ಅನಿತಾ ನರೇಶ್ ಮಂಚಿ ಅವರ “ಗಡಿಯಾರ ಮತ್ತು 90 ಡಿಗ್ರಿ”..

-ಅನಿತಾ ನರೇಶ್ ಮಂಚಿ

ಎಲ್ಲಿದ್ದೀಯಾ? ಕೇಳಿತಾ? ಬಾ ಇಲ್ಲಿ ಒಮ್ಮೆ.. ಸ್ವಲ್ಪ ಹೆಲ್ಪ್ ಮಾಡು ನೋಡುವಾ..

ಅದೆಂತದದು ? ಏನಾಗ್ಬೇಕೊ ಹೇಳಿ.. ಭಾರಿ ಹೆಲ್ಪ್ ಅಂತೆಲ್ಲ ಮಸ್ಕಾ ಹೊಡೆಯುವುದು ಯಾಕೆ?
ಏನಿಲ್ಲ ಈ ಗಡಿಯಾರ ಗೋಡೆಗೆ ನೇತು ಹಾಕ್ಬೇಕು.ಸ್ವಲ್ಪ ಸರ್ತ ಉಂಟಾ ನೋಡಿ ಹೇಳ್ಬೇಕು ಆಯ್ತಾ.. ಒಟ್ಟಿಗೆ ಸ್ಟೂಲ್ ಸಹ ಗಟ್ಟಿ  ಹಿಡ್ಕೊ.. ಇದರ ಮೇಲೆ ಹತ್ತಿಯೇ ಇಡ್ಬೇಕಷ್ಟೆ.ಆ ಆಣಿ ಎತ್ತರದಲ್ಲಿ ಉಂಟಲ್ಲ.
ಸರಿ ಆಯ್ತು ಹಿಡ್ಕೊಳ್ತೇನೆ.
ನಾನು ಸ್ಟೂಲ್ ಗೆ ಹತ್ತಿದ ಮೇಲೆ ಆ ಗಡಿಯಾರ ಒಮ್ಮೆ ಎತ್ತಿ ಕೊಡ್ಬೇಕು ಆಯ್ತಾ..
ಹುಂ ಆಯ್ತು.. ಒಮ್ಮೆ ಸ್ಟೂಲ್ ಮೇಲೆ ಹತ್ತಿ..  ಹಿಡ್ಕೊಂಡಿದ್ದೇನೆ.
ಸರಿ ಗಟ್ಟಿ  ಹಿಡ್ಕೋ .. ಅದರ ಕಾಲು ಸರಿ ಇಲ್ಲ. ಸ್ವಲ್ಪ ವಾಲಾಡ್ತದೆ.
ಆಯ್ತು.. ಮಾರಾಯ್ರೆ..
ಹುಂ ಈಗ ಆ ಗಡಿಯಾರ ಕೊಡು.
ಗಟ್ಟಿ ಸ್ವಲ್ಪ ಗೋಡೆ  ಹಿಡ್ಕೊಂಡು ನಿಂತ್ಕೊಳ್ಳಿ. ಅಲ್ಲಾಡಬೇಡಿ. ಗಡಿಯಾರ ಕೆಳಗೆ ಇಟ್ಟಿದೆ ಅಲ್ವಾ.. ಬಗ್ಗಿ ತೆಗೆದುಕೊಡ್ಬೇಕಷ್ಟೆ.. ಹಾಂ.. ಇಕೊಳ್ಳಿ..
ಪುನಃ ಸ್ಟೂಲ್ ಗಟ್ಟಿ  ಹಿಡ್ಕೋ ಆಯ್ತಾ.. ಸ್ವಲ್ಪ ಮೇಲೆ ನೋಡು. ಗಡಿಯಾರ ಸರ್ತ ನಿಂತಿತಾ..
ಎಷ್ಟು ಸರ್ತಿ ಹೇಳಿದ್ದನ್ನೇ ಹೇಳುವುದು ನಂಗೆಂತ ಕಿವಿ  ಮಂದವಾ.. ಗಟ್ಟಿ  ಹಿಡ್ಕೊಂಡೇ ಇದ್ದೇನೆ.. ಮತ್ತೆ ಗಡಿಯಾರ ಸರ್ತ ಇಲ್ಲದೆ ಏನು? ಸರೀ ನಡೀತಾ ಉಂಟು..
ಹಾಗಲ್ಲ ಮಾರಾಯ್ತಿ 12  ಅಂತ ಬರ್ದದ್ದು ನೆಲಕ್ಕೆ 90  ಡಿಗ್ರಿಯಲ್ಲಿ ನಿಲ್ಬೇಕು. ಹಾಗೆ ಉಂಟಾ ನೋಡು.
ನೀವು 90  ಡಿಗ್ರಿ ಅಂದ್ರೆ ನಾನು ಹೇಗೆ ಕಣ್ಣಂದಾಜಿನಲ್ಲಿ ಹೇಳುವುದು.. ಅಲ್ಲಿ ಮಗನ ಕೋನಮಾಪಕ ಉಂಟು ತರ್ಬೇಕಾ..
ಬೇಡ.. ಹಾಗೇ ಹೇಳು.. ಅಷ್ಟು ಅಂದಾಜು ಆದದ್ದು ಸಾಕು..
ನಿಲ್ಲಿ ಮಾರಾಯ್ರೆ .. ಹಾಗೆಂತ .. ಒಂದು ನಿಮಿಷ ಇಲ್ಲಿಯೇ ಉಂಟು ತಂದು ಬಿಡ್ತೇನೆ. ಇಟ್ಟ ಮೇಲೆ ಸರಿ ಆಗ್ಬೇಕು. ಇನ್ನೊಮ್ಮೆ ಯಾರು ಹತ್ತುವುದು ಅಲ್ಲಿಗೆ.
ಬೇಡ.. ಸ್ಟೂಲ್ ಸರಿ ಇಲ್ಲ ಮಾರಾಯ್ತಿ  ಸಾಕದು..
ಆಯ್ತಪ್ಪಾ.. ಈಗ ಬಂದೆ. ಸ್ವಲ್ಪ ಗಟ್ಟಿ  ನಿಂತುಕೊಳ್ಳಿ. ನೋಡುವಾ..
ದಡ್.. ಎಂಬ ಶಬ್ಧ ಕೇಳಿಸಿತು.
ಮಗನ ಬ್ಯಾಗಲ್ಲಿ ಸಿಕ್ಕಿದ ಕೋನಮಾಪಕ  ಹಿಡಿದು ಬಂದವಳಿಗೆ ಗಂಡ ನೆಲದ ಮೇಲೆ 180  ಡಿಗ್ರಿಯಲ್ಲಿ ಬಿದ್ದಿದ್ದು ಕಾಣಿಸಿತು. ಕಣ್ಣೆತ್ತಿ ಗಡಿಯಾರ ನೋಡಿದಳು. ಗಡಿಯಾರದ ಮುಳ್ಳು 12.30  ರಲ್ಲಿ ಸರಿಯಾಗಿ  ನೆಲಕ್ಕೆ ಲಂಭಕೋನದಲ್ಲಿತ್ತು.

‍ಲೇಖಕರು avadhi

September 26, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

  1. ಗಂಗಾಧರ ದಿವಟರ

    ಕಾಲದ ಚಲನೆ
    ಭೂಮಿಗೆ ಲಂಬವಾಗಿಯೋ
    ಅಥವಾ ಸಮಾನಾಂತರವಾಗಿಯೋ…
    ಭೂಮಿ ಚಲಿಸುವುದರಿಂದ ಕಾಲವೋ
    ಕಾಲದ ಚಲನೆಯೇ
    ಭುವಿಯ ಜನರಿಗೆಲ್ಲ ಮೂಲವೋ…
    ಅಂತೂ ಇಂತೂ
    ಕಾಲವನ್ನು ನೇತುಹಾಕಲು ಹೋಗಿ
    ಕಾಲಬುಡವೇ ಜಾರಿ
    ಕಾಲಕ್ಕೆ ಮೂಲವಾದ ಭೂಮಿಗೆ
    ಅಪ್ಪಿಕೊಳ್ಳುವಂತಾಯ್ತಲ್ವಾ…

    ಪ್ರತಿಕ್ರಿಯೆ
  2. Bhairav Kodi

    ಓದಿಸಿಕೊಂಡು ಹೋಯ್ತು, ಇಷ್ಟ ಆಯ್ತು ಬರೀರಿ ಮತ್ತಷ್ಟು

    ಪ್ರತಿಕ್ರಿಯೆ
  3. Ashoka Bhagamandala

    ಜಾಗರೂಕತೆಯಿಂದ ನಿಖರತೆಯನ್ನು ಸಾಧಿಸ ಬೇಕಿತ್ತು ! :):) ಬಹುಶಃ ನಿಖರತೆ ಬೇಕಿದ್ದಲ್ಲಿ ಜಾಗರೂಕತೆಗೆ ಎಡೆ ಇಲ್ಲವೇನೊ!! :):):) ಕಥೆ ಚೆನ್ನಾಗಿದೆ !

    ಪ್ರತಿಕ್ರಿಯೆ
  4. D.RAVIVARMA

    tumba chennagide madam,kala, da kaiyalli navella bombegaleno,nimma barahada shaili manamuttuvantide,very nice,nanageko matte d.v.g nenapu baruttare” baduku jataka bandi,vidhi adara saheba,kudure neen ava peldante payanigaru,maduvego,masanako hogendakadegoho,padakusiva nelavihudu mankutimma” allave? ee avadhi,kenda sampige estella barahagararu srustiyagidare,i am really wondered,ivarella modalu elli maya agidru ,any hats off to avadhi,hosa barahagararannu uttejisi baresalu anuvu madikottaddakke,hagu namage odalu avakasha kottaddakke,ee prakriye nirantara vagirali.
    D,RAVI VARMA HOSPET

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: