ರಂಗತಂಡ
`ಪ್ರಸಂಗ’
ಪ್ರಸಂಗ ಹಲವು ಹೊಸ ಆಲೋಚನೆಗಳನ್ನು ಹೊತ್ತು ವೇದಿಕೆಗೆ ಅಣಿ ಇಟ್ಟಿರುವ ತಂಡ. ಇದು ನಾಟಕ, ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಜಗತ್ತಿನ ವೈವಿಧ್ಯಮಯ ಪ್ರಸಂಗಗಳಿಂದ ಜನತೆಯ ಮುಂದೆ ಅನಾವರಣಗೊಳ್ಳುವುದು ಇದರ ಮೂಲ ಉದ್ದೇಶ. ಕಲಾಪ್ರಜ್ಞೆಯ ಆರೋಗ್ಯಕರ ದೃಷ್ಟಿ, ಪ್ರೀತಿ ಮತ್ತು ಎಚ್ಚರದೊಂದಿಗೆ ಸಮನ್ವಯ ಸಾಧಿಸುವ ಆಶಯ ಕೂಡಾ ಇವತ್ತು ಮುಖ್ಯವೆಂದು `ಪ್ರಸಂಗ’ ಭಾವಿಸಿದೆ. ಕಲೆಯ ಬಗ್ಗೆ ಅಪಾರ ಕಾಳಜಿ, ಭಿನ್ನವಾಗಿ ಯೋಚಿಸುವ ಗೆಳೆಯರ ಬಳಗವೇ ಈ ತಂಡ. ಇಲ್ಲಿ ಕಲಾವಿದರು, ನಟರು, ಗಾಯಕರು, ಸಾಹಿತಿಗಳು ಈ ತಂಡಕ್ಕೆ ಸ್ಪೂತರ್ಿಯ ಸೆಲೆಯಾಗಿ ತೊಡಗಿಕೊಂಡಿದ್ದಾರೆ.
ಈ ತಂಡ ತನ್ನ ಮಹಾತ್ವಾಕಾಂಕ್ಷೆಯ ಕೆ.ವೈ. ನಾರಾಯಣಸ್ವಾಮಿ ಬರೆದ ನಾಟಕ `ಅನಭಿಜ್ಞ ಶಾಕುಂತಲ’ ನಿದರ್ೆಶಕರಾದ ಪ್ರಕಾಶ್.ಪಿ ಶೆಟ್ಟಿ ಮೂಲಕ ನಿಮ್ಮ ಮುಂದೆ ಬಂದಿದೆ.
ವಿಳಾಸ
ಪ್ರಸಂಗ
48/42/61, ಉಲ್ಲಾಳ ಮೇನ್ ರೋಡ್, 10ನೇ ಕ್ರಾಸ್,
ಮುನೇಶ್ವರ ನಗರ, ಮಲ್ಲತ್ತ ಹಳ್ಳಿ
ಬೆಂಗಳೂರು-56
ಸಂಪರ್ಕ : 9845770196
ಇಟಚಿಟ : ಞಡಿಟಿಚಿರಜಡಿಜ@ರಟಚಿಟ.ಛಿಠಟ <ಟಚಿಟಣಠ:ಞಡಿಟಿಚಿರಜಡಿಜ@ರಟಚಿಟ.ಛಿಠಟ>
`ಅನಭಿಜ್ಞ ಶಾಕುಂತಲ’
ಭಾರತದ ದೇಸಿಜ್ಞಾನ ಪರಂಪರೆಗಳು ನಿರಂತರವಾಗಿ ನಂಬಿಕೊಂಡು ಬಂದಿರುವ ನೆನಪಿನ ಕಥನದ ದೃಶ್ಯರೂಪಕ. ಭಾರತೀಯ ಎನ್ನುವ ಮರೆವಿನ ಚಿಂತನೆಗಳು ನಿರೂಪಿಸುತ್ತಿರುವ ಪುರುಷ `ವಿಸ್ಮೃತಿ’ಗಳ ಹುಸಿತನವನ್ನು ಈ ನಾಟಕ ಬಯಲುಗೊಳಿಸಲು ಪ್ರಯತ್ನಿಸುವುದು ಮಹತ್ವದ ಸಂಗತಿ. ಇದು ಕನ್ನಡ ರಂಗಭೂಮಿ ಇಂದು ಶೋಧಿಸುತ್ತಿರುವ ಹೊಸ ರೂಪಕಕ್ಕೆ ಸಾಕ್ಷಿ.
ನಾಟಕಕಾರರು
ಕೆ.ವೈ. ನಾರಾಯಣಸ್ವಾಮಿ
ಪಂಪಭಾರತದ ಕೆ.ವೈ. ನಾರಾಯಣಸ್ವಾಮಿ ಎಂದೇ ಕರೆಯಲ್ಪಡುವ ಇವರ ಕಾರ್ಯಕ್ಷೇತ್ರ ಕಾವ್ಯ, ವಿಮಶರ್ೆ, ನಾಟಕ, ಸಿನಿಮಾಗಳಲ್ಲಿ ವಿಸ್ತಾರವಾಗಿದೆ. ಇವರ `ನೀರದೀವಿಗೆ’ ಸಂಶೋಧನಾ ಕೃತಿ ಸಾಹಿತ್ಯ ಪ್ರಮುಖರ ಮನ್ನಣೆ ಗಳಿಸಿ ಭಿನ್ನ ಆಲೋಚನಾ ಕ್ರಮವೊಂದನ್ನು ರೂಪಿಸಿಕೊಟ್ಟದೆ. ಕುವೆಂಪು ಅವರ ಮಲೆಗಳಲ್ಲಿ ಮಧುಮಗಳು ರಂಗಕೃತಿ ಇವರ ಪ್ರತಿಭೆಗೆ ಸಾಕ್ಷಿಯಂತಿದೆ. ಕಳವು ಹುಲಿಸೀರೆ ಮುಂತಾದ ನಾಟಕಗಳನ್ನು ಬರೆದಿರುವ ನಾರಾಯಣಸ್ವಾಮಿ ಈಗ ನಮ್ಮ ತಂಡಕ್ಕೆ ಬರೆದಿರುವ `ಅನಭಿಜ್ಞ ಶಾಕುಂತಲ’ ಭಾರತೀಯ ಪ್ರೇಮ ಪುರಾಣದ ತವಕ ತಲ್ಲಣಗಳ ಚೇತೋಹಾರಿ ಚಿತ್ರಣದ ಭಿತ್ತಿಗಳನ್ನ ಎಳೆ ಎಳೆಯಾಗಿ ಬಿಡಿಸಿರುವ ಕೃತಿ.
ನಿದರ್ೆಶಕರು
ಪ್ರಕಾಶ್. ಪಿ ಶೆಟ್ಟಿ
ರಂಗನಂಟಿಗೆ ಬಂದ ದಿನಗಳಿಂದಲು ಪ್ರಕಾಶ್.ಪಿ ಶೆಟ್ಟಿ ನಾಟಕದ ವಿವಿಧ ಆಯಾಮಗಳಲ್ಲಿ ತಮ್ಮನ್ನು ಒರೆಗೆ ಹಚ್ಚಿಕೊಂಡವರು. ವೃತ್ತಿ-ಪ್ರವೃತ್ತಿಗಳ ಪ್ರಭೇದಗಳ ಹಂಗಿಲ್ಲದ ಇವರು ನಟ, ಗಾಯಕ, ನೇಪಥ್ಯ, ಕಲಾನಿದರ್ೆಶಕ, ಸಂಘಟಕನಾಗಿ ರೂಪುಗೊಂಡ ಬಗೆ ಹಲವು ಅಚ್ಚರಿಗಳನ್ನು ಮೂಡಿಸಿದೆ. ಇವರ ನಿಷ್ಠೆ-ಬದ್ದತೆ ಪ್ರಶ್ನಾತೀಥವಾದದ್ದು. ಇತ್ತೀಚಿಗೆ ನೇಪಥ್ಯದ ಗೆಳೆಯರೊಡಗೂಡಿ ಕಟ್ಟಿದ `ರಂಗಮಂಟಪ’ ಇಂದು ರಂಗಭೂಮಿಯಲ್ಲೊಂದು ಹೊಸ ಸಂಚಾರಕ್ಕೆ ಸಾಕ್ಷಿಯಾಗಿದೆ. `ಗಾಂಧಿಬಂದ’ ನಾಟಕದ ನಿಮರ್ಾಣ ರಂಗಭೂಮಿಗೆ ಹೊಸ ಚೈತನ್ಯವನ್ನು ನೀಡಿದೆ.
`ಪ್ರಸಂಗ’ ತಂಡದ ಹೊಸ ಕನಸಿಗೆ ಕೆ.ವೈ. ನಾರಾಯಣಸ್ವಾಮಿ ಅವರ `ಅನಭಿಜ್ಞ ಶಾಕುಂತಲ’ ವನ್ನು ನಿದರ್ೆಶಿಸಿರುವ ಪ್ರಕಾಶ್ ಶೆಟ್ಟಿ ಶಾಕುಂತಲೆಯ ಹೊಸ ಪ್ರಸಂಗವನ್ನು ರಂಗಕ್ಕೆ ನೀಡಿದ್ದಾರೆ.
ನಿದರ್ೆಶಕರ ಮಾತು
ಈ ನಾಟಕವು ಚರಿತ್ರೆಯನ್ನು ವಿಭಿನ್ನ ರೀತಿಯಲ್ಲಿ ಅಥರ್ೈಸುವ ರೀತಿ ಹಾಗೂ ಹಲವು ತಿರುವುಗಳುಳ್ಳ ವಿಲಕ್ಷಣ ನಿರೂಪಣಾ ಕ್ರಮ ನನ್ನನ್ನು ಮೋದಲಿಗೆ ಆಕಷರ್ಿಸಿದ ಸಂಗತಿಗಳು.
ಕಾಳಿದಾಸನ ಕೃತಿಗಳೊಂದಿಗೆ ಕನ್ನಡದಲೋಕ ಸರಿ ಸುಮಾರು ನೂರುವರ್ಷಗಳಿಂದಲೂ ಅತ್ಯಂತ ಉತ್ಸಾಹದಿಂದ ಮತ್ತೆ ಮತ್ತೆ ಸಂವಾದಕ್ಕೆ ಮರುಸಂವಾದಕ್ಕೆ ತೊಡಗಿದೆ. ಆದರೆ ಈ ಸಂವಾದಗಳು `ಪುರುಷ’ ವ್ಯಾಖ್ಯಾನಗಳನ್ನು ದಾಟಲಿಲ್ಲ. ಆದರೆ ಈ ನಾಟಕ ಹೆಣ್ಣಿನ ನೋಟದ ಮೂಲಕ ಕಾಳಿದಾಸನನ್ನು ಕಟ್ಟಿಕೊಡುವ ಪ್ರಯತ್ನವಾಗಿದೆ.
`ಅನಭಿಜ್ಞ ಶಾಕುಂತಲ’ ಸದ್ಯ ಪ್ರಚಲಿತದಲ್ಲಿರುವ ಸಾಮಾಜಿಕ ಸಾಂಸ್ಕೃತಿಕ ವಾದಗಳೊಂದಿಗೆ ತಕರಾರನ್ನು ಮಂಡಿಸುವುದು ನನ್ನನ್ನು ಕಾಡಿಸಿದ ಮತ್ತೊಂದು ಸಂಗತಿ. ಈ ನಾಟಕ ಕಾಳಿದಾಸನ ಕುರಿತಾದ ಈವರೆಗಿನ ತಿಳುವಳಿಕೆಯನ್ನು ಅಳಿಸಲು ಪ್ರಯತ್ನಿಸುವುದಲ್ಲದೆ ಹೆಣ್ಣು ನೋಟಕ್ರಮವನ್ನು ರಂಗಭಾಷೆಯಲ್ಲಿ ಕಟ್ಟಿಕೊಡುವ ಸವಾಲನ್ನು ನನ್ನ ಮುಂದೆ ಇರಿಸಿತ್ತು.
ಈ ನಾಟಕ ಪಠ್ಯ ರಂಗಪಠ್ಯ ವಾಗುವಲ್ಲಿ ಸಂಗೀತ, ನೃತ್ಯ, ಕಲೆ, ರಂಗಪರಿಕರ, ಬೆಳಕು, ವಸ್ತ್ರವಿನ್ಯಾಸ ಹೀಗೆ ರಂಗದ ಎಲ್ಲಾ ವಿಭಾಗಗಳನ್ನು ಸಮರ್ಥವೂ ಅರ್ಥಪೂರ್ಣವೂ ಆಗಿ ರಂಗದ ಮೇಲೆ ತರುವುದರ ಮೂಲಕ ಮಾಯಾ ಕನ್ನಡಿಯಂಥ ಪರಿಣಾಮವನ್ನು ಪ್ರೇಕ್ಷಕರಿಗೆ ವಗರ್ಾಯಿಸುವ ಹೊಣೆಗಾರಿಯನ್ನು ಈ ನಾಟಕ ನಿದರ್ೆಶನದ ಮೂಲಕ ನಿಭಾಯಿಸಲು ಪ್ರಯತ್ನಿಸಿದ್ದೇನೆ..
ಮರೆವಿನ ರಾಜಕಾರಣ
ಕಾಳಿದಾಸ ಬರೆದ ಅಭಿಜ್ಞಾನ ಶಾಕುಂತಲ ನಾಟಕ ಓದುಗರನ್ನು ಬಹುವಾಗಿ ಕಾಡಿಸಿದೆ. ದುಶ್ಯಂತನಿಗಾಗಿ ದೂರ್ವಾಸ ಮುನಿಯ ಶಾಪದ ಪ್ರಸಂಗವನ್ನು ತಂದು ಸೇರಿಸಿದನೆಂದು ಕಾಳಿದಾಸನ ಮೇಲೆ ಆರೋಪದ ಹೊರೆಯನ್ನು ಹೊರಿಸಿದವರಿದ್ದಾರೆ. ಅವನ ಮರೆವಿಗೆ ಒಂದು ನೆಪವನ್ನು ಹುಡುಕುವುದು ನಾಟಕಕಾರನ ಗುರಿಯಾಗಿತ್ತೆಂಬುದು ಈ ಟೀಕೆಯ ತಿರುಳು. ಆದರೆ ಶಕುಂತಲೆಗೆ ಮರೆವು ಕವಿಯಲಿಲ್ಲವಲ್ಲ. ಶಮೀವೃಕ್ಷದ ಒಡಲಿನ ಬೆಂಕಿಯಂತೆ ಅವಳ ಮಡಿಲಿನಲ್ಲಿ ಆ ನೆನಪು ತುಂಬಿಕೊಂಡಿದೆ. ಅವಳು ಹಾಗೆ ಮರೆಯದೇ ಇದ್ದುದರಿಂದಲೇ ನಾಟಕದ ಕೊನೆಯ ಅಂಕದಲ್ಲಿ ಅವಳಿಗೆ ಮರಳಿ ‘ಪುನಸ್ಸಮಾಗಮನದ ನೆನಪಿಗಾಗಿ’ ಉಂಗುರವನ್ನು ತೊಡಿಸಲು ದುಷ್ಯಂತ ಮುಂದಾದಾಗ ಆ ಉಂಗುರದಲ್ಲಿತನಗೆ ನಂಬಿಕೆಯಿಲ್ಲವೆಂದು ಅದು ‘ಆರ್ಯಪುತ್ರ’ನ ಬಳಿಯಲ್ಲೇ ಇರಲಿ ಎನ್ನುತ್ತಾಳೆ. ಇದೇ ಶಕುಂತಲೆ ಅಯ್ದನೆಯ ಅಂಕದಲ್ಲಿತನ್ನನ್ನು ಮರೆತ ದುಷ್ಯಂತನ್ನು ‘ಅನಾರ್ಯ’ ಎಂದು ಕರೆದಿದ್ದಳೆಂಬುದನ್ನು ನೆನೆದರೆ ಅವಳ ಏಳನೆಯ ಅಂಕದ ಮಾತಿನಲ್ಲಿ ಬರುವ ‘ಅರ್ಯಪುತ್ರ’ ಎಂಬ ಮಾತಿನ ಮೊನಚು ಇರಿಯುವಂತಿದೆ. ಹಾಗೆ ನೋಡಿದರೆ ದುಷ್ಯಂತನಿಗೆ ಮರೆವು ಕವಿದಿರಲಿಲ್ಲ. ನೆನಪಿನ ಪದ-ಪದಾರ್ಥಗಳ ನಂಟಿನಕೊಂಡಿ ಕಳಚಿ ಹೋಗಿತ್ತು. ಅವನಲ್ಲಿ ಪದವಿತ್ತು; ಪದಾರ್ಥವಿರಲಿಲ್ಲ. ಇಲ್ಲವೇ ಪದಾರ್ಥವನ್ನು ಬಗೆಯುವ ಬಯಕೆ ಕಮರಿ ಹೋಗಿತ್ತು. ಹಾಗಾಗಿಯೇ ಅಯ್ದನೆಯ ಅಂಕದ ಬಳಿಕ ಅವನು ಹಲವು ಬಗೆಯ ಕಾಡುವಿಕೆಗಳಿಗೆ ಒಳಗಾಗುತ್ತಾನೆ. ಇದು ನೆನಪಿನ ಗಂಡುನೆಲೆಯೇ ಇದ್ದೀತು. ಹಾಗಾಗಿಯೇ ಕೆವೈ ನಾರಾಯಣ ಸ್ವಾಮಿಯವರು ಮತ್ತೊಮ್ಮೆ ಶಾಕುಂತಲ ನಾಟಕದ ಜಾಲಕ್ಕೆ ಸಿಲುಕ ಬೇಕಾಗಿ ಬಂದಿದೆ.ಅವರ ‘ಅನಭಿಜ್ಞ ಶಾಕುಂತಲ’ ಈ ನೆನಪು ಮರೆವಿನ ಸುಳಿಯ ಹೆಣ್ಣು ನೆಲೆಗಳನ್ನು ಹುಡುಕುವ ತವಕದಿಂದ ಹುಟ್ಟಿದೆಯೆಂದು ತಿಳಿಯುತ್ತೇನೆ.
ಕಾಳಿದಾಸನ ಹಲವು ಬರಹಗಳನ್ನು ಬಳಸಿ ಅವನ ಬದುಕಿನ ಎಳೆಗಳನ್ನು ಜೋಡಿಸುವ ಕೆಲಸ ಹಲವರಿಂದ ನಡೆದಿದೆ. ಅವನು ಕಟ್ಟಿದ ಗಂಡುಗಳು ಮತ್ತು ಹೆಣ್ಣುಗಳು ಈ ನೆನಪು-ಮರೆವು, ಕೂಡುವಿಕೆ-ಅಗಲುವಿಕೆ, ಹುಟ್ಟು-ಸಾವುಗಳ ಚಕ್ರದೊಳಗೆ ಸಿಲುಕಿರುವುದನ್ನು ಅವನ ಕಾವಯ, ನಾಟಕಗಳನ್ನು ಓದಿ ಅರಿತವರು ಕಾಳಿದಾಸನೂ ಇಂತದೇ ಕಾಡುವಿಕೆಗೆ ಒಳಗಾಗಿದ್ದಿರಬಹುದೆಂದು ತಿಳಿಯುತ್ತಾರೆ. ನಾನು ಮೇಲೆ ಗಂಡು ನೆಲೆ-ಹೆಣ್ಣು ನೆಲೆ ಎಂಬ ಮಾತುಗಳನ್ನು ಬಳಸಿದೆ.ಆದರೆಅದು ಗಂಡಸಿನ ಮತ್ತು ಹೆಂಗಸಿನ ನೆಲೆ ಎಂದು ತಿಳಿಯಬೇಕಿಲ್ಲ. ನೆನಪು-ಮರೆವಿನ ಗಂಡು ನೆಲೆಯಲ್ಲಿ ಪದವಿರುತ್ತದೆ;ಪದಾರ್ಥವಿರುವುದಿಲ್ಲ. ಆದರೆಅದೇ ಹೆಣ್ಣು ನೆಲೆಯಲ್ಲಿ ಪದಾರ್ಥವಿದ್ದರೂ ಪದವಿರುವುದಿಲ್ಲ. ಇದನ್ನು ಹೀಗೂ ಹೇಳಬಹುದು. ನೆನಪನ್ನು ಕಳೆದುಕೊಳ್ಳುವ ಹಕ್ಕು ಗಂಡಸಿಗೆ ಇದೆಯೆಂದೂ. ಅದನ್ನು ಜತನದಿಂದ ಕಾಯ್ದುಕೊಳ್ಳುವ ಹೊಣೆಯು ಹೆಂಗಸಿಗೆ ಇದೆಯೆಂದು ತಿಳಿದರೆ ಅದುಎಲ್ಲವನ್ನೂ ಸರಳಗೊಳಿಸಿದಂತೆ ಆಗುತ್ತದೆ. ಗಂಡು ನೆಲೆಯಲ್ಲಿ ನೆನಪು ತಿರುಳು ತಿಳಿಯದ ಪದವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಹೆಣ್ಣು ನೆಲೆಯಲ್ಲಿಅದು ತಿರುಳಿದ್ದರೂ ಮೈ ಪಡೆಯದೆ ಉಳಿದು ಹೋಗಿರುತ್ತದೆ. ಕೆವೈಎನ್ ಈ ನಾಟಕದಲ್ಲಿ ನೆನಪಿನ ಹೆಣ್ಣು ನೆಲೆಗಳನ್ನು ಕಾಣಲು ಹೊರಟಿದ್ದ್ದಾರೆಂದು ಹೇಳಿದ್ದನ್ನು ಈ ನಿಟ್ಟಿನಲ್ಲಿ ತಿಳಿಯಬೇಕು.
ಧಾರಾನಗರದ ರಾಜಕುಮಾರಿ, ಕಾಳಿದಾಸನ ಎಳವೆಯ ಗೆಳತಿ ಮಲ್ಲಿಕಾ ಮತ್ತು ಹಾಡಿಯ ನಾಯಕನ ಸೊಸೆ ಈ ಮೂವರೂ ಹುಡುಕುತ್ತಿರುವುದು ತಮ್ಮ ನೆನಪಿನಲ್ಲಿ ಉಳಿದಿದ್ದೂ ಮೈ ತಳೆಯದಿರುವ ಕಾಳಿದಾಸನನ್ನು. ಅದಕ್ಕಾಗಿಅವರ ಬದುಕಿನ ಹಳೆಯ ಪುಟಗಳ ಜತೆಗೆ, ಕಾಳಿದಾಸನ ಬರಹಗಳನ್ನು ಹಾಗೂ ಅವನ ಸಾವಿನ (ಕೊಲೆಯ) ಬೇರನ್ನು ಅಗೆಯುವ ಕೆಲಸ ಇವೆಲ್ಲವನ್ನೂ ನಾಟಕ ಬಳಸಿಕೊಳ್ಳುತ್ತದೆ. ಇದರೊಡನೆ ತಪ್ಪಿಗೆದಂಡನೆ ಎಂಬ ಎಳೆಯೂ ಸೇರಿಕೊಳ್ಳುತ್ತದೆ. ಕಾಳಿದಾಸನನ್ನು ಕಟ್ಟುವ ಕೆಲಸದಲ್ಲಿತೊಡಗಿರುವ ಈ ಮೂವರೂ ಅವನ ಸಾವಿನ ಹೊಣೆಗಾಗಿ ಸೆರೆಮನೆ ಸೇರುವಕಟಕಿಯೂ ನಾಟಕದಲ್ಲಿ ಸೇರಿಕೊಂಡಿದೆ. ‘ನೆನಪಿಗೆ ಬಂದ ಶಾಕುಂತಲ’ ನಾಟಕದಲ್ಲಿ ದುಷ್ಯಂತ ಮತ್ತು ಶಕುಂತಲೆಯರು ಮಗ ಭರತನಿಂದಾಗಿ ಮರಳಿ ಸೇರುತ್ತಾರೆ. (ಸೇರಿದರೂ ಬಿರುಕು ಮುಚ್ಚಲಾರದಂತಿರುತ್ತದೆ) ‘ಮರೆತು ಹೋದ ಶಾಕುಂತಲ’ ಎಂಬ ಈ ನಾಟಕದಲ್ಲಿತನ್ನ ಮಗನಿಂದಾಗಿ ಕಾಳಿದಾಸ ಮರವೆಗೆ ಸಲ್ಲುತ್ತಾನೆ. ಈ ಮೂವರೂ ತಾವು ಕಟ್ಟಿಕೊಳ್ಳಲಾಗದ ಕಾಳಿದಾಸನ ನೆನಪುಗಳ ಹೊರೆಯೊಡನೆ ಬದುಕುವ ದಂಡನೆಗೆ ಒಳಗಾಗುತ್ತಾರೆ. ಮರೆವು-ನೆನಪಿನ ಈ ಹೆಣ್ಣುನೆಲೆಯ ಹೊರೆೆ ಮತ್ತು ಹೊಣೆಗಳನ್ನು ನಾಟಕ ನೋಡುಗರಿಗೆ ತೆರೆದಿಡುತ್ತಿದೆ. ಈ ಹುಡುಕಾಟವನ್ನು ಬರಹಕ್ಕೆತಂದು ಅದು ಕಣ್ಣು ಕಿವಿಗಳ ಮೂಲಕ ನಮ್ಮ ಒಳಗಿಳಿಯುವಂತೆ ಮಾಡುವಲ್ಲಿ ಕೆವೈಎನ್ ಗೆದ್ದಿದ್ದಾರೆ.
-ಡಾ. ಕೆ.ವಿ. ನಾರಾಯಣ
ಸಂಸ್ಕೃತಿ ಚಿಂತಕರು






0 Comments