– ಅನಿತಾ ನರೇಶ್ ಮ೦ಚಿ
ನೀನು ತಂಟೆ ಮಾಡದೆ ಸುಮ್ಮನೆ ಕೂತ್ಕೊಂಡ್ರೆ ಒಂದು ಚಂದದ ಕತೆ ಹೇಳ್ತೀನಿ ನಿಂಗೆ..
ನಾನು ಕತೆ ಕೇಳಿದ್ರೆ ನೀವು ನಂಗೆ ಡೈರಿ ಮಿಲ್ಕ್ ಚಾಕೋಲೇಟ್ ಕೊಡ್ತೀರಾ..
ಹೂಂ.. ಆದ್ರೆ ಕತೆ ಮುಗಿದ ಮೇಲೆ.. ಈಗ ಸುಮ್ಮನೆ ಕೇಳು..
ಒಂದೂರು..
ಆಂಟೀ.. ಎಲ್ಲಾ ಕತೆ ಒಂದೂರಲ್ಲೇ ಯಾಕೆ ಇರೋದು.. ಬೇರೆ ಊರಲ್ಲಿ ಕತೆ ಇಲ್ವಾ..
ಒಂದೂರು ಅಂದ್ರೆ ಯಾವ ಊರು ಬೇಕಿದ್ರೂ ಆಗ್ಬಹುದು ಪುಟ್ಟಿ..
ಹುಂ..

ಅಲ್ಲೊಂದು ಸಣ್ಣ ಮನೆ.. ಅದ್ರಲ್ಲಿ ಒಂದಜ್ಜ ಒಂದಜ್ಜಿ ಇದ್ರು..
ಆಂಟೀ ಅದ್ಯಾಕೆ ಅಜ್ಜ ಅಜ್ಜಿ ಮಾತ್ರ.. ಅಲ್ಲಿ ಮಕ್ಳು ಎಲ್ಲಾ ಅಮೇರಿಕಾಗೆ ಹೋಗಿದಾರಾ…
ಹುಂ .. ಹಾಗೆ ಅಂದ್ಕೋ.. ಅಜ್ಜ ತುಂಬಾ ಸೋಮಾರಿ. ಅಜ್ಜಿ ಪಾಪ ಎಲ್ಲಾ ಕೆಲ್ಸ ಮಾಡ್ತಾ ಇದ್ದಳು.
ಆಂಟೀ ನಮ್ಮಲ್ಲೂ ಅಜ್ಜ ಏನೂ ಕೆಲ್ಸ ಮಾಡೋದೇ ಇಲ್ಲ. ಅಜ್ಜಿ ತಿಂಡಿ ಕಾಫೀ, ಊಟ ಎಲ್ಲಾ ಮಾಡ್ತಾರೆ.
ಹೌದಾ ಪುಟ್ಟಿ.. ಕತೆ ಕೇಳೀಗ.. ಒಮ್ಮೆ ಅವ್ರ ಮನೇಲಿ ಒಂದು ಶ್ರಾದ್ಧ ಮಾಡಿದ್ರು.
ಆಂಟೀ.. ಶ್ರಾದ್ಧ ಅಂದ್ರೇನು.. ??
ಹಾಗಂದ್ರೆ ನಮ್ಮಲ್ಲಿ ಯಾರಾದ್ರು ದೇವ್ರತ್ರ ಹೋಗಿದ್ರೆ ಅವ್ರನ್ನು ನೆನಪು ಮಾಡ್ಕೊಳ್ಳೋ ದಿನ ಪುಟ್ಟಿ.
ಆಂಟೀ ನಮ್ಮ ಸ್ಕೂಲಲ್ಲೂ ಶ್ರಾದ್ಧ ಮಾಡಿದ್ರು.ಆಗ ಮಕ್ಳಿಗೆಲ್ಲ ಲಾಡು ಕೊಟ್ಟಿದ್ರು.
ಶ್ರಾದ್ಧನಾ.. ಪುಟ್ಟಿ.. ಸ್ಕೂಲಲ್ಲಾ..??? ಯಾರದೇ ..??
ಆಂಟೀ.. ಗಾಂಧೀ ತಾತಾ ಅಂತ ಇದ್ರಂತೆ ಅವ್ರದ್ದು..
ಹ್ಹೋ.. ಸರಿ ಸರಿ.. ಆ ದಿನ ಅಜ್ಜಿ ತುಂಬಾ ಕಜ್ಜಾಯ ಮಾಡಿದ್ರು ..
ಕಜ್ಜಾಯ ಅಂದ್ರೇನು ಆಂಟೀ..
ಹಾಗಂದ್ರೆ ಸ್ವೀಟ್ಸ್ ಪುಟ್ಟಿ.. ಅಜ್ಜನಿಗೆ ಕಜ್ಜಾಯ ಅಂದ್ರೆ ತುಂಬಾ ಪ್ರೀತಿ. ಅವ್ನಿಗೆ ಅಜ್ಜಿ ಮಾಡಿಟ್ಟಿದೆಲ್ಲ ತಾನೊಬ್ನೇ ತಿನ್ಬೇಕು ಅನ್ನಿಸ್ತು.
ಆಂಟೀ.. ಅವ್ನು ಮಿಹಿರ್ ತರಾನಾ..? ಮಿಹಿರ್ ಮೊನ್ನೆ ಅಪ್ಪ ತಂದಿದ್ದ ‘ಜೆಮ್ಸ್’ ಎಲ್ಲಾ ಅವ್ನೊಬ್ನೇ ತಿಂದಿದ್ದ..
ಹುಂ.. ಹೌದು ಪುಟ್ಟಿ.. ಅಜ್ಜ ಏನು ಮಾಡಿದ ಗೊತ್ತಾ.. ಒಂದು ಮಡಿಕೆ ತಂದು ಅದ್ರೊಳಗೆ ಕಜ್ಜಾಯ ಎಲ್ಲಾ ತುಂಬಿಸಿ, ಅಂಗಳದ ಮೂಲೆಯಲ್ಲಿ ಒಂದು ಹೊಂಡ ಮಾಡಿ ಅಡಗಿಸಿಟ್ಟ.. ರಾತ್ರಿಯಾದ ಮೇಲೆ ಯಾರಿಗೂ ಗೊತ್ತಾಗದ ಹಾಗೇ ತಿನ್ಬೇಕು ಅಂದ್ಕೊಂಡ.
ಆಂಟೀ ಯಾರ್ಗೂ ಹೇಳ್ಬೇಡಿ .. ಮೊನ್ನೆ ಅಪ್ಪ ತಂದಿದ್ದ ಚಿಪ್ಸ್ ಪ್ಯಾಕೆಟ್ ದಿಂಬಿನೊಳಗೆ ಅಡಗಿಸಿ ಇಟ್ಟಿದ್ದೀನಿ. ಆಂಟೀ ನಾನೀಗ ಮನೆಗೆ ಹೋಗ್ಬೇಕು..ನಂಗೆ ಕತೆ ಬೇಡ ..ಚಿಪ್ಸ್ ಬೇಕೀಗ.. ನಂಗೆ ಬೇಗ ಡೈರಿ ಮಿಲ್ಕ್ ಕೊಡಿ..!!]]>
Like this:
Like Loading...
Related
Chendada lekhana Anitha
haage maguvinante aagabeku naanu??
in btween very nice narration of realty
superb Anitha…liked it very much.
Sadhya magu “Madake” andre enu aunty..? anta kelalilla..!! 😀
hahahaha 🙂
Anitakka chennagide…
saralavagide…