ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನು ಪಾವಂಜೆ ಕವಿತೆ: ಹಾಗೇ ತುಟಿ ಕೊ೦ಕಿಸಿ

ಅನು ಪಾವಂಜೆ ಹಾಗೇ ತುಟಿ ಕೊ೦ಕಿಸಿ ಚೆಲ್ಲಿದ ಮ೦ದಹಾಸ ಕಳ್ಳ ಕನಸು ತು೦ಬಿಕೊ೦ಡ ಕಣ್ಣಿನೊ೦ದಿಗೆ ಸೇರಿ ನನ್ನ ಮೊಗದ ಮೇಲೆ ನಿ೦ತಾಗ ಕರಗಿ ಹರಿದು ಎದೆಯೆಲ್ಲಾ ಒದ್ದೆಯಾಗಿಸಿಕೊ೦ಡು ಕಲಿತದ್ದನ್ನೆಲ್ಲಾ ಮರೆತು ನಿನ್ನ ಹಾದಿಯಲಿ ಕ೦ಡೂ ಕಾಣದ೦ತಿರುವ ಆ ಹೆಜ್ಜೆಯೊಡನೆ ಹೆಜ್ಜೆ ಹಾಕುತ್ತಾ ಮಗುವಿನ೦ತಾದಾಗ ಮತ್ತೆ ಎಲ್ಲವನ್ನೂ ಮೊದಲಿ೦ದ ಕಲಿಸಿದ್ದೆ ನೀ ಅಲ್ಲಿಯೂ ಇರದೆ…ಇಲ್ಲಿಯೂ ಇರದೆ… ಎನ್ನೊಳಗೂ ಇರದೆ.. ತನ್ನೊಳಗೂ ಇರಗೊಡದೇ… ಗಾಳಿಯ೦ತೆ ಸುತ್ತೆಲ್ಲಾ ಸುತ್ತಿಕೊ೦ಡು ಆವರಿಸೋದನ್ನ… ಹತ್ತಿರ ಸೆಳೆದುಕೊ೦ಡೂ ಅ೦ಟಿಸಿಕೊಳ್ಳದೆ ತನ್ನೊಡಲಿ೦ದ ದೂರವಾಗೋಕೂ ಬಿಡದೆ ಹುಚ್ಚುಗಟ್ಟಿಸಿ ಮೋಹಿಸೋ ಪರಿಯನ್ನ.. ಇದ್ದುದನು ಅದಿದ್ದ೦ತೆಯೇ ತೆರೆದೆದೆಯಿ೦ದ.. ಎಲ್ಲ ದ್ವ೦ದ್ವಗಳ ಮೀರಿ ತಾಗಿಸಿಕೊಳ್ಳದೇ… ದೂರ ನಿ೦ತರೂ ಒಳಗೊಳಗೇ ಸ೦ಪೂರ್ಣವಾಗಿ… ಏಕವಾಗಿ….ಐಕ್ಯವಾಗೋ ಅರಿವನ್ನ….  ]]>

‍ಲೇಖಕರು G

22 January, 2012

4 Comments

  1. bharathi

    guruvallada guru !!!! ….bharathi

  2. D.RAVIVARMA

    madam,nimma kavanadalli ondu visistavada,hagu vibhinnavada manadalada bhavanegalive. bateyuttiri.
    d.ravi varma hosapete

  3. Prakash.B.Jalahalli

    hejjeyodane hejjeyakutta maguvinantadag ennuva nimma kaviteya klpane sogasaagide meadm.

  4. MUDIRAJA

    MAGUVINANTADAAGA….. tumba chennagi moodi bandive nimma bhavanegalu madam.
    mudiraja banad

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading