
‘ಅನುಪಮ ಆಖ್ಯಾನ’ ಇದು ನಾನು ಬರೆದ ಒಂದು ಮಿನಿ ಕಾದಂಬರಿ…
ಇದು ನೇರವಾಗಿ ಇ ಬುಕ್ ರೂಪದಲ್ಲಿ ನಿಮ್ಮ ಮುಂದಿದೆ..
‘ಮೈಲ್ಯಾಂಗ್’ ಅವರ ಮೂಲಕ ಈ ಕೃತಿ ನಿಮ್ಮ ಮುಂದಿದೆ…
ಕೊಳ್ಳುವ ಲಿಂಕ್ ಹೀಗಿದೆ….
https://mylang.in/collections/recent-additions/products/anupama-aakhyana-inr
ಇನ್ನು ಕತೆಯ ಬಗ್ಗೆ….ಅನುಪಮಾ ಈಗಿನ ಪೀಳಿಗೆಯ ಯುವತಿ..ಇವಳು ನೇರವಾಗಿ ಮುನ್ನೆಲೆಗೆ ಬಂದು ಕತೆ ಹೇಳುವುದಿಲ್ಲ. ಬದಲು ಇವಳ ಮಾವ, ಅತ್ತೆ ಗಂಡ ಹಾಗೂ ಮ್ಯಾರೇಜ್ ಕೌನ್ಸಿಲರ್ ಹೀಗೆ ಇವಳ ಸುತ್ತಲಿನ ಜನ ಅನುಪಮಾಳ ಕತೆ ಹೇಳುತ್ತ ಹೋಗುತ್ತಾರೆ…. ಒಂದು ಸಣ್ಣ ಝಲಕ್ ಇಲ್ಲಿದೆ…..
ಮಾವ: “ನನ್ನ ಜೀವನದಲ್ಲಿ ತಾಳೆಯಾಗದ ಲೆಕ್ಕ ಅಂದರೆ ಈ ಅನುಪಮಾ ಮಾತ್ರ..!!”
ತಂದೆ: “ನೋಡು ಇದು ಪ್ರವಾಹ ಅದ ಅದರ ವಿರುದ್ದ ನೀ ಈಸತೇನಿ ಅಂತಿ ಆದ್ರ ಅದು ಅಷ್ಟು ಸುಲಭ ಅಲ್ಲ”
ಗಂಡ : “ಅವಳೊಂದು ಅಳತೆಗೋಲು ಇಟ್ಟುಕೊಂಡಿದ್ದಾಳೆ.. ಪದೇ ಪದೇ ಅವಳ ಎಕ್ಸಪೆಕ್ಟೆಶನ್ ಲೆವೆಲ್ಲಿಗೆ ನಾನಿಲ್ಲ ಆ ಗುರಿ ತಲುಪಿಲ್ಲ ಅಂತ ಮೇಲಿಂದ ಮೇಲೆ ನನಗೆ ಅರಿವು ಮೂಡಿಸುತ್ತಾಳೆ”
ಕೌನ್ಸಿಲರ್: ಈ ಹಿಂದೆ ಅನೇಕ ಕೇಸುಗಳಲ್ಲಿ ನಾನು ಹಿರಿಯತನ ತೋರಿಸುತ್ತಿದ್ದೆ.. ನನ್ನ ಉಪದೇಶ ಕೇಳಿ ತಿದ್ದಿಕೊಂಡವರಿದ್ದರು. ಆದರೆ ಅನುಪಮಾ ವಾಸ್ತವವಾದಿ…ಅವಳಿಗೆ ಹಿಡಿಸೀತೇ …
-ಉಮೇಶ್ ದೇಸಾಯಿ






ಅಭಿನಂದನೆಗಳು, ಶುಭವಾಗಲಿ
Interesting narration… ಓದಬೇಕು ಅನಿಸ್ತು….