ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅಪ್ಪ ಅಂದ್ರೆ…..’ – ಅಂತಾರೆ ಮಣಿಕಾಂತ್

ಅಮ್ಮನ ನಿಜದ ಕಥೆ ಹೇಳಿದ ನಂತರ ಈಗ ಮಣಿಕಾಂತ್  ಅಕ್ಕಶದಂತಹ ಅಪ್ಪನ್ನ ಪರಿಚಯ ಮಾಡಿಸ್ತಾ ಇದಾರೆ!

ಎ ಆರ್ ಮಣಿಕಾಂತ್ ಅವರ ಹೊಸ ಪುಸ್ತಕ ಮತ್ತು ಅವರ ಮಾತು ಇಲ್ಲಿದೆ :

ಪ್ರಿಯರೆ,
ಈ ಹಿಂದೆ ಒಮ್ಮೆ ತಿಳಿಸಿದ್ದೇನೆ.ಫೆಬ್ರವರಿ ೧೭ ರ ಭಾನುವಾರ ನನ್ನ ಹೊಸ ಪುಸ್ತಕ “ಅಪ್ಪ ಅಂದ್ರೆ ಆಕಾಶ “ಬಿಡುಗಡೆ ಆಗಲಿದೆ.ಅಂದು ಮಧುರ ಭಾವಗೀತೆಗಳ ಗಾಯನ ಕಾರ್ಯಕ್ರಮ ಇರುತ್ತದೆ.ಬೆಳಗ್ಗೆ ೧೦.೩೦ ಕ್ಕೆ ಕಾರ್ಯಕ್ರಮ ಶುರು.ನೀವು ಅವತು ದಯವಿಟ್ಟು ಬರಬೇಕು..ಬರಲೇಬೇಕು.
೯ ವರ್ಷದ ಹಿಂದೆ ನಡೆದ ಸುನಾಮಿ ದುರಂತದಲ್ಲಿ ೩ ಮಕ್ಕಳು ಮತ್ತು ೮ ಜನ ಬಂಧಗಳನ್ನು  ಕಳೆದುಕೊಂಡ ನಂತರ ೩೮ ಅನಾಥ ಮಕ್ಕಳಿಗೆ ಅಪ್ಪ ಅಮ್ಮ ಆದವರು ನಾಗಪಟ್ಟಣಂ ನ ಪರಮೇಶ್ವರನ್-ಚೂಡಾಮಣಿ ದಂಪತಿ. ಇವರ ಬದುಕಿನ ಕಥೆ ಕೂಡ ಬಿಡುಗಡೆ ಆಗಲಿರುವ ಪುಸ್ತಕದಲ್ಲಿದೆ. ಅವರಿಗೆ ಪುಸ್ತಕದ ಮೊದಲ ಪ್ರತಿ ಕೊಡಬೇಕು ಎಂಬುದು ನನ್ನ ಆಸೆ-ಕನಸು…ಈ ಸಂಗತಿಯನ್ನು ಅವರಿಗೆ ತಿಂಗಳ ಹಿಂದೆಯೇ ತಿಳಿಸಿದ್ದೆ..ಮೊನ್ನೆ ಏನಾಯಿತು ಅಂದರೆ…ಕಾರ್ಯಕ್ರಮ ಇರುವುದು ಜನವರಿಯಲ್ಲಿ ಎಂದು ಕನ್ಫ್ಯೂಸ್ ಮಾಡಿಕೊಂಡು ಆ ದಂಪತಿ ಬೆಂಗಳೂರಿಗೆ ಬಂದೇ ಬಿಟ್ಟಿದ್ದರು . ಆ ದಂಪತಿಯ ಪ್ರೀತಿ,ತ್ಯಾಗ,ಕಾಳಜಿ ಕಂಡು ನನಗಂತೂ ಮಾತು ಹೊರಡಲಿಲ್ಲ. ಮುಂದಿನ ತಿಂಗಳು ದಯವಿಟ್ಟು ಬನ್ನಿ ಎಂದು ಮತ್ತೆ ಮತ್ತೆ ವಿನಂತಿಸಿ ಅವರನ್ನು ಬೀಳ್ಕೊಟ್ಟೆ .
ಇಲ್ಲಿ ಪುಸ್ತಕದ ಮುಖಪುಟದ ಸ್ಯಾಂಪಲ್ ಇದೆ. ಒಮ್ಮೆ ಗಮನಿಸಿ…
ಪುಸ್ತಕ ಬಿಡುಗಡೆ ದಿನಾಂಕ ೧೭ ಫೆಬ್ರವರಿ ೨೦೧೩.ದಯವಿಟ್ಟು ನೆನಪಿಟ್ಟುಕೊಳ್ಳಿ.
ಪ್ರೀತಿಯಿಂದ..
ಮಣಿಕಾಂತ್.

‍ಲೇಖಕರು avadhi-sandhyarani

23 January, 2013

3 Comments

  1. ರಾಧಿಕಾ

    ಎಲ್ಲಿ?

  2. armanikanth

    ravindra kalakshetradalli kaaryakrama…
    dayamaadi gamanisi…
    manikanth

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading