೆ ಅದನ್ನು ಬಗೆಹರಿಸಲು ಸಹಾಯ ಮಾಡೋಣ. ಪ್ರಚಾರಕ್ಕಾಗಿ ಕ್ಷುಲ್ಲಕ ವಿಷಯಗಳನ್ನು ಎತ್ತಿಕೊಳ್ಳುವುದು ಬೇಡ. ನಾವು ವಿಶಾಲ ಮನಸ್ಸು ಇಟ್ಟುಕೊಳ್ಳೋಣ.

ಅಮಿತಾಬ್ ಬಚನ್ ರಾಷ್ಟ್ರಗೀತೆ ಹಾಡಿದ್ದು ಕೇಳಿ ನಿಜಕ್ಕೂ ನನಗೆ ಹೆಮ್ಮೆ ಎನಿಸಿತು ಹ್ಯಾಟ್ಸ್ ಆಫ್ ಟು ಯು ಸರ್  

‍ಲೇಖಕರು admin

23 March, 2016

1 Comment

  1. Shama, Nandibetta

    ದೇಶದ ಮುಂದೆ ಬೇಕಾದಷ್ಟು ಸಮಸ್ಯೆಗಳಿವೆ. ಸಾಧ್ಯವಾದರೆ ಅದನ್ನು ಬಗೆಹರಿಸಲು ಸಹಾಯ ಮಾಡೋಣ. ಪ್ರಚಾರಕ್ಕಾಗಿ ಕ್ಷುಲ್ಲಕ ವಿಷಯಗಳನ್ನು ಎತ್ತಿಕೊಳ್ಳುವುದು ಬೇಡ. ನಾವು ವಿಶಾಲ ಮನಸ್ಸು ಇಟ್ಟುಕೊಳ್ಳೋಣ.

    Sensible enough

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading