ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಬ್ದುಲ್ ಮಜೀದ್ ಖಾನ್ ಇನ್ನಿಲ್ಲ

ಬಹುಭಾಷಾ ಸಾಹಿತಿ ಅಬ್ದುಲ್ ಮಜೀದ್ ಖಾನ್ ಇನ್ನಿಲ್ಲ.

ಕನ್ನಡ ಉರ್ದು ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಕವಿ, ಕತೆಗಾರ, ಕಾದಂಬರಿಕಾರ ಮತ್ತು ಅನುವಾದಕಾರಾಗಿದ್ದ ಬಹುಭಾಷಾ ಲೇಖಕ ಅಬ್ದುಲ್ ಮಜೀದ್ ಖಾನ್ ಅವರು ಶುಕ್ರವಾರ 22.11.2019ರಂದು ಬೆಂಗಳೂರಿನ ತಮ್ಮ ಮನೆಯಲ್ಲಿ ತಮ್ಮ 83ನೇ ವಯಸ್ಸಿನಲ್ಲಿ ತೀರಿಕೊಂಡರು. ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರು.

ಸಾಗರ (ಶಿವಮೊಗ್ಗ) ಮೂಲದ ಖಾನ್, ಹುಬ್ಬಳ್ಳಿಯಲ್ಲಿ ಇಂಗ್ಲೀಷ್ ಪ್ರಾಧ್ಯಾಪಕ ವೃತ್ತಿಯನ್ನು ಆರಂಭಿಸಿ ನಂತರ ಬೆಂಗಳೂರಿನ ಕೆ.ಎಲ್.ಇ. ವಿದ್ಯಾಸಂಸ್ಥೆಯಲ್ಲಿ ಬಹುಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರು ಕನ್ನಡದಲ್ಲಿ 18, ಉರ್ದುವಿನಲ್ಲಿ 3, ಇಂಗ್ಲೀಷಿನಲ್ಲಿ 9 ಕೃತಿಗಳನ್ನು ಪ್ರಕಟಿಸಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಉರ್ದು ಸಾಹಿತ್ಯ ಅಕಾಡೆಮಿ ಎರಡರಿಂದಲೂ ಗೌರವ ಪ್ರಶಸ್ತಿ ಪುರಸ್ಕೃತರಾಗಿದ್ದ ಅಬ್ದುಲ್ ಮಜೀದ್ ಖಾನ್ ರ ಆಳು (ಕಥಾ ಸಂಕಲನ), ಲಿಂಧೇರಿ ನಗರಿ (ಕಾದಂಬರಿ) ಮತ್ತು ರೂಮಿ ಮತ್ತು ಗಾಲಿಬ್ ಕುರಿತ ಕವಿ-ಕಾವ್ಯ ಪರಿಚಯ ಗ್ರಂಥಗಳು ಸಾಹಿತ್ಯಲೋಕದ ಮನ್ನಣೆಯನ್ನು ಗಳಿಸಿವೆ.

ಕನ್ನಡ–ಉರ್ದು–ಇಂಗ್ಲೀಷ್ ನಡುವಿನ ಚಿಂತನಶೀಲ ಸಹೃದಯಿ ಸೇತುವೆಯಂತಿದ್ದ ಅಬ್ದುಲ್ ಮಜೀದ್ ಖಾನ್ ಆಕಾಶವಾಣಿಯ ‘ಚಿಂತನ’ದ ಮೂಲಕವೂ ಕನ್ನಡಿಗರಿಗೆ ಆಪ್ತರಾಗಿದ್ದರು. ಎಂಬತ್ತರ ದಶಕದ ಹುಬ್ಬಳ್ಳಿ –ಧಾರವಾಡ ಸಾಂಸ್ಕೃತಿಕ ವಲಯದಲ್ಲಿ ಕ್ರೀಯಾಶೀಲರಾಗಿದ್ದರು.

– ಜಯಂತ ಕಾಯ್ಕಿಣಿ

‍ಲೇಖಕರು avadhi

27 November, 2019

1 Comment

  1. T S SHRAVANA KUMARI

    ಒಂದು ದಿವ್ಯ ಚೇತನವನ್ನು ಕಳೆದುಕೊಂಡಿದ್ದೇವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading