ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪ ಎ೦ಬ ಆತ್ಮವಿಶ್ವಾಸ

ಅಪ್ಪಾ ಅಪ್ಪಾ ನನಗೆ ನೀನು ಬೇಕಪ್ಪ

ಅಪ್ಪನ ದಿನವಂತೆ…

ನನಗೆ ಅಪ್ಪನಿಲ್ಲದ ದಿನ…..ಅಪ್ಪನಿಲ್ಲದ ವರುಷಗಳು..

ಅವನಿರಬೇಕಿತ್ತು!!

ದುಡಿದು ಕೂಡಿಟ್ಟ ಕುಡಿಕೆಯನೊಮ್ಮೆ ಅಲುಗಾಡಿಸಿ ಆನಂದ ಪಟ್ಟಾಗ…

ಅದನ್ನು ಕೇಳಲು ಅವನಿರಬೇಕಿತ್ತು…

 

ಸಾಲ ಮಾಡಿ,ಇಟ್ಟಿಗೆಯ ಇಟ್ಟು ,ಸಿಮೆಂಟು ಹಾಕಿಸಿ,

ಹೆಂಚು ಜೋಡಿಸಿ…”ನಮ್ಮದು”ಎಂದಾಗ…..ನಲಿ​ಯಲು ಅವನಿರಬೇಕಿತ್ತು…

 

ಹಿರಿಯನಾದೆ ಎಂದು ನಾ ಬೀಗಿದಾಗ,

ಗುದ್ದಿ ಬುದ್ಧಿ ಹೇಳಲು ಅವನಿರಬೇಕಿತ್ತು….

 

ನನ್ನಾಕೆ ಎಂದು ಅವಳನ್ನು ಕರೆತಂದಾಗ…

ಹಲ್ಲು ಬಿಟ್ಟು ,ಕಯ್ಯೆತ್ತಿ ಹರಸಿ…ನಗಲು ಅವನಿರಬೇಕಿತ್ತು…

 

ಬದುಕಿನ ಪಾಠಗಳನ್ನು ಭಾರಿ ಬೆಲೆ ತೆತ್ತು ಕಲಿತಾಗ…

ಚೌಕಾಸಿ ಮಾಡಿ…ಬದುಕು ಗಿಟ್ಟಿಸಲು ಅವನಿರಬೇಕಿತ್ತು….

]]>

‍ಲೇಖಕರು G

17 June, 2012

7 Comments

  1. Manjula Narayanarao

    tumba chennagide

  2. D.RAVI VARMA

    excellent ,esto sala igaaguduntu avaru badukiddaga, naavu hattiravaaguvudilla,avara bhaavanegalige spandisuvudilla aadare avarilladaaga koragutteve allave

  3. surekha

    ಅಪ್ಪಾ ಅಪ್ಪಾ ನನಗೆ ನೀನು ಬೇಕಪ್ಪ
    ನಿಜವಾಗಿಯೂ ನೀನು ಬೇಕಪ್ಪ ನನಗೆ
    ಅತ್ತಾಗ ಕಣ್ಣೀರು ಒರೆಸಲು,
    ನೋವಾದಾಗ ಖುಷಿ ನೀಡಲು
    ಬೇಕೇ ಬೇಕಪ್ಪ ನೀನು ನನಗೆ ಪ್ಲೀಸ್

  4. Ramnath

    ಕ೦ಗಳು ಒದ್ದೆಯಾಗಿವೆ…ಮಾತನಾಡಲು ಬಾಯಿ ಬರುತ್ತಿಲ್ಲ… ;(

  5. Manjanna

    ಬೆನ್ನೆಲಬು, ಇದರ ಬೆಲೆ ಗೊತ್ತಾಗುವುದೇ ಅದಕ್ಕೆ ಏನಾದರೂ ಆದಾಗ. ಅಪ್ಪನೂ ಹಾಗೇ ಇರುವಾಗ ನಮ್ಮ ಹಕ್ಕಿನ ಮೇಲೆ ಅಧಿಕಾರ ಚಲಾಯಿಸುತ್ತಾರೆ ಅನ್ನಿಸಿದರೂ ಆಮೇಲೆ ಅವನು ಇದ್ದಿದ್ದರೇ….ಅನ್ನಿಸುತ್ತೆ.
    ಮನಸೂರೆಗೊಂಡು ಚಿಂತನೆಗೆ ಹಚ್ಚುವ ಕವನ.

  6. Ajeet Joshi AJ

    Superbb Bro

  7. Ganga

    Really heart touching

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading