ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪು ಎಂಬ ಎನರ್ಜಿ..‌

ಜಿ ಎನ್‌ ಮೋಹನ್

‘ಸರ್ ಕಾಯ್ತಾ ಇದ್ದೀನಿ..’
-ಫೋನ್ ಮಾಡಿದ್ದು ಅಪ್ಪು.

ನಾನು ‘ಈಟಿವಿ’ ಸಂಪಾದಕನಾಗಿದ್ದ ನಡೆಸಿಕೊಡುತ್ತಿದ್ದ ಸೆಲೆಬ್ರೆಟಿಗಳ ‘ವಾಕ್ ಅಂಡ್ ಟಾಕ್’ ಶೋ ಆ ವಾರ ಪುನೀತ್ ಜೊತೆಗೆ ಎಂದು ಫಿಕ್ಸ್ ಆಗಿತ್ತು. ಪುನೀತ್ ನನ್ನ ಬಹುತೇಕ ವಾಕ್ ಅಂಡ್ ಟಾಕ್ ನೋಡಿದ್ದರು.

ಈ ವಾರ ನಿಮ್ಮ ಜೊತೆ ನನ್ನ ವಾಕ್ ಅಂಡ್ ಟಾಕ್ ಅಂತ ಹೇಳಿದಾಗ ನಾನು ಸಿದ್ದರಾಮಯ್ಯನವರ ಜೊತೆ, ರವಿಶಂಕರ್ ಗುರೂಜಿ ಅವರ ಜೊತೆ, ಅಗ್ನಿ ಶ್ರೀಧರ್ ಜೊತೆ ನಡೆಸಿದ ಮಾತುಕತೆಯ ಹಲ ಘಟನೆಗಳನ್ನು ನೆನಪಿಸಿದ್ದರು.

ಅವರ ಜೊತೆ ವಾಕ್ ಅಂಡ್ ಟಾಕ್ ಮಾಡಬೇಕಾದ ದಿನ ನನಗೆ ಇನ್ನಿಲ್ಲದಷ್ಟು ಕೆಲಸದ ಒತ್ತಡವಿತ್ತು. ನನ್ನೊಳಗೂ ದಣಿವು. ಆಗಲೇ ಅಪ್ಪು ಫೋನ್ ಮಾಡಿದ್ದು. ನಾನು ಪರಿಸ್ಥಿತಿ ವಿವರಿಸಿದೆ. ಬೇಡ ದಣಿವು ಮಾಡ್ಕೋಬೇಡಿ. ನೀವು ಹೇಳಿದ ದಿನ ಬಿಡುವು ಮಾಡಿಕೊಳ್ತೇನೆ ಎಂದರು.

ಅಪ್ಪು ನನ್ನೊಳಗೆ ತೀಡಿದ ಎನರ್ಜಿ ಮರೆಯಲಿ ಹೇಗೆ..?

‍ಲೇಖಕರು Admin

29 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading