ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನಾತ್ಮಕಥನದ ಮೂಲಕ……

ಡಾ ಆಮೂರರರು ಎಚ್ಚೆಸ್ವಿ ಅವರ ಆನಾತ್ಮಕಥನ ಪುಸ್ತಕದ ಎರಡನೇ ಭಾಗ ‘ಅಕ್ಕಚ್ಚುವಿನ ಅರಣ್ಯಪರ್ವ’ವನ್ನು ಮೆಚ್ಚಿ ಬರೆದ ಟಿಪ್ಪಣಿ ಇಲ್ಲಿದೆ.

-ಡಾ|ಜಿ.ಎಸ್.ಆಮೂರ
“ಅನಾತ್ಮ”ಕಥನದ ಮೂಲಕವೇ “ಆತ್ಮ”ಕಥನ  ಎನ್ನುವುದನ್ನು ಲಕನ್ ನಂಥ ಮನೋವಿಜ್ಞಾನಿಗಳು  ತೋರಿಸಿಕೊಟ್ಟಿದ್ದಾರೆ.  ಜಗತ್ತು ಒಂದು ಕನ್ನಡಿ ಇದ್ದ ಹಾಗೆ-ಅದೊಂದು “ಮಾಯಾ”ಕನ್ನಡಿ  ಎಂದು ನಂಬಿದವರೂ  ಉಂಟು. ಆದರೆ ಈ ಕನ್ನಡಿಯಲ್ಲಿ  ನೋಡಿದಾಗ ಮಾತ್ರ ನಮ್ಮ ಮುಖ ಪರಿಚಯವಾಗುತ್ತದೆ.  ಮನುಷ್ಯನ ಏಕಾಂತ ಜೀವನದ-ಸ್ಮೃತಿ, ಕಲ್ಪನೆ, ಧ್ಯಾನ,ಶ್ರೀಮಂತಿಕೆಯೂ  ಕೂಡ ಹೊರಜಗತ್ತನ್ನು  ಬಹುಮಟ್ಟಿಗೆ ಅವಲಂಬಿಸಿರುತ್ತದೆ.  ಹೀಗಾಗಿ ಎಚ್ಚೆಸ್ವಿಯವರ ಎರಡೂ ಅನಾತ್ಮಕಥನಗಳು  ಮೆಚ್ಚುಗೆಗಳಿಸುತ್ತವೆ. ಆತ್ಮಕಥನದ ಮೂಲಕ ಒಬ್ಬ ಲೇಖಕ ತನ್ನ ಬದುಕು-ವ್ಯಕ್ತಿತ್ವಗಳ  ಅರ್ಥ, ಸೂತ್ರ, ಅನನ್ಯತೆಗಳನ್ನು ಶೋಧಿಸ ಹೊರಟಾಗ ಅವನಿಗೆ ಈ ಶೋಧದ ಹೊರಗಿನ ಅನುಭವ ಪ್ರಸ್ತುತವಾಗದಿರುವುದರಿಂದ  ಅದು ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ.

ಎಚ್ಚೆಸ್ವಿ ಅವರ ಅನಾತ್ಮಕಥನಗಳು  ಈ ಅಪಾಯದಿಂದ ಪಾರಾಗಿವೆ. ಹೀಗಾಗಿ ಅವುಗಳಲ್ಲಿ ಲೇಖಕನ ವ್ಯಕ್ತಿತ್ವ ಅನಿವಾರ್ಯವಾಗಿ ಮೂಡಿಬರುವುದಲ್ಲದೆ  ಶಿವರಾಮ ಕಾರಂತರ “ಹಳ್ಳಿಯ ಹತ್ತು ಸಮಸ್ತರು”, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ  “ನಮ್ಮೂರ ರಸಿಕರು”-ಮೊದಲಾದ ಕಥನಗಳಲ್ಲಿ ಇದ್ದಂತೆ ಬಾಹ್ಯ ಜಗತ್ತೂ ಪ್ರತಿಫಲಿತವಾಗುತ್ತದೆ.  ಬದುಕನ್ನು ಒಂದು ವಿಸ್ಮಯವಾಗಿ ನೋಡುವ -ವೈಎನ್ಕೆ ಭಾಷೆಯಲ್ಲಿ-ವಂಡರ್ ದೃಷ್ಟಿಯಿದ್ದಾಗ ಮಾತ್ರ ಇದು ಸಾಧ್ಯ. ಕಾವ್ಯದಲ್ಲಿದ್ದಂತೆ ಗದ್ಯದಲ್ಲೂ-ಕಾವ್ಯ ಗದ್ಯದ ಈ ಭೇದ ಅಷ್ಟು ಅವಶ್ಯವೇ?- ಎಚ್ಚೆಸ್ವಿ ಸತತವಾಗಿ ಪ್ರಯೋಗಶೀಲರಾಗಿರುವುದು  ಸಂತಸದ ವಿಷಯ.  ಅನಾತ್ಮಕಥನಕ್ಕಾಗಿ  ಅವರಿಗೆ ಅಭಿನಂದನೆಗಳು.

‍ಲೇಖಕರು avadhi

3 November, 2011

1 Comment

  1. viddullata

    adbhutavada tippani.aamoorarige abhinandanegalu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading