ಬಿ ಸುರೇಶ್
ಹೋಗುವುದೇ, ಹೋಗದೆ ಇರುವುದೇ…. ಅನುಮಾನವೇ ಬೇಡ…. ಷೇಕ್ಸ್ಪಿಯರ್ ಅಭಿಮಾನಿಗಳು ನೋಡಲೇ ಬೇಕು – ಹೈದರ್… ಅಕಸ್ಮಾತ್ ಷೇಕ್ಸ್ಪಿಯರ್ ತಿಳಿಯದವರು ಸಹ ಧಾರಾಳವಾಗಿ ಅರಗಿಸಿಕೊಳ್ಳಬಹುದಾದ ವಿವರಗಳಿವೆ ಈ ಸಿನಿಮಾದಲ್ಲಿ…
ಮಕಬೂಲ್ ಸಿನಿಮಾ ಮ್ಯಾಕ್ಬೆತ್ ನಾಟಕವನ್ನು ಆಧರಿಸಿದ್ದು. ಆ ಕತೆಯಲ್ಲಿ ವೀರದಿಂದ ಅಹಂಕಾರಕ್ಕೆ, ಅಲ್ಲಿಂದ ಅಪರಾಧ ಮಾಡುವ ಹಂತಕ್ಕರ, ನಂತರ ಪಶ್ಚಾತ್ತಾಪ ಪಡುವ ಹಂತಕ್ಕೆ ಸಾಗಿ ನಾಯಕನ ಸಾವಿನಲ್ಲಿ ಕತೆ ಅಂತ್ಯವಾಗುತ್ತದೆ. ಹ್ಯಾಮ್ಲೆಟ್ ಆ ಬಗೆಯ ಕಟ್ಟಡದಲ್ಲಿ ಹೆಣೆದ ಕತೆಯಲ್ಲ. ಹಾಗಾಗಿ ನಾಟಕೀಯತೆಯನ್ನು ಹುಡುಕುವವರಿಗೆ ಮಕ್ಬೂಲ್, ಥ್ರೋನ್ ಆಫ್ ಬ್ಲಡ್ ಅವರ್ಣನೀಯ ಆನಂದ ನೀಡುತ್ತದೆ.

ಆದರೆ ಹ್ಯಾಮ್ಲೆಟ್ ಅದ್ಭುತ ಅಭಿನಯ ಮಾತ್ರವಲ್ಲ ವಿವೇಚನೆಯನ್ನೂ ಬೇಡುತ್ತದೆ. ಹಾಗಾಗಿಯೇ grave diggers song ಎಲ್ಲಾ ಕಾಲದಲ್ಲಿಯೂ ಕಾಡುತ್ತದೆ. ನಾಟಕದೊಳಗಿನ ನಾಟಕವಾಗಿ ಅಪ್ಪನ ಕೊಲೆಯ ಕತೆ ಬಂದಾಗ ಬೆರಗು ಉಂಟಾಗುತ್ತದೆ. ಇದನ್ನು ಪುನರಾವರ್ತನೆಯ ಬೆರಗು ಎಂದು ಜನಪದ ಸಾಹಿತ್ಯ ವಿಮರ್ಶಕರು ಗುರುತಿಸುತ್ತಾರೆ. ಅಂತಿಮವಾಗಿ ಒಫಿಲೀಯಾಳ ಸಾವು ನಾಯಕನನ್ನು ಅನಾಥನಾಗಿಸಿ, ಏಕಾಂಗಿಯಾಗಿಸುವುದೇ ಹ್ಯಾಮ್ಲೆಟ್ ಕಥನದ ಶಕ್ತಿ. ಅದನ್ನು ವಿಶಾಲ್ ತುಂಬಾ ಚೆನ್ನಾಗಿ ಕಾಶ್ಮೀರದ ವಿವರಗಳಲ್ಲಿ ಜೋಡಿಸಿದ್ದಾರೆ.
ತಾಯಿ ಪಾತ್ರ ಪಡೆವ ತಿರುವು ಮೂಲಕ್ಕಿಂತ ಗಟ್ಟಿಯಾಗಿದೆ. “ದ್ವೇಷದಿಂದ ದ್ವೇಷವೇ ಹುಟ್ಟುತ್ತದೆ, ಬಿಡುಗಡೆ ದೊರೆಯುವುದಿಲ್ಲ” ಎನ್ನುವ ಆಕೆಯ ಮಾತು ಬಹುಕಾಲ ಕಾಡುವ ಹಾಗೆ ಚಿಕ್ಕಪ್ಪನನ್ನು ಕೊಲ್ಲದೆ ನಾಯಕ ಹೆಣಗಳ ನಡುವೆ ತಾನೂ ಹೆಣವಾದಂತೆ ನಡೆಯುವುದೇ ಕಾವ್ಯ ಶಕ್ತಿ.






ತಾಯಿ ಪಾತ್ರ ಪಡೆವ ತಿರುವು ಮೂಲಕ್ಕಿಂತ ಗಟ್ಟಿಯಾಗಿದೆ. “ದ್ವೇಷದಿಂದ ದ್ವೇಷವೇ ಹುಟ್ಟುತ್ತದೆ, ಬಿಡುಗಡೆ ದೊರೆಯುವುದಿಲ್ಲ” ಎನ್ನುವ ಆಕೆಯ ಮಾತು ಬಹುಕಾಲ ಕಾಡುವ ಹಾಗೆ ಚಿಕ್ಕಪ್ಪನನ್ನು ಕೊಲ್ಲದೆ ನಾಯಕ ಹೆಣಗಳ ನಡುವೆ ತಾನೂ ಹೆಣವಾದಂತೆ ನಡೆಯುವುದೇ ಕಾವ್ಯ ಶಕ್ತಿ…heart touching sir tappade cinema noduve…
ವಿಶಾಲ್ ಭಾರಧ್ವಜ್ ಹೇಳಬಲ್ಲ ಕಥಾ ಸಾಮರ್ಥ್ಯಕ್ಕೆ ಅನುಮಾನವಿಲ್ಲ. ಮಕ್ಬೂಲ್(ಮ್ಯಾಕ್ಬೆತ್), ಓಂಕಾರ(ಒಥೆಲೋ), ಈಗ ಹ್ಯಾಮ್ಲೆಟ್/ಹೈದರ್ ಗಾಗಿ ಕಾತರದಿಂದ ಕಾಯುತ್ತಿದ್ದೇನೆ.