
ಅನಾವರಣ ಟ್ರಸ್ಟ್ (ರಿ)
ಅನಾವರಣ ಒಂದು ಸಾಂಸ್ಕೃತಿಕ ಸಂಘಟನೆಯಾಗಿದೆ. ವರ್ತಮಾನದ ಸಾಂಸ್ಕøತಿಕ ಸವಾಲುಗಳನ್ನು ಕನ್ನಡದ ತಿಳಿವುಗಳ ಮೂಲಕ ನಿಬಾಯಿಸುವ ಸಲುವಾಗಿ ಇದನ್ನು ಅಸ್ತಿತ್ವಕ್ಕೆ ತರಲಾಗಿದೆ. ಕನ್ನಡದ ಪಾರಂಪರಿಕ ರಂಗ ಕಲೆಗಳ ಕೌಶಲ್ಯಗಳ ಸಂಗೋಪನೆ ಮತ್ತು ಪ್ರದರ್ಶನಗಳ ಮೂಲಕ ಅರಿವನ್ನು ವಿಸ್ತರಿಸುವ ಆಶಯವನ್ನು ಇದು ಹೊಂದಿದೆ. ಕನ್ನಡ ನಾಟಕಗಳ ಅಪರೂಪದ ಪ್ರಯೋಗಗಳನ್ನು ಆಯೋಜಿಸುವುದು ಸೇರಿದಂತೆ ರಾಷ್ಟ್ರಮಟ್ಟದ ಉತ್ಸವಗಳನ್ನು ನಡೆಸುವ ಉದ್ದೇಶವನ್ನು ಹೊಂದಲಾಗಿದೆ.
ವಿನಾಶದ ಅಂಚಿನಲ್ಲಿರುವ ಬೊಂಬೆಯಾಟವನ್ನು ಆಧುನಿಕ ತಂತ್ರಜ್ಞಾನದ ಅಳವಡಿಕೆಯ ಮೂಲಕ ಮತ್ತೆ ಜನಮನ್ನಣೆಯತ್ತ ಕೊಂಡೊಯ್ಯುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಶಾಲಾ ಮಕ್ಕಳಿಗಾಗಿ ಬೊಂಬೆಯಾಟದ ಮೂಲಕ ಕತೆ ಹೇಳುವ ತಂತ್ರವನ್ನು ಕಲಿಸುವುದು ಹಾಗೂ ಈ ಉದೇಶ ಸಾಧನೆಗಾಗಿ ಬೊಂಬೆಯಾಟದ ತಂತ್ರಗಳ ಕಲಿಕೆ ಹಾಗೂ ಪ್ರದರ್ಶನದ ರೆಪೊಟ್ರಿಯನ್ನು ಸ್ಥಾಪಿಸುವ ಕನಸು ಕೂಡ ಸಂಘಟನೆಗಿದೆ. ನಾಡು, ದೇಶ ಹಾಗೂ ವಿದೇಶದ ಶ್ರೇಷ್ಠ ರಂಗ ಪ್ರದರ್ಶನಗಳನ್ನು ಪ್ರಾಯೋಜಿಸುವ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ. ಇತರ ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ ಸಾಂಸ್ಕøತಿಕ ಮಹತ್ವದ ಕಮ್ಮಟ, ವಿಚಾರ ಸಂಕಿರಣ, ತರಬೇತಿ, ಸಂವಾದದಂತಹ ಇನ್ನಿತರ ಕಾರ್ಯಕ್ರಮಗಳನ್ನು ಜಾರಿಗೆ ತರುವ ಉದ್ದೇಶವಿದೆ.
ಈ ಎಲ್ಲಾ ಕೆಲಸಗಳ ಮೂಲಕ ಕನ್ನಡದ ಮುಂದಿನ ತಲೆಮಾರುಗಳನ್ನು ಸಾಮುದಾಯದ ಸಾಂಸ್ಕøತಿಕ ನೆನಪುಗಳ ಜೊತೆ ಜೋಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಲು ವಿಶಿಷ್ಠವಾದ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಈ ಕಾರ್ಯಗಳನ್ನು ಕಾಲಬದ್ಧವಾಗಿ ಹಾಗೂ ಸಾಮಾಜಿಕ ನ್ಯಾಯದ ತತ್ವದ ಆಧಾರದಲ್ಲಿ ಅನುಷ್ಠಾನಕ್ಕೆ ತರುವ ಹೊಣೆಯನ್ನು ಅನಾವರಣ ಸಂಘಟನೆ ಹೊತ್ತಿದೆ.
ಕೃಷ್ಣನ್ ಕುಟ್ಟಿ ಪುಲವರ್ ಸ್ಮಾರಕ ತೊಲಪಾವಕೂತ್ತು ಮತ್ತು ಪಪೆಟ್ ಕೇಂದ್ರ
ಕೇರಳದ ಗುಡಿಗಳಿಗೆ ಸೀಮಿತವಾಗಿದ್ದ ಸಾಂಪ್ರದಾಯಿಕ ಕಲೆಗಳಲ್ಲಿ ಒಂದಾದ ತೊಲಪಾವಕೂತ್ತು ತೊಗಲು ಗೊಂಬೆಯಾಟದ ಒಂದು ಪ್ರಕಾರವನ್ನು ದೇವಸ್ಥಾನದ ಆವರಣದಿಂದ ಹೊರತಂದು ಜಗತ್ತಿಗೆ ಪರಿಚಯಿಸಿದ ಮಹಾನ್ ಕಲಾವಿದ ಶ್ರೀ ಕೆ.ಎಲ್.ಕೃಷ್ಣನ್ ಕುಟ್ಟಿ ಯವರ ನೆನಪಿನಲ್ಲಿ ಸ್ಥಾಪಿಸಲು ಪಟ್ಟ ಈ ಸಂಸ್ಥೆಯು ಸದ್ಯ ಪುಲವಾರ ವಂಶದ 13ನೇ ತಲೆಮಾರಿನ ಉಸ್ತುವಾರಿಯಲ್ಲಿದ್ದು ಕೇರಳದಾದ್ಯಂತ 85ನೇ ದೇವಸ್ಥಾನಗಳಲ್ಲಿ ನಿರಂತರ ಪ್ರದರ್ಶನಗಳನ್ನು ನೀಡುತ್ತಾ ಭಾರತದ ಮೂಲೆ ಮೂಲೆಗಳಲ್ಲೂ ತಮ್ಮ ಈ ಕಲೆಯ ಸಾರವನ್ನು ಕಂಪನ್ನು ಹರಡಿಸಿವುದರಲ್ಲಿ ಯಶಸ್ವಿಯಾಗಿದೆ.
ಸಾಂಪ್ರದಾಯಿಕವಾಗಿ ರಾಮಾಯಣದ ಕತೆಗಳಿಗಷ್ಟೇ ಸೀಮಿತವಾಗಿಸದೇ ಹಲವು ಸಮಕಾಲೀನ ಹಾಗು ಸಾಮಾಜಿಕ ವಸ್ತು ವಿಷಯಗಳನ್ನು ಅಳವಡಿಸಿಕೊಂಡು ಕಲಾಪ್ರಕಾರದ ಕೀರ್ಥಿಪತಾಕೆಯನ್ನು ದೇಶವಿದೇಶಗಳಲ್ಲೂ ಎತ್ತಿ ಹಿಡಿದಿದ್ದಾರೆ. ಗಾಂಧಿ ಕೂತ್ತು, ಜೀಸಸ್ ಕೂತ್ತು, ಮಹಾಬಲಿ ಕೂತ್ತು, ಅಯ್ಯಪ್ಪ ಚರಿತಂ, ಟಾಗೋರರ ನಾಟಕ- ಚಾಂಡಾಲಿಕ, ಪಂಚತಂತ್ರ ಕತೆಗಳು ಹೀಗೆ ಮುಂತಾದ ಕತೆಗಳನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿರ್ದೇಶಕರ ಕುರಿತು
ಪುಲವರ ವಂಶದಲ್ಲಿ ಹುಟ್ಟಿ ವಂಶದ ಸಂಪ್ರದಾಯದಂತೆ ಬಹಳ ಸಣ್ಣ ವಯಸ್ಸಿನಲ್ಲೇ ತೊಲಪಾವಕೂತ್ತು ಕಲಾಪ್ರಕಾರದ ಅಭ್ಯಾಸಕ್ಕೆ ಇಳಿದ ಕಲಾಶ್ರೀ ರಾಮಚಂದ್ರ ಪುಲವರ್, ತಮ್ಮ ತೀರ್ಥರೂಪುರವರಾದ ಗುರು ಶ್ರೀ ಕೆ.ಎಲ್. ಕೃಷ್ಣನ್ ಕುಟ್ಟಿಯವರ ಮಾರ್ಗದರ್ಶನದಲ್ಲಿ ಕೇರಳದ 85 ಕ್ಕೂ ಹೆಚ್ಚು ಗುಡಿಗಳಲ್ಲಿ ಪ್ರದರ್ಶನ ನೀಡುವುದಲ್ಲದೇ ದೇಶದ ಹಲವೆಡೆ ತಮ್ಮ ಕಲಾಪ್ರಕಾರವನ್ನು ಪ್ರಸ್ತುತಿಗೊಳಿಸಿ ಸೈ ಎನಿಸಿಕೊಂಡಿದ್ದಾರೆ.
ವಂಶದ 13ನೇ ತಲೆಮಾರಿನ ಹಿರಿಯ ಸ್ಥಾನದಲ್ಲಿ ನಿಂತು ಸದ್ಯ ಕೇಂದ್ರದ ಉಸ್ತುವಾರಿಯ ಹೊಣೆಯನ್ನು ಹೊತ್ತ ಶ್ರೀಯುತರು ಕಳೆದ ಹದಿನೈದು ವರ್ಶಗಳಿಂದ ನೂರಾರು ಮಂದಿ ಆಸಕ್ತರಿಗೆ ತಮ್ಮ ವಿಶೇಷ ಕಾರ್ಯಗಾರಗಳ ಮೂಲಕ ಈ ಕಲಾಪ್ರಕಾರವನ್ನು ದಾರೆಯೆರೆದಿದ್ದಾರೆ. ಮತ್ತು ರಷ್ಯಾ, ಸ್ವೀಡೆನ್, ಸ್ಪೈನ್, ಐಲ್ರ್ಯಾಂಡ್, ಜರ್ಮನಿ, ಗ್ರೀಸ್, ಸಿಂಗಾಪುರ ಮುಂತಾದ ದೇಶಗಳಿಗೂ ತೊಲಪಾವಕೂತ್ತು ಕಲೆಯನ್ನು ಪರಿಚಯಿಸಿದ ಕೀರ್ಥಿ ಇವರದ್ದು.
ಇವರ ಅವಿಸ್ಮರಣೀಯ ಕೊಡುಗೆಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯೂ ಒಲಿದು ಬಂದಿದ್ದು, ಮದ್ರಾಸ್ ಕ್ರಾಫ್ಟ್ ಫೌಂಡೇಶನ್ನ ದಕ್ಷಿಣ ಚಿತ್ರ ವಿರುದು, ಥೈಲ್ಯಾಂಡ್ ಸರಕಾರ ಪ್ರಶಸ್ತಿ, ಕೇರಳದ ರಾಜ್ಯ ಪ್ರಶಸ್ತಿ, ಕಲಾಶ್ರೀ ಪುರಸ್ಕಾರ ಇನ್ನು ಮುಂತಾದ ಇವರಿಗೆ ದೊರೆತ ಬಿರುದು ಸನ್ಮಾನಗಳು.

ಪ್ರದರ್ಶನದ ಕುರಿತು
ತಂಡವು ಕಂಬರಾಮಾಯಾಣದ ಕೆಲವು ಆಯ್ದ ಭಾಗಗಳನ್ನು ಬೆಂಗಳೂರು ಪಪೆಟ್ ಉತ್ಸವದಲ್ಲಿ ಪ್ರಸ್ತುತಿ ಪಡಿಸುತ್ತಿದ್ದು, ಪ್ರದರ್ಶನದಲ್ಲಿ ರಾಮಾಯಣದ ವನವಾಸ ಪಂಚವಟಿ ಪ್ರಸಂಗ, ಸೀತಾಪಹರಣ, ಜಟಾಯು ವಧೆ, ವಾಲಿ ವಧೆ, ರಾಮ ರಾವಣ ಕಾಳಗ ಹಾಗೂ ಶ್ರೀ ರಾಮ ಪಟ್ಟಾಭಿಷೇಕದ 60 ನಿಮಿಷ ಕಾಲಾವಧಿಯ ಮಾಂತ್ರಿಕ ದೃಶ್ಯಾವಳಿಗಳನ್ನು ನಾವು ನೋಡಬಹುದು.








0 Comments