‘ಅಭಿನವ’ಕ್ಕೆ ರಾಷ್ಟ್ರೀಯ ಪ್ರಶಸ್ತಿ ಗರಿ

ಅಭಿನವಕ್ಕೆ ಈಗ ರಾಷ್ಟ್ರೀಯ ಪ್ರಶಸ್ತಿಯ ಗರಿ.

ನವದೆಹಲಿಯ ಭಾರತೀಯ ಪ್ರಕಾಶಕರ ಒಕ್ಕೂಟ  ನೀಡುವ ಅತ್ಯುತ್ತಮ ಪ್ರಕಾಶನದ ಪುಸ್ತಕ ಪ್ರಶಸ್ತಿಗಳಲ್ಲಿ ಮೂರು ಕೃತಿಗಳು ಪ್ರಶಸ್ತಿ ಹಿರಿಮೆಗೆ ಪಾತ್ರವಾಗಿದೆ. ಪುಸ್ತಕಗಳಿಗೆ ಬಹುಮಾನ ಬಂದಿದೆ.

ಹಲವು ಮಕ್ಕಳ ತಾಯಿ – ಸಂ: ಎಚ್. ವೈ ರಾಜಗೋಪಾಲ್ ಮತ್ತು ಇತತರು

ಸಾವನ್ನು ಅರಸಿ – ಮೂಲ: ಪ್ರೊ. ಷ. ಶೆಟ್ಟರ್ (ಅನು: ಓ ಎಲ್ ನಾಗಭೂಷಣಸ್ವಾಮಿ)

ಪಪ್ಪು ನಾಯಿಯ ಪೀಪಿ – ವಿಜಯಶ್ರೀ ಹಾಲಾಡಿ (ಸೆರ್ಟಿಫಿಕೆಟ್ ಆಫ್ ಮೆರಿಟ್).

ಇದೇ ೩೧ರಂದು ನವದೆಹಲಿಯಲ್ಲಿ ನಡೆಯಲಿರುವ ದೆಹಲಿ ಪುಸ್ತಕ ಮೇಳದಲ್ಲಿ ಬಹುಮಾನಗಳನ್ನು ವಿತರಿಸಲಿದ್ದಾರೆ.

‍ಲೇಖಕರು avadhi

August 27, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Lalitha siddabasavayya

    ಚಂದ್ರಿಕಾ ಮತ್ತು ರವಿ ಅವರಿಗೆ ಅಭಿನಂದನೆಗಳು. ನಿಮ್ಮ ಶ್ರಮ ಶಿಸ್ತು ಶ್ರದ್ಧೆ “ಅಭಿನವ” ದ ಆಧಾರ.

    ಪ್ರತಿಕ್ರಿಯೆ
    • kvtirumalesh

      ನನ್ನ ಪುಸ್ತಕಗಳನ್ನು ಪ್ರಕಟಿಸಲು ಯಾರೂ ಒಪ್ಪದೆ ಇದ್ದಾಗ ಪ್ರಕಟಿಸಲು ಮುಂದೆ ಬಂದವರು ರವಿಕುಮಾರ್ ಮತ್ತು ಚಂದ್ರಿಕ. ನನ್ನ ಪುಸ್ತಕಗಳಾದರೂ ಎಂಥವು! ಕವಿತೆಗಳು, ಅನುವಾದಗಳು, ಭಾಷೆಯ ಕುರಿತಾದವು–ಅರ್ಥಾತ್ ಮಾರಾಟವಾಗಲು ಕಷ್ಟವೆನಿಸುವಂಥವು. ಆದರೂ ಅಭಿನವದವರು ಕೇವಲ ಸಾಂಸ್ಕೃತಿಕ ದೃಷ್ಟಿಯಿಂದ ಅವುಗಳನ್ನು ಪ್ರಕಟಿಸುತ್ತ ಬಂದಿದ್ದಾರೆ. ಅಲ್ಲದಿದ್ದರೆ “ಅಕ್ಷಯ ಕಾವ್ಯ” ಎಲ್ಲಿರುತ್ತಿತ್ತು? “ಅರಬ್ಬಿ”ಯ ಕತೆ ಏನಾಗುತ್ತಿತ್ತು? ಈಚಿನ “ಜ್ಞಾನ ವಿಜ್ಞಾನ ತತ್ವಜ್ಞಾನ”ವನ್ನಾಗಲಿ (ಅನುವಾದ ಲೇಖನಗಳ ಸಂಕಲನ), “ಟೈಬೀರಿಯಸ್” ಮತ್ತು “ಕಲಿಗುಲ”ವನ್ನಾಗಲಿ (ನಾಟಕಗಳು) ಯಾರು ಮುಟ್ಟಿ ನೋಡುತ್ತಿದ್ದರು? ನಾನಿಂದು ಒಬ್ಬ ಲೇಖಕನಾಗಿ ಜೀವಂತವಾಗಿದ್ದರೆ ಅದಕ್ಕೆ ಅಭಿನವವೇ ಕಾರಣ. ಪ್ರಖ್ಯಾತ ಷ. ಶೆಟ್ಟರನ್ನು ಪ್ರಕಟಿಸುತ್ತಿರುವ ರವಿಕುಮಾರ್ ನನ್ನನ್ನೂ ಪ್ರಕಟಿಸುತ್ತಿದ್ದಾರೆ ಎನ್ನುವುದು ನನಗೊಂದು ಅಭಿಮಾನದ ವಿಷಯ. ನನಗಿದು Greatness by association! ಅಭಿನವ ಇನ್ನಷ್ಟು ಅಭಿವೃದ್ಧಿಗೊಳ್ಳಲಿ ಎಂದು ಆಶಿಸುತ್ತೇನೆ.
      ಕೆ.ವಿ.ತಿರುಮಲೇಶ್

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: