'ಅಪಾರ' ಉವಾಚಗಳು

apara
ಸಾವಿನ ಆಚೆ ಏನು ಇರುತ್ತೆ ಅಂತ ಕಂಡೋರಿಲ್ಲ ಸರಿ, ಆದರೆ ಗೂಗಲ್‌ ಸರ್ಚ್‌ ರಿಸಲ್ಟ್‌ನ 3ನೇ ಪುಟದಿಂದ ಆಚೆಗೆ ಏನಿರುತ್ತೆ ಅಂತ ಆಶ್ಚರ್ಯವಾಗುತ್ತೆ . ನಾನಂತೂ ಎಂದೂ ನೋಡಿಲ್ಲ. ನೀವು?
apara4
ಕೆಲವೊಮ್ಮೆ ಅತುತ್ಸಾಹದಲ್ಲಿ ಹಾಗಾಗುತ್ತೆ ನಿಜ. ಆದರೂ ‘ಬಿಸಿ ನೀರ ಸ್ನಾನ ಎಂಬ ಪರಮ ಸುಖ’ ಎಂಬ ಶೀರ್ಷಿಕೆಯ ಹುಡುಗಿಯ ಪ್ರಬಂಧಕ್ಕೆ ‘ತುಂಬಾ ಚೆನ್ನಾಗಿದೆ, ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ’ ಅಂತ ಕಾಮೆಂಟ್ ಹಾಕಬಾರದು!
apara5
ನಾವೇನೋ ರಾಜ್‌ಕುಮಾರ್‌ ವಜ್ರಮುನಿಗೆ ಹೊಡೀಲಿ ಅನ್ನೋ ಆಸೆಯಿಂದ ಸಿನಿಮಾ ನೋಡ್ತೀಕೆಲವು ಪದಗಳಿಗೆ ಜೀವನವಿಡೀ ಒಂದೇ ಕೆಲಸ. ಉದಾಹರಣೆಗೆ ಯಾವಾಗಲೂ ಚೆಲುವೆಯರ ಹಿಂದೆ ಬಿದ್ದಿರುವ ಈ ‘ಚೆಂದುಳ್ಳಿ’ ಎಂಬ ಪದವನ್ನೇ ತೆಗೆದುಕೊಳ್ಳಿ. ಇದನ್ನು ಬೇರೆಲ್ಲಾದರೂ ಕಂಡಿದ್ದೀರಾ? ಇದ್ದರೆ ತಿಳಿಸಿ. 🙂 ಒಂದೇ ಒಂದು ಕೆಲಸಕ್ಕೆ ಒಂದು ಪದವಿರೋದು ನಿಘಂಟಿಗೆ ಭಾರ ಅನಿಸಿತು ಅದಕ್ಕೇ ಕೇಳ್ತಿದೀನಿ.
apara3
ಭಾಷೆಗೊಂದು ಜಾಯಮಾನ ಇರುತ್ತೆ. ಕವಿತೆ ಭಾಷಾಂತರಗೊಂಡಾಗ ಅದರ ‘ಜಾಯ್’ನೂ ಹೋಗುತ್ತೆ; ‘ಮಾನ’ನೂ ಹೋಗುತ್ತೆ! ಹೌದೆ?
apara2
ವಿ. ಆದರೆ ನಿಜಜೀವನದಲ್ಲೇ ರೌಡಿಗಳಾಗಿರುವ, ಭ್ರಷ್ಟರಾಗಿರುವ, ಲಂಚಕೋರರಾಗಿರುವ ಜನ ಕೂಡ ಸಿನಿಮಾ ನೋಡ್ತಾರಲ್ಲ. ಆ ಕತ್ತಲಲ್ಲಿ ಅವರ ಮನಸ್ಸಿನಲ್ಲಿ ಏನು ನಡಿಯುತ್ತೆ? ಅವರಿಗೆ ವಿಲನ್ನೇ ಹೀರೋಗೆ ಹೊಡೆದು ತಪ್ಪಿಸಿಕೊಳ್ಳಲಿ ಅನ್ನಿಸುತ್ತಾ? ಸಿನಿಮಾ ನೋಡುವಷ್ಟು ಕಾಲ ಎಲ್ಲರೂ ಹಿರೋಗಳ ಜತೆಗೇ ತಮ್ಮನ್ನು ಗುರುತಿಸಿಕೊಂಡು ಮೈಮರೆಯುವುದು ಎಂಬುದು ಗೊತ್ತಿದ್ದರೂ ಇಂಥದೊಂದು ಅನುಮಾನ ಬಂತು. ಬಂದಮೇಲೆ ಸುಮ್ನೆ ಇದ್ದರೆ ಎಫ್‌ಬಿಗೆ ಅವಮಾನ.
apara7
ವಜ್ರಮುನಿಯಂಥ ಒಬ್ಬ ಪರಿಣಾಮಕಾರಿ ಖಳನಟ ಒಂದು ಭಾಷೆಯಲ್ಲಿ ಬಂದನೆಂದರೆ ಆ ಇಡೀ ರಾಜ್ಯದಲ್ಲಿ ಆ ಹೆಸರನ್ನು ಯಾವ ಮಕ್ಕಳಿಗೂ ಇಡಲು ಹಿಂದೆಗೆಯುತ್ತೇವೆ ಅಲ್ಲವೆ? ಇದೊಂಥರ ಆತನ ನಟನೆಗೆ ದೊರೆತ ಮನ್ನಣೆಯೂ ಅನ್ನಬಹುದು. ಹಾಗೆಲ್ಲ ಅಂದುಕೊಳ್ಳುತ್ತಿರುವಾಗಲೇ ಎಷ್ಟು ಜನ ಮಕ್ಕಳಿಗೆ ರಾಜ್‌ಕುಮಾರ್‌, ವಿಷ್ಣುವರ್ದನ್‌, ಅಂಬರಿಷ್‌, ಅಮಿತಾಭ್‌, ಶಾರುಖ್‌, ರಜನಿಕಾಂತ್‌ ಅಂತ ಹೆಸರಿಟ್ಟಿದ್ದಾರೆ ಅಂತ ಆಲೋಚನೆ ಬಂದು, ನೆನಪು ಮಾಡಿಕೊಂಡರೆ ಸಿನಿಮಾ ತಾರೆಗಳನ್ನು ಇಷ್ಟು ಆರಾಧಿಸುವ ಈ ದೇಶದಲ್ಲಿ ಮಕ್ಕಳಿಗೆ ಸಿನಿಮಾ ನಾಯಕರ ಹೆಸರುಗಳನ್ನು ಇಡುವ ಪರಿಪಾಠವೇ ಯಾಕೋ ಅಷ್ಟು ಜನಪ್ರಿಯವೇನಲ್ಲ ಅಂತ ಅನಿಸಿ ಕನ್‌ಫ್ಯೂಸಾಗಿ ಅದನ್ನು ನಿಮಗೆ ದಾಟಿಸಲಾಯಿತು
 
 

‍ಲೇಖಕರು Avadhi

July 25, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: