ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನಂತಮೂರ್ತಿಯವರಿಗೊಂದು ಮನವಿ..

ಕಾರ್ಪೋರೇಟ್ ಧೂರ್ತರು ತೋಡಿದ ಖೆಡ್ಡಾಕ್ಕೆ ಬೀಳಬೇಡಿ : ಅನಂತಮೂರ್ತಿಯವರಿಗೊಂದು ಮನವಿ

ಜಿ ಎನ್ ನಾಗರಾಜ್

ಮೋದಿಯವರನ್ನು ಪ್ರಧಾನಿ ಪಟ್ಟಕ್ಕೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಅನಂತಮೂರ್ತಿಯವರು ಭಾನುವಾರ ನೀಡಿದ ಹೇಳಿಕೆ, ಒಂದು ಚರ್ಚೆಯನ್ನು ಹುಟ್ಟು ಹಾಕಿದೆ. ಒಂದು ಕಡೆ ಸಂಘ ಪರಿವಾರದ ಭಕ್ತರು, ಮೋದಿ ಭಕ್ತರು ಅನಂತಮೂರ್ತಿಯವರ ಬಗ್ಗೆ  ತಮ್ಮ ಫ್ಯಾಸಿಸ್ಟ್ ಅಸಹನೆಯನ್ನು ತೋರಿಸುತ್ತಿದ್ದಾರೆ. ಮತ್ತೊಂದು ಕಡೆ ಪ್ರಜಾಪ್ರಭುತ್ವೀಯ, ಸೆಕ್ಯುಲರ್ ( ಜಾತ್ಯಾತೀತ ) ಭಾರತದ ಬಗ್ಗೆ ದಿನನಿತ್ಯ ದನಿಯೆತ್ತುತ್ತಿರುವ ಪ್ರಗತಿಪರ ಸಾಹಿತಿ- ಕಲಾವಿದರ ಪ್ರತಿಕ್ರಿಯೆಗಳನ್ನು ನೋಡಿದರೆ ಮೋದಿಯವರ ಆಯ್ಕೆ ಮಾಡಿದವರ ಲೆಕ್ಕಾಚಾರ ಫಲಿಸುತ್ತಿದೆ ಎಂದೆನಿಸುತ್ತಿದೆ.
ಇನ್ನು ಮೋದಿಯ ಪಟ್ಟ , ಪಿಕ್ ಪ್ಯಾಕೆಟ್-ಕೊಲೆಗಾರ ಚರ್ಚೆಗೆ ಬರೋಣ. ಮೋದಿಯವರನ್ನು ಪ್ರಧಾನಿ ಪಟ್ಟದ ಅಭ್ಯರ್ಥಿಯಾಗಿಸಲು ಯಾರು ಯಾರೆಲ್ಲ ಪ್ರಯತ್ನ ಪಟ್ಟರು ಮತ್ತು ಏಕೆ ಎಂಬುದನ್ನು ಎಲ್ಲ ಮಗ್ಗಲುಗಳಿಂದ ವಿಶ್ಲೇಷಿಸಿದಾಗಲೇ ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ನಮ್ಮ ಅಯ್ಕೆ ಏನು ಎಂಬ ಬಗ್ಗೆ ಸ್ಪಷ್ಠ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುವುದು. ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಸೂಚಿಸಿದವರು ಮತ್ತು ಅದಕ್ಕಾಗಿ ಇನ್ನಿಲ್ಲದ ಪ್ರಯತ್ನಪಟ್ಟವರು ಯಾರು ಎಂಬುದು ಇತ್ತೀಚಿನ ದಿನಗಳಲ್ಲಿ ದಿನ ನಿತ್ಯ ವರದಿಯಾಗಿದೆ.

ಆರೆಸ್ಸೆಸ್ , ಅದರ ಪರಿವಾರ ಮೋದಿಯನ್ನು ಆಯ್ಕೆ ಮಾಡುವುದು ಸಹಜ. ಮೋದಿಯ ಚಿಂತನೆ ಹಾಗೂ ಕ್ರೌರ್ಯದ, ನರಮೇಧದ ಕೃತ್ಯಗಳಿಗೂ ಸಂಘ ಪರಿವಾರಕ್ಕೂ ಮೇಳವಿದೆ ಎಂಬ ಬಗ್ಗೆ ಯಾರಿಗೂ ಸಂಶಯವಿಲ್ಲ. ಆದರೆ ಅದೊಂದೇ ಮಗ್ಗುಲನ್ನು ನೋಡಿ ನಮ್ಮ ದೇಶದ ಅತ್ಯಂತ ಪ್ರಮುಖ ರಾಜಕೀಯ ತೀರ್ಮಾನ ಮಾಡಬಹುದೇ? ಮೊದಿಯನ್ನು ಅರೆಸ್ಸೆಸ್ಸಿನವರು ಯೋಚನೆ ಮಾಡುವುದಕ್ಕೂ ಮೊದಲು ಲೆಕ್ಕ ಹಾಕಿದವರು ಹಾಗೂ ಸೂಚಿಸಿದವರು ನಮ್ಮ ದೇಶದ ಕಾರ್ಪೋರೇಟ್ ವಲಯದ ಕೆಲವು ಪ್ರಮುಖರು. ಅಲ್ಲಿಯವರೆಗೂ ಅದ್ವ಻ನಿಯೋ, ಅರುಣ ಜೈಟ್ಲಿಯೋ, ಸುಷ್ಮಾಸ್ವರಾಜೋ ಎಂಬ ಸ್ಫರ್ಧೆ ನಡೆಯುತ್ತಿದ್ದದ್ದು, ಇವರಲ್ಲಿ ಯಾರು ಎನ್ ಡಿಎ ಕೂಟಕ್ಕೆ ಮತ್ತಷ್ಟು ಸಹಚರರನ್ನು ಪಡೆಯುವುದಕ್ಕೆ ಪ್ರಯೋಜನ ಎಂದು ಚರ್ಚೆ ನಡೆಯುತ್ತಿದ್ದದ್ದು ಇದ್ದಕ್ಕಿದ್ದಂತೆ ಮೋದಿಯ ಕಡೆ ವಾಲಿತು.
ಗುಜರಾತ್ ಚುನಾವಣೆಯ ಮೂರನೇ ಬಾರಿ ಗೆಲುವಿನ ನಂತರ ದೇಶದ ಕಾರ್ಪೋರೇಟ್ ದೊರೆಗಳು ಈ ತೀರ್ಮಾನಕ್ಕೆ ಬಂದು ಅನೇಕ ರಾಷ್ಟ್ರೀಯ ಸಮಾವೇಶ, ವಿಚಾರ ಸಂಕಿರಣಗಳಿಗೆ ಆಹ್ವಾನಿಸಲಾರಂಭಿಸಿದರು. ತಮ್ಮ ಒಡೆತನದ ಮಾಧ್ಯಮಗಳಲ್ಲಿ ಪ್ರೊಜೆಕ್ಟ್ ಮಾಡಲಾರಂಭಿಸಿದರು. ಮೋದಿಯನ್ನು ಭೇಟಿ ಮಾಡಿ ಚರ್ಚಿಸಿದರು. ಅಲ್ಲಿಯವರೆಗೆ ನೆನೆಗುದಿಗೆ ಬಿದ್ದಿದ್ದ ಬಿಜೆಪಿ ನಾಯಕತ್ವದ ಪ್ರಶ್ನೆಯನ್ನು ಆರೆಸ್ಸಸ್ಸ್ ಕೈಗೆತ್ತಿಕೊಂಡು ಹಲವು ಹಂತದ ಚರ್ಚೆಯ ನಂತರ ಅಂತಿಮಗೊಳಿಸಿತು. ಬಿಜೆಪಿ, ಎಂಬುದು ಬೇರೆಲ್ಲಾ ರಾಜಕೀಯ ಪಕ್ಷಗಳಂತೆ ಸ್ವತಂತ್ರ ರಾಜಕೀಯ ಪಕ್ಷವಲ್ಲ ಅದು ಕೇವಲ ಆರೆಸ್ಸೆಸ್ ನ ರಾಜಕೀಯ ಮುಖವಾಡ ಎಂಬ ಸತ್ಯ ಈ ಎರಡೂ ಸಂಘಟನೆಗಳು ಎಷ್ಟೆಲ್ಲಾ ಮರೆಮಾಚಲು ಪ್ರಯತ್ನಿಸಿದರೂ ಕೂಡ ಇನ್ನೆಂದೂ ನಿರಾಕರಿಸಲಾಗದಂತೆ ಸಾಬೀತಾಗಿದೆ.
ಕಾರ್ಪೋರೇಟ್ ಕುಳಗಳು ಹಾಗೂ ಹಿಂದುತ್ವವಾದೀ ಮುಖವಾಡ.
ಮೋದಿಯವರ ನರಮೇಧದ ಪ್ರಕರಣಗಳು, ಎನ್ ಕೌಂಟರ್ ಕೊಲೆಗಳು ಇತ್ಯಾದಿಗಳ ಬಗ್ಗೆ ಸುಪ್ರೀಂ ಕೋರ್ಟ್ ನ ಛೀಮಾರಿಗಳು ಮತ್ತನೇಕ ಪ್ರಕರಣಗಳು ಜಗಜ್ಜಾಹೀರಾಗಿದ್ದರೂ ಭಾರತದ ಕಾರ್ಪೊರೇಟ್ ವಲಯ ಒಂದು ರೀತಿ ಏಕ ಕಂಠದಿಂದ ಮೋದಿಯವರ ಹಾಡಿ ಹೊಗಳುತ್ತಿರುವುದು ಏನನ್ನು ತೋರಿಸುತ್ತದೆ ? ಕಾರ್ಪೋರೇಟ್ ವಲಯಕ್ಕೆ ನಮ್ಮ ದೇಶದ ಪ್ರಜಾಪ್ರಭುತ್ವ , ಸಂವಿಧಾನ , ಜಾತ್ಯಾತೀತತೆ, ನ್ಯಾಯಾಂಗ ಇವು ಯಾವುದರ ಬಗ್ಗೆ ಯೂ ತಿಲ ಮಾತ್ರ ಗೌರವವಿಲ್ಲ ಅವರಿಗೆ ಕೇವಲ ಸಾರ್ವಜನಿಕ ಸಂಪತ್ತನ್ನು ಕಬಳಿಸುವುಕ್ಕೆ, ದರ್ಲಾಭ ಗಳಿಸುವುದಕ್ಕೆ ಯಾರು ತಮಗೆ ಅನುವಾಗಿರುತ್ತಾರೆ ಎಂಬುದಷ್ಟೇ ಮುಖ್ಯ ಎಂಬುದೂ ಕೂಡ ಈ ಪ್ರಕರಣದಲ್ಲಿ ಸಂಶಯಕ್ಕೆಡೆಯಿಲ್ಲದಂತೆ ಸಾಬೀತಾಗಿದೆ.

ಸ್ವಾತಂತ್ರ್ಯ ಚಳುವಳಿಯಲ್ಲಿ ಕಾಂಗ್ರೆಸ್ ಗೆ , ಗಾಂಧೀಜಿಯವರಿಗೆ ಬಂಬಲ ನೀಡಿದ್ದು ಇದೇ ಕಾರ್ಪೋರೇಟ್ ವಲಯ ಎಂಬುದನ್ನು ನೆನಪಿಸಿಕೊಳ್ಳೋಣ. ಈ ಕಾರ್ಪೋರೇಟ್ ವಲಯ ಎಂಬುದಕ್ಕೆ ತಮ್ಮ ಲೋಭ, ಸ್ವಾರ್ಥ, ದುರ್ಲಾಭಕ್ಕೆ ಯಾವ ಕಾಲಕ್ಕೆ ಯಾರೆಲ್ಲಾ ಪ್ರಯೋಜನಕಾರಿಯಾಗುತ್ತಾರೋ ಅವರನ್ನೆಲ್ಲಾ ಬಳಸಿಕೊಳ್ಳತ್ತಾರೆ ಎಂಬುದಕ್ಕೆ ಅವರ ನಮೋರಾಗವೇ ಸಾಕ್ಷಿ.. ಈ ಕಾರ್ಪೋರೇಟ್ ವಲಯದ ಒತ್ತಾಯಕ್ಕೆ ಆರೆಸ್ಸೆಸ್- ಬಿಜೆಪಿ ಮಣಿದಿದೆ ಎಂಬುದು ಏನು ತೋರಿಸುತ್ತದೆ ಬಿಜೆಪಿ ಎಂಬುದು ಹಿಂದುಗಳ ಉದ್ಧಾರಕ್ಕಾಗಿ, ಭಾರತದ ರಾಷ್ಟ್ರೀಯ ಗೌರವವನ್ನು ಎತ್ತಿ ಹಿಡಿಯುವುದಕ್ಕಾಗಿ ಎಂಬುದೂ ಕೂಡ ಒಂದು ಮುಖವಾಡವಷ್ಟೇ ಎಂಬುದು ಗೊತ್ತಾಗುತ್ತದೆ. ಮೋದಿಯವರನ್ನು ಏಕೆ ಕಾರ್ಪೋರೇಟ್ ವಲಯ ಓಲೈಸುತ್ತಿದೆ ಎಂಬುದು ಕೂಡ ಇಂದು ಜನಜನಿತವಾದ ವಿಷಯ. ದೊಡ್ಡ ದೊಡ್ಡ ಕಾರ್ಪೋರೇಟ್ ವಲಯಕ್ಕೆ ಇಡೀ ಗುಜರಾತ್ ನ ಭೂಮಿ ಮತ್ತಿತರ ಸಂಪತ್ತನ್ನು, ಬಜೆಟ್ ಅನ್ನು ತೆರೆದಿಟ್ಟದ್ದೇ ಅವರು ಕಾರ್ಪೋರೇಟ್ ವಲಯದ ಡಾರ್ಲಿಂಗ್ ಆಗಲು ಕಾರಣವಾಯಿತು. ಆದ್ದರಿಂದ ಅವರ ಕಟ್ಟರ್ ಹಿಂದುತ್ವವಾದ , ಕೋಮುಗಲಭೆ ಇವುಗಳೆಲ್ಲಾ ಕಾರ್ಪೋರೇಟ್ ವಲಯಕ್ಕೆ ಸರ್ಕಾರವನ್ನು ಅಡಿಯಾಳಾಗಿಸುವುದಕ್ಕೆ ಒಂದು ನೆಪವೇನೋ ಎಂಬಂತಿದೆ.
ಕಾರ್ಪೋರೇಟ್ ಕುಳಗಳ ಪಕ್ಷಾಂತರ
ನಾವು ರಾಜಕಾರಣಿಗಳ ಪಕ್ಷಾಂತರದ ಬಗ್ಗೆ ಬಹಳ ಬಹಳ ಕೇಳಿದ್ದೇವೆ. ಆದರೆ ಈ ಕಾರ್ಪೋರೇಟ್ ಕುಳಗಳ ಪಕ್ಷಾಂತರದ ಬಗ್ಗೆ ಎಲ್ಲಿಯೂ ವರದಿಯಾಗುವುದೇ ಇಲ್ಲ.ಅವರು ದೆಹಲಿಯಲ್ಲಿನ ವಿವಿಧ ರಾಜಕೀಯ ಬಿಕ್ಕಟ್ಟುಗಳ ಸಂದರ್ಭಗಳಲ್ಲಿ ಇದ್ದ ಸರ್ಕಾರವನ್ನು ಉಳಿಸಿಕೊಳ್ಳಲು ಅಥವಾ ಬೀಳಿಸಲು ಹರಿಸುವ ಹಣದ ಹೊಳೆಯ ಬಗ್ಗೆ ವರದಿಯಾಗುವುದೇ ಇಲ್ಲ. ವಿಪಿ ಸಿಂಗ್ ಸರ್ಕಾರ ಬೀಳುವ ಸಂದರ್ಭದಲ್ಲಿ , 1996 ರಲ್ಲಿ ಬಿಜೆಪಿ ಸರ್ಕಾರ ರಚಿತವಾಗಿ ಹದಿಮೂರು ದಿನಗಳಿಗೇ ಬಿದ್ದ ಸಂದರ್ಭದಲ್ಲಿ, ದೇವೇಗೌಡರ ಸರ್ಕಾರ, ಗುಜ್ರಾಲ೵ ಸರ್ಕಾರ, 1998ರಲ್ಲಿ ವಾಜಪೇಯಿ ಸರ್ಕಾರ, ಪತನವಾದ ಸಂದರ್ಭದಲ್ಲಿ, ನರಸಿಂಹರಾಯರ ಸರ್ಕಾರ, ತೀರಾ ಇತ್ತೀಚೆಗೆ ಅಣು ಒಪ್ಪಂದದ ಸಮಯದಲ್ಲಿ ಮನಮೋಹನ ಸಿಂಗರ ಸರ್ಕಾರ ಻ವಿಶ್ವಾಸ ಮತ ಗಳಿಸುವುದು ಸಂಶಯವೆಂದ ಸಂದರ್ಭದಲ್ಲಿ ದೆಹಲಿಯಲ್ಲಿ ಕುಣಿದಾಡಿದ ಹಣದ ಥೈಲಿಗಳು ಯಾರವು ಎಂಬುದು ಜನತೆಗೆ ಗೊತ್ತಾಗುವ ಅವಕಾಶವೇ ಇಲ್ಲ. ಹಾಗೆಯೇ ಮಂತ್ರಿಮಂಡಲಗಳು ಸಮ್ಮಿಶ್ರ ಸರ್ಕಾರಗಳು ರಚನೆಯಾಗುವ ಸಂದರ್ಭಗಳು, ಕೂಡ.
ಇನ್ನು ಪ್ರಸ್ತುತ ಸಂದರ್ಭಕ್ಕೆ ಸಂಬಂಧಿಸಿದಂತೆ 2004ರಿಂದಲೂ ಜಾಗತೀಕರಣ , ಖಾಸಗೀಕರಣದ ಮನಮೋಹನ ಸಿಂಗರು ಹಾಗೂ ಕಾಂಗ್ರೆಸ್ ಸುತ್ತಾ ಗಿರಕಿ ಹೊಡೆಯುತ್ತಿದ್ದ ಸೋನಿಯಾ- ಮನಮೋಹನ ಸಿಂಗರ ಜೋಡಿ ದರ್ಬಾರಿನಲ್ಲಿ ನೈಸರ್ಗಿಕ ಸಂಪತ್ತಿನ ಸೂರೆಯ ಹಾಗೂ ಬಜೆಟ್ ನ ಮೂಲಕ ಹತ್ತಾರು ಲಕ್ಷ ಕೋಟಿಗಳ ಪಂಚ ಭಕ್ಷ್ಯ ಪರಮಾನ್ನವನ್ನು ದಿನದಿನವೂ ಪಡೆಯುತ್ತಿದ್ದ ಈ ಕಾರ್ಪೋರೇಟ್ ಕುಳಗಳು ಇದ್ದಕ್ಕಿದ್ದಂತೆ ಮೋದಿಯ ಸುತ್ತಾ ಸುತ್ತಲಾರಂಬಿಸುದುದೇಕೆ ? ಈ ಪ್ರಶ್ನೆಗೆ ಸರಿಯಾದ ಉತ್ತರ ಕಂಡುಕೊಳ್ಳಲಾರದೇ ಕೇವಲ ಮೋದಿಯ ನರಮೇಧ ಇತ್ಯಾದಿ ಪ್ರಜಾಪ್ರಭುತ್ವ ವಿರೋಧೀ ಕ್ರೌರ್ಯ, ದುಷ್ಟತನಗಳ ಚರಿತ್ರ ಮಾತ್ರ ನಮ್ಮ ವಿಚಾರ ಶಕ್ತಿಯನ್ನು ಮಸಕುಗೊಳಿಸಬಾರದು. ಒಕ್ಕಣ್ಣಿನ ತೀರ್ಮಾನಕ್ಕೆ ಧುಮುಕಬಾರದು ಎಂದು ನನ್ನ ಕಳಕಳಿಯ ಅಭಿಪ್ರಾಯ.
ಮೋದಿಯನ್ನು ಕಣಕ್ಕಿಳಿಸಿದ ಶಕ್ತಿಗಳು- ಕಾರ್ಪೋರೇಟ್ ಕುಳಗಳ ಲೆಕ್ಕಾಚಾರ ಇದೇ ಆಗಿದೆ. ಮೋದಿಯೆಂದ ಕೂಡಲೇ ಆತನ ಇಲ್ಲಿಯವರೆಗಿನ ಇತಿಹಾಸ ಜನರ ಕಣ್ಣ ಮುಂದೆ ಕುಣಿಯಲಾರಂಭಿಸುತ್ತದೆ . ಅದರ ನೆರಳಿನಲ್ಲಿ ವಿಚಾರ ಶಕ್ತಿ ಮಂಕಾಗುತ್ತದೆ ಎಂದೇ ಅವರ ಲೆಕ್ಕಾಚಾರ.
ಒಂದು ಉಹಾ ಮುಂಗಾಣ್ಕೆಯನ್ನು (let us imagine ಎನ್ನುವಂತೆ) ಮಾಡೋಣ. ಮೋದಿಯನ್ನು ಕಣಕ್ಕಿಳಿಸದೇ ಇದ್ದರೆ ಚುನಾವಣೆ ಹೇಗಿರುತ್ತಿತ್ತು ? ಯಾವ ವಿಷಯಗಳು ಪ್ರಾಧಾನ್ಯತೆ ಪಡೆಯುತ್ತಿದ್ದವು, ಫಲಿತಾಂಶದ ಮೇಲೆ ಎನು ಪರಿಣಾಮವಾಗುವ ಸಾಧ್ಯತೆ ಇತ್ತು ? ಇತ್ಯಾದಿ. ಇದನ್ನು ವಿವರವಾಗಿ ರಾಜ್ಯವಾರು ಪರಿಸ್ಥಿತಿಯ ಲೆಕ್ಕಾಚಾರ ಮಾಡುತ್ತಾ ದೇಶದ ಒಟ್ಟಂದದ ಚಿತ್ರವನ್ನು ಪಡೆದುಕೊಳ್ಳವುದು ಸೂಕ್ತವಾದರೂ ಜಾಗದ ಅಭಾವದ ದೃಷ್ಟಿಯಿಂದ ಒಂದು ಸ್ಥೂಲ ಚಿತ್ರಣವನ್ನು ಮಾಡಿಕೊಳ್ಳೋಣ. :
ಸಾಮಾನ್ಯವಾಗಿ ಒಂದು ಚುನಾವಣೆಯಲ್ಲಿ ಹಿಂದಿನ ೈದು ವರ್ಷಗಳ ಕಾಲ ಆಡಳಿತದಲ್ಲಿರುವ ಸರ್ಕಾರದ ನೀತಿಗಳು , ಕೆಲಸಗಳು, ಆಡಳಿತದ ಪರಿ ಗಣನೆಗೆ ಬರಬೇಕು . ಅದರ ಆಧಾರದ ಮೇಲೆ ಬರುವ ಫಲಿತಾಂಶ ಮುಂದಿನ ಐದು ವರ್ಷಗಳ ಕಾಲದ ಆಡಳಿತದ ಸ್ವರೂಪವನ್ನು ನಿರ್ಧರಿಸಬೇಕು ಕರ್ನಾಟಕದ ವಿಧಾನ ಸಭಾ ಚುನಾವಣೆಯಲ್ಲಿ ಸ್ವಲ್ಪವಾದರೂ ಈ ಪ್ರಕ್ರಿಯೆಗೆ ಚಾಲನೆ ದೊರೆಯಿತು.. ಮೋದಿ ಕಣಕ್ಕಿಳಿಯದೇ ಹೋಗಿದ್ದರೆ ಆಗ ಹತ್ತಾರು ಲಕ್ಷ ಕೋಟಿಗಳ ಭ್ರಷ್ಟಾಚಾರದ ಹಗರಣಗಳು, ಬೆಲೆ ಏರಿಕೆ, ರೂಪಾಯಿ ಬೆಲೆ ಕುಸಿತ, ರೈತರ ಆತ್ಮಹತ್ಯೆಗಳು, ಪ್ರಕೃತಿ ವಿಕೋಪಗಳು, ಅದನ್ನು ನಿರ್ವಹಿಸಿದ ರೀತಿ, ನಿರುದ್ಯೋಗ , ಶಿಕ್ಷಣದ ವೆಚ್ಚ ಏರಿಕೆ ಮುಸ್ಲಿಮ್ ಅಲ್ಪ ಸಂಖ್ಯಾತರ ಬಗ್ಗೆ ಸಾಚಾರ್ ವರದಿಯ ಮೇಲೆ ಯಾವ ಕ್ರಮವೂ ತೆಗೆದುಕೊಳ್ಳದೇ ಹೋಗಿದ್ದು ಇತ್ಯಾದಿ ಅವಾಂತರಗಳು ಚರ್ಚೆಗೆ ಬರುತ್ತಿದ್ದವು.
ಈ ಪ್ರತಿಯೊಂದರಲ್ಲಿಯೂ ಕಾರ್ಫೋರೇಟ್ ವಲಯದ ಕೈವಾಡ ಹಾಗೂ ಅವರ ಅಪರಿಮಿತ ದುರ್ಲಾಭ ಅಡಗಿದೆ. ಅವು ಪರೋಕ್ಷವಾಗಿಯಾದರೂ ಚರ್ಚೆಗೆ ಬರುತ್ತಿತ್ತು. ಚುನಾವಣೆಯ ಚರ್ಚೆಯ ಕಾವು ಈ ದಿಶೆಗ ಏರುತ್ತಿತ್ತು.ನಂತರದ ಸರ್ಕಾರ ಇವುಗಳನ್ನು ಸ್ವಲ್ಪವಾದರೂ ಪರಿಗಣನೆಗೆ ತೆಗೆದುಕೊಂಡು ಅನೇಕ ಜನ ಪ್ರಿಯ ಕಾರ್ಯಕ್ರಮಗಳನ್ನು ರೂಪಿಸಿ ಅದಕ್ಕೆ ಹಣವನ್ನು ಸಂಗ್ರಹಿಸಲು ಕಾರ್ಪೋರೇಟ್ ವಲಯಕ್ಕೆ ತೆರಿಗೆ ವಿನಾಯತಿಗಳನ್ನು ರದ್ದು ಮಾಡುವ ಪ್ರಸಂಗ ಬರುತ್ತಿತ್ತು. ಕೆಲ ಭ್ರಷ್ಟಾಚಾರ ಪ್ರಸಂಗಳ ಮೇಲೆ ಕಠಿಣ ಕ್ರಮ, ಕೆಲ ಕಾನೂನುಗಳ ರಚನೆ, ಕಾರ್ಪೋರೆಟ್ ವಲಯದ ಮೇಲೆ ಹೆಚ್ಚು ತನಿಖೆ ಇವು ಕೆಲವಾದರೂ ಸಾಧ್ಯವಾಗುತ್ತಿದ್ದ ಕ್ರಮಗಳು.
ಈ ವಿಷಯಗಳು ಚರ್ಚೆಗೆ ಬಂದರೆ ಆಗ ಇವುಗಳಿಂದ ರೋಸಿಹೋದ ಜನತೆ- ಮುಖ್ಯವಾಗಿ ಬಡಜನತೆ ರೈತರು, ಕೂಲಿಕಾರರು, ದಲಿತರು, ಹಿಂದುಳಿದ ಜಾತಿಗಳ ಜನತೆ, ಅಲ್ಪ ಸಂಖ್ಯಾತರ ಒಳಗಿನ ಕುದಿ ಹೊರಬಂದು 1967ರಲ್ಲಿ 1,977ರಲ್ಲಿ,1980ರಲ್ಲಿ 1989ರಲ್ಲಿ, 1996ರಲ್ಲಿ 2004ರಲ್ಲಿ ಮಾಡಿದಂತೆ ಇರುವ ಸರ್ಕಾರವನ್ನು ಸೋಲಿಸುತ್ತಿತ್ತು. ಒಂದು ಬಾರಿ ಬಿಟ್ಟರೆ ಆಗ ಯಾವ ಸಮಯದಲ್ಲಿಯೂ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಯೇ ಉದ್ಭವಿಸಿರಲಿಲ್ಲಅಂತಹುದೊಂದು ಕಾಂಗ್ರೆಸಿಗೆ ಜಾತ್ಯಾತೀತವಾದ ಪರ್ಯಾಯ ರೂಪುಗೊಳ್ಳುತ್ತದೆಂಬ ಭರವಸೆ ಆಗಲೂ ಬಹಳ ಸಂದರ್ಭಗಳಲ್ಲಿ ಇರಲಿಲ್ಲ. . ಜನ ತಮ್ಮ ಓಟಿನಿಂದಲೇ ಪರ್ಯಾಯವನ್ನು ರೂಪಿಸಿದ್ದರು. ಮತ್ತೆ ಹೀಗಾಗಬಹುದೆಂಬ ಭಯವೇ ಕಾರ್ಪೋರೇಟ್ ಕುಳಗಳನ್ನು ಮೋದಿಯತ್ತ ಓಡುವಂತೆ ಮಾಡಿದ್ದು. ಈ ಐದು ವರ್ಷಗಳ ಆಡಳಿತ ಅಥವಾ ದುರಾಡಳಿತ ಕರ್ನಾಟಕದಲ್ಲಿ ಬಿಜೆಪಿ ಯ ಆಡಳಿತದ ಬಗ್ಗೆ ಹುಟ್ಟಿಸಿದ ಅಸಹ್ಯವನ್ನೇ ಜನರಲ್ಲಿ ಹುಟ್ಟಿಸಿದೆ. ಕಾಂಗ್ರೆಸ್ ಸೋಲುವ ಪ್ರಸಂಗದಲ್ಲಿ ಮುಂದೆ ಬರುವ ಸರ್ಕಾರ ನಮಗೆ ಎಲ್ಲಾ ರೀತಿಯಲ್ಲೂ ಅನುಕೂಲವಾಗಿರಬೇಕು. ಎಂಬ ಲೆಕ್ಕಾಚಾರ ಇದರಲ್ಲಿದೆ ಎಂದು ಯಾರು ಬೇಕಾದರೂ ಊಹಿಸಬಹುದು.
ಆದರೆ ಕಾರ್ಪೋರೇಟ್ ಕುಳಗಳ ಲೆಕ್ಕಾಚಾರ ಅಷ್ಟಕ್ಕೆ ಸೀಮಿತವಾಗಿಲ್ಲ. ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಕೂಡಲೇ ಮೇಲೆ ಹೇಳಿದ ಭ್ರಷ್ಟಾಚಾರ,ಬೆಲೆ ಏರಿಕೆ ತೆರಿಗೆ ವಿನಾಯತಿ ಮುಂತಾದವೆಲ್ಲಾ ಮರೆಯಾಗಿ ಅದರಿಂದ ಕಾರ್ಪೋರೇಟ್ ಕುಳಗಳಿಗೆ ಆಗಬಹುದಾದ ಾಪತ್ತು ಮರೆಯಾಗಿ ಗುಜರಾತ್ ನರಮೇಧ, ಕೋಮುವಾದ, ಗೋಹತ್ಯೆ, ರಾಮ ಜನ್ಮ ಭೂಮಿ, ಜಮ್ಮು ಕಾಶ್ಮೀರ, ಪಾಕ್ ವಿರುದ್ಧ ದ್ವೇಷ ಿಂತಹುವುಗಳೇ ವಿಜೃಂಭಿಸುತ್ತವೆ . ಆಗ ಸರಿಸುಮಾರು ಕಾಂಗ್ರಸ್ ನಿಂದ ದೂರ ಸರಿಯುತ್ತಿರುವ ಎಲ್ಲ ಅಲ್ಪ ಸಂಖ್ಯಾತರು, ಬಹುತೇಕ ದಲಿತರು ಮುಂತಾದ ಬಡವರು, ಜಾತ್ಯಾತೀತ, ಪ್ರಜಾಪ್ರಭುತ್ವ ಮನೋಭಾವದ ಜನರು ಮತ್ತೆ ಕಾಂಗ್ರೆಸ್ ತೆಕ್ಕೆಗೆ ಮರಳುತ್ತಾರೆ. ರಾಜಕೀಯ ಕಾಂಗ್ರೆಸ್ ಇಲ್ಲಾ ಬಿಜೆಪಿ ಎಂದು ಧೃವೀಕರಣಗೊಳ್ಳತ್ತದೆ. ಆಗ ಕಾರ್ಪೋರೇಟ್ ವಲಯ ಿಬ್ಬರಲ್ಲಿ ಯಾರಾದರೂ ಬರಲಿ ನಮ್ಗೆ ಅನುಕೂಲವೇ ಎಂದು ಆರಾಮಾಗಿ ನೈಸರ್ಗಿಕ ಸಂಪತ್ತಿನ, ಬಜೆಟ್ ನ ಲೂಟಿಯನ್ನು, ಬೆಲೆ ಏರಿಕೆ ಖಾಸಗೀಕರಣದ ಮೂಲಕ ಜನರ ಲೂಟಿಯನ್ನು ಮುಂದುವರೆಸಬಹುದು ಎಂಬುದು ಕಾರ್ಪೋರೇಟ್ ಧೂರ್ತರ ಲೆಕ್ಕಾಚಾರ.
ಅನಂತಮೂರ್ತಿಯವರು ಹಾಗೂ ಹಾಗೆ ಯೋಚಿಸುತ್ತಿರುವ ಅನೇಕ ಸಾಹಿತಿ ಕಲಾವಿದರು ಕಾರ್ಪೋರೇಟ್ ಧೂರ್ತರು ತೋಡಿದ ಖೆಡ್ಡಾಕ್ಕೆ ಬೀಳಬೇಕೆ ? ನೈಸರ್ಗಿಕ ಸಂಪತ್ತಿನ ಅಪಾರ ಲೂಟಿ,ತೆರಿಗೆ ಲೂಟಿ, ಪರಿಸರ ನಾಶ, ಪ್ರಕೃತಿ ವಿಕೋಪಗಳ ನಿರ್ವಹಣೆ, ರೈತರ ಆತ್ಮಹತ್ಯೆ ನಿರುದ್ಯೋಗ, ಇತ್ಯಾದಿಗಳನ್ನು ಕೇವಲ ಪಿಕ್ ಪಾಕೆಟ್ ಎಂದು ಹಗುರವಾಗಿ ಕಂಡರೆ ಲಕ್ಷಾಂತರ ರೈತರ ಆತ್ಮಹತ್ಯೆಯಿಂದ ನರಳುತ್ತಿರುವ ಕುಟುಂಬಗಳ ಕಷ್ಟ ಬಗೆಹರಿದೀತೇ ? ಹಾಗೆಂದ ಮಾತ್ರಕ್ಕೆ ಕೆಲ ಪ್ರಗತಿಪರರೂ ಹೇಳುತ್ತಿರುವಂತೆ ಮೋದಿ ಬರಲಿ ಬಿಡಿ , ಪ್ರಜಾಪ್ರಭತ್ವದಲ್ಲಿ ಅದಕ್ಕೂ ಅವಕಾಶವಿರಬೇಕಲ್ಲ ಎಂಬ ವಿರುದ್ಧ ದಿಕ್ಕಿನ ಹಗುರವಾಗಿ ಕಾಣುವ ಪ್ರವೃತ್ತಿಯನ್ನು ಸೂಚಿಸುತ್ತಿಲ್ಲ. ಮೋದಿಯ ಅಧೀಕಾರವೇಂದರೆ, ಆರೆಸ್ಸೆಸ್ ಅಧಿಕಾರದ ಅಪಾಯದ ತೀವ್ರತೆಯ ಬಗ್ಗೆ ಅನಂತ ಮೂರ್ತಿಯವರು ಹೇಳಿದ್ದನ್ನು ಪೂರ್ಣವಾಗಿ ಒಪ್ಪಿಕೊಳ್ಳತ್ತಲೇ ಕಾಂಗ್ರೆಸ್ ನ ಆಡಳಿತ ಜನರಿಗೆ ತಂದೊಡ್ಡಿದ ಸಂಕಷ್ಟಗಳ ಬಗ್ಗೆ ಹಗುರ ಭಾವನೆ ಜನತೆಯನ್ನೇ ಹಗುರವಾಗಿ ಕಂಡಂತೆ ಎಂಬುದನ್ನು ಅವರೆಲ್ಲರೂ ಮನಗಾಣ ಬೇಕು ಎಂದು ನನ್ನ ವಿನಮ್ರ ಮನವಿ. ಜನರ ಸಂಕಷ್ಟಗಳನ್ನು ಕೋಮುವಾದಷ್ಟೇ ತೀವ್ರವಾಗಿ ಚರ್ಚೆಗೆ ತರಬೇಕು.
ಕಾಂಗ್ರೆಸ್ ಗೆ ಬದಲಾಗಿ ಮೋದಿ, ಬಿಜೆಪಿ ಎನ್ನುವುದು ಎಷ್ಟು ಜನಹಿತಕ್ಕೆ ದೇಶದ ಹಿತಕ್ಕೆ ವಿರೋಧವೋ ಆರೆಸ್ಸೆಸ್, ಮೋದಿಯ ಻ಪಾಯವನ್ನು ತಪ್ಪಿಸಲು ಕಾಂಗ್ರಸ್ ಪರ್ಯಾಯ ಎಂಬ ಮಾತೂ ಅಷ್ಟೇ ಅಪಾಯಕಾರಿ. ಬಿಜೆಪಿ-ಕಾಂಗ್ರೆಸ್ ರಹಿತವಾದದ್ದು ಎಷ್ಟೇ ಸಮಸ್ಯಾಕರವೆನಿಸಿದರೂ ಅದೇ ಇಂದಿನ ಪರ್ಯಾಯ. ಻ಂತಹುದೊಂದು ರಾಜಕೀಯ ಪರ್ಯಾಯ ವೂ ಕೂಡ ಿಂದು ದಕ್ಷಿಣ ಻ಮೇರಿಕದಲ್ಲಾಗುತ್ತಿರುವಂತೆ ಜಾಗತೀಕರಣ, ಖಾಸಗೀಕರಣಗಳಿಗೆ ಪರ್ಯಾಯವಾದ ನೀತಿಗಳ ಸಮುಚ್ಚಯವನ್ನೇ ರೂಪಿಸಿ ಜಾರಿಗೆ ತರುವಂತೆ ಒತ್ತಡ ಹಾಕಬೇಕಾದದ್ದು ಇಂದಿನ ಸಂದರ್ಭದಲ್ಲಿ ಅವಶ್ಯ. ಈ ಬಗ್ಗೆ ಎಲ್ಲರೂ ಆಳ ವಾಗಿ ಯೋಚಿಸತೊಡಗಬೇಕು. ಕಾರ್ಪೋರೇಟ್ ದೊರೆಗಳು ತೋಡಿದ ಖೆಡ್ಡಾಕ್ಕೆ ಬೀಳಬಾರದು ಎಂದು ನನ್ನ ಮನವಿ.
 
 

‍ಲೇಖಕರು avadhi

19 September, 2013

14 Comments

  1. ಕೃಷ್ಣೇಗೌಡ ಟಿ.ಎಲ್.

    ಜಿ.ಎನ್.ನಾಗರಾಜ್ರವರ ಅಭಿಪ್ರಾಯ ಶೇ.೧೦೦ ರಷ್ಟು ಸರಿಯಾಗಿದೆ.ನರೇಂದ್ರಮೋದಿಯನ್ನು ಬಿಂಬಿಸುವ ಮೂಲಕ ಚುನಾವಣೆಯಲ್ಲಿ ಚರ್ಚೆಗೆ ಬರಬೇಕಾಗಿದ್ದ ಜನರಸಂಕಷ್ಟ,ಅದಕ್ಕೆ ಪರಿಹಾರ, ಪರ್ಯಾಯಗಳನ್ನು ಮರೆಮಾಚಲಾಗುತ್ತಿದೆ.ನರೇಂದ್ರಮೋದಿ ನಮ್ಮ ದೇಶದ ಕಾರ್ಪೋರೇಟ್ ಕುಳಗಳ ಪ್ರಧಾನಿ ಅಭ್ಯರ್ಥಿ, ಮನಮೋಹನ್ಸಿಂಗ್ ಎಂಬ ಮುಖವನ್ನು ಭಾರತೀಯರಿಗೆ ಮೆಚ್ಚಿಸಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ಮೋದಿಯೆಂಬ ಮುಖವನ್ನು ತೋರಿಸುತ್ತಿದ್ದಾರೆ ಎಂಬುದನ್ನು ತಿಳಿಯಬೇಕಾಗಿದೆ.ಕಾರ್ಪೋರೇಟ್ ಕುಳಗಳು ತೋಡಿರುವುದು ಕೇವಲ ಖೆಡ್ಡಾವಲ್ಲ, ಹಿಟ್ಲರನ ಗ್ಯಾಸ್ ಛೇಂಬರ್ ಎನ್ನುವುದನ್ನು ಸಾರಿ, ಸಾರಿ ಹೇಳಬೇಕಾಗಿದೆ.

  2. Neela

    kurudu kaanchanada thaka thai… inda edda dhoolinalli kannu majaagabahudu.. aadaroo ‘namo’ ge virodhisuva abhipraaya bembalisabeku… GN abhipraaya sariyaagide.

  3. ಕೆ. ಮಹಾಂತೇಶ

    ಯು.ಆರ್ ಅನಂತಮೂರ್ತಿ ಯವರು ಎಲ್ಲೋ ಒಂದು ಕಡೆ ಕಾಂಗ್ರೆಸನತ್ತ ಭಾವನಾತ್ಮಕ ನಂಟು ಬೆಳೆಸಿಕೊಂಡು ಬಿಟ್ಟಿದ್ದಾರೆ. ಇವತ್ತಿನ ಪರಿಸ್ಥಿತಿ ಅವರಿಗೆ ಹಾಗೆ ಕಾಣಿಸಬಹುದು. ಆದರೆ ಕಾಂಗ್ರೆಸ್ ಗೆ ಈಗ ಬೆಂಬಲಿಸುತ್ತಿರುವ ಅಥವಾ ಯುಪಿಎಯಿಂದ ಬಾರೀ ಲಾಭ ಪಡೆದ ಕಾರ್ಪೋರೇಟ್ಗಲೇ ಮತ್ತಷ್ಡು ಲಾಭಕ್ಕಾಗಿ ಮೋದಿ ಹಿಂದೆ ಬಿದ್ದಿವೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಇದೇ ಬೇಕಿರುವುದು.ಗುಜರಾತ್್ನಲ್ಲಿ ಎನು ಅಭಿವೃದ್ದಿಯಾಗಿದೆ ಎಂಬುದನ್ನು ಸ್ವತಃ ಸುರೇಶ ತೆಂಡುಲ್ಕರ್ ವರದಿಯೇ ಬಯಲು ಮಾಡಿದೆ. ಅಲ್ಲಿ ಆಗಿರುವುದು ಕಾರ್ಪೋರೇಟ್ ಪರವಾದ ಅಭಿವೃದ್ದಿ, ಅದನ್ನೇ ಯುಪಿಎ ಸರಕಾರ ಕಳೆದ 5 ವರ್ಷಗಳಲ್ಲಿ ಮಾಡಿದ್ದು ಇದನ್ನೇ ಹೀಗಾಗಿ ಅಂತಿಮವಾಗಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ನಿಯಂತ್ರಿಸುತ್ತಿರುವುದು ಕಾರ್ಪೋರೇಟ್ ವಲಯವೇ. ಹೀಗಾಗಿ ನಿಜವಾದ ದೇಶಪ್ರಮಿಗಳು ಮಾಡಬೇಕಿರುವುದು ಬದಲಿ ನೀತಿಗಳಿಗಾಗಿ ಹೋರಾಡುತ್ತಿರುವ ರಾಜಕೀಯದ ಹುಡುಕಾಟವನ್ನ, ನಿಜ ಈ ಕ್ಷಣದಲ್ಲಿ ಅದು ಸ್ಪಷ್ಟವಾಗಿಲ್ಲದಿರಬಹುದು ಆದರೆ ಹುಡುಕಾಟ ಮುಂದುವರೆಸಿದರೆ ಅಸಾಧ್ಯವೇನಲ್ಲ. ಅದಕ್ಕೆ ಪಿಡೆಲ್ ಕ್ಯಾಸ್ಟ್ರೋ ಹೇಳುವ ಮಾತು…
    ಮೋಡವಿದೆ ಎಂದ ಮಾತ್ರಕ್ಕೆ ಆಕಾಶದಲ್ಲಿ ಸೂರ್ಯನಿಲ್ಲ ವೆಂದಲ್ಲ..
    ನಾಲ್ಕು ಹನಿ ಉದುರಿ ಮೋಡ ಸರಿದಾಗ ಪ್ರತಿಯೊಬ್ಬನಿಗೂ ಒಬ್ಬ ಸೂರ್ಯನಿದ್ದಾನೆ.

  4. Sharanappa Bachalapur

    ಜಿನ್ ಎನ್ ನಾಗರಾಜ್ ರವರ ಅಭಿಪ್ರಾಯವಾಗಿದೆ. ಇತ್ತೀಚಿನ ದಿನಗಳಲ್ಲಿ ಹಿಂದೂವಾದ ಕಟ್ಟರ್ ವಾದಿಗಳು ಮೋದಿ ಜಪ ಮಾಡುತ್ತಿದ್ದಾರೆ, ಮೋದಿಯನ್ನು ದೇವರು ಎಂಬಂತೆ ರೂಪಿಸುತ್ತಿದ್ದಾರೆ. ಅದಕ್ಕೆ ಕೆಲವು ಪತ್ರಿಕೆಗಳೂ ತಾಳ ಹಾಕುತ್ತಿವೆ. ಹಾಗಂತ ಅನಂತಮೂರ್ತಿ ಅಂಥವರು ಮೋದಿ ಅಧಿಕಾರಕ್ಕೆ ಬಂದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದು ಸರಿ ಅಲ್ಲ. ಯಾಕಂದರೆ ಈ ದೇಶ ಮೋದಿಯದು ಅಲ್ಲ. ಎಲ್ಲರದು..ಅದಕ್ಕಾಗಿ ಅನಂತಮೂರ್ತಿಯಂಥವರು ಇರಬೇಕು ಇದ್ದು ಕೋಮುವಾದ, ಹತ್ಯಾಕಾಂಡಗಳನ್ನು ನಿಲ್ಲಿಸುವಂತಹ ಕೆಲಸ ಮಾಡಬೇಕು.

  5. ವೆಂಕಟೇಶ್ ಏಚ್ ಆರ್ ಗೌಡ

    ನಾಗರಾಜ್ ಅವರ ಅಭಿಪ್ರಾಯ ತಪ್ಪು. ಈಗ ಕಾಂಗ್ರೆಸ್ ಸರಕಾರವನ್ನು ನಿಯಂತ್ರಿಸುತ್ತಿರುವುದೂ ಕಾರ್ಪೊರೇಟ್ ಕುಳಗಳೇ. ಅವರು ಮೋದಿ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿ (ಊಹಿಸಿಕೊಂಡು) ಬರೆದಿದ್ದಾರೆ. ಮೋದಿಯನ್ನು ಕೋಮುವಾದಿ ಅನ್ನೋವಾಗ ನಿಮಗೆ ಕಾಂಗ್ರೆಸ್ ಸರಕಾರದ ಸಿಖ್ ನರಮೇಧ ಯಾಕೆ ನೆನಪಾಗೊಲ್ಲ. ಇನ್ನು ಅನಂತಮೂರ್ತಿಗಳ ಬಗ್ಗೆ ಹೇಳಬೇಕಂದ್ರೆ ಅವರು ಒಂದು ರೀತಿಯ ಸೋಗಲಾಡಿ ಸಾಹಿತಿ.ಅವರು ಅಧಿಕಾರದಲ್ಲಿ ಯಾವ ಸರ್ಕಾರ ಇರುತ್ತೋ ಅವರ ಹಿಂದೆ. ಬಹುಶಃ ಮೋದಿ ಪ್ರಧಾನಿ ಆದರೆ ಅನಂತಮೂರ್ತಿಗಳು ಮೋದಿ ಜೊತೆ ವೇದಿಕೆ ಹಂಚಿಕೊಂಡು ಅವರ ಕೈಲೇ ಸನ್ಮಾನ ಕೂಡ ಮಾಡಿಸಿಕೊಳ್ಳುತ್ತಾರೆ.

  6. yash

    chinthanarha ,vicharapurna lekhana.

  7. tumkurnaveed

    raajakaranavendare adhikaarada chukkani hidiyuva race. maargakkintha guri mukhya emba neethiyannu maigoodisikondiruva raajakaranigalinda desha uliyuvudu kashtasaadhya. Paryaayada yaavude pryathnagalu illavagiruvudarinda bandaddannu anubhavisalu maanasikavaagi siddharaagabekide matthu hosa vyavastheyondara huttigaagi nireeksheyallirabekide.

  8. narayanaswamy kempaiah

    Myaga ella appayyanoru chennage avravra mansannna bichchi mathadavre. e corporate geeroporatenorella yavaagloo irore. navu nam nam areadaga iro sariyada rajakarnigalanna jati maka nodade aarsi tandre olledu. Aa foriegndaga RECALL antha adalla. saryagi kelsa madade iro shasakaranna hindakke karso hange mado kaanoonu madbeku. Aavaga ivella sari hogtada. namaskaraglu.

  9. Raj

    This analysis is full of very outdated ideas, this kind of thinking was appropriate for 60s and definitely not now, when capitalism was portrayed as evil!
    Its a pity the author is stuck in ice age.
    Look at the words he uses, corporate valaya, ಸಂಘ ಪರಿವಾರದ ಭಕ್ತರು, ಮೋದಿ ಭಕ್ತರು, ಫ್ಯಾಸಿಸ್ಟ್ ಅಸಹನೆ, ಪ್ರಜಾಪ್ರಭುತ್ವೀಯ, ಸೆಕ್ಯುಲರ್ (ಜಾತ್ಯಾತೀತ) ಭಾರತದ ಬಗ್ಗೆ ದಿನನಿತ್ಯ ದನಿಯೆತ್ತುತ್ತಿರುವ ಪ್ರಗತಿಪರ ಸಾಹಿತಿ- ಕಲಾವಿದ, etc. These just show how outdated and silly his thoughts are.
    These were cold-war era ideas!
    First of all, the corporate lobbies always exist, they always lobby for their gains, there are no secrets there, and they will see how they can benefit in any regime, no problems or crime there, their goal is to make money for their investors, which is what fuels the economy.
    But if they are backing Modi now they see in him a leader who can propel India forward instead of doing same old, same old outdated governance from Congress.
    Look at what UPA is prescribing for India, free food, free money even when people don’t work, free that, free this! Are they trying to make all of India a beggars’ colony? Instead of enabling people to get what they want, all they say “Just do nothing, we will provide things for free”, who will fund these foolish schemes?
    Remember the saying, teach someone how to fish and don’t just give him one.

  10. ಗುರುಶಾಂತ್ ಎಸ್.ವೈ

    ನಾಗರಾಜ್ ರವರ ಈ ಲೇಖನ ಸಕಾಲಿಕ, ಸೂಕ್ತ. ಸದಾ ಹೇಗಾದರೂ ಅನುದಿನವೂ ಮೋದಿಯೇ ಕೇಂದ್ರವಾಗಿರುವಂತೆ, ಆತನ ಸುತ್ತಲೇ ಎಲ್ಲರೂ ಗಿರಕಿ ಹೊಡೆಯುವಂತೆ ಮಾಡುವ ಕುತಂತ್ರಗಳನ್ನು ಕೆಲ ಮಾಧ್ಯಮಗಳು ಮಾಡುತ್ತವೆ. ಅದಕ್ಕೆ ಯಾರೂ ಬಲಿ ಬೀಳಬಾರದು. ನಮ್ಮ ದೇಶ ಭಾರತ, ಸಂಘಪರಿವಾರ ಭ್ರಮಿಸುವಂತೆ ಅಮೇರಿಕ ಅಲ್ಲ. ಅವರು ಭಾರತದಲ್ಲಿ ಬದುಕಿದ್ದರೂ ಅಮೇರಿಕಾವೇ ಅವರಿಗೆ ಆದರ್ಶ. ಹಿಟ್ಲರನೇ ಗುರು. ನಮಗೆ ನಮ್ಮದೇ ಜನಪ್ರಾತಿನಿದ್ಯದ ಸಂವಿಧಾನವಿದೆ. ಬಹುಪಕ್ಷಗಳ ವ್ಯವಸ್ತೆ ನಮ್ಮದು. ಪ್ರಧಾನಿ ಅಭ್ಯರ್ಥಿ ಎಂಬೋದೇ ಭಾರತದಲ್ಲಿ ಬೋಗಸ್ ಕಲ್ಪನೆ.

  11. Umesh

    “ಆರೆಸ್ಸೆಸ್,ಅದರ ಪರಿವಾರ ಮೋದಿಯನ್ನು ಆಯ್ಕೆ ಮಾಡುವುದು ಸಹಜ. ಮೋದಿಯ ಚಿಂತನೆ ಹಾಗೂ ಕ್ರೌರ್ಯದ, ನರಮೇಧದ ಕೃತ್ಯಗಳಿಗೂ ಸಂಘ ಪರಿವಾರಕ್ಕೂ ಮೇಳವಿದೆ ಎಂಬ ಬಗ್ಗೆ ಯಾರಿಗೂ ಸಂಶಯವಿಲ್ಲ.” This type of thinking is quiet natural to Marxist ideology…but have you already forgotten “Nandigram” of West Bengal, where Marxist Government supported communist thugs perpetrated genocide of poor farmers? Have you forgotten all the human tragedies perpetrated by oppressive communist regimes – Killing fields of Cambodia (pol pot), China (Mao), Russia (Stalin), North Korea etc? Have you forgotten the violence unleashed by Marxists against their opponents in Kerala?

  12. Beedi worker

    Rightly and timely well said by G.N.Nagarju . Modi can not give justice , At the same time how one can belive this con[i] to can . con[i] if fully last it face by involeing lot of public money and serving MNC AND ……….

  13. siddaiah.c

    ಜಿ.ಎನ್.ನಾಗರಾಜ್ ರವರ ಅಭಿಪ್ರಾಯ ಸರಿಯಾಗಿದೆ. ಭಾರತದ ಪ್ರಕೃತಿ ಸಂಪತ್ತು ಮತ್ತು ಸಾರ್ವಜನಿಕ ಸ್ವತ್ತುಗಳನ್ನು ತನ್ನದಾಗಿಸಿಕೊಳ್ಳುವ ಗುರಿ ಸಾದನೆಗೆ ಮೋದಿಯನ್ನು ತನ್ನ ‘ರಾಜಕೀಯ ನಾಯಕ’ನನ್ನಾಗಿ, ಕಾರ್ಪೋರೇಟ್ ಕುಳಗಳು ಆರಿಸಿಕೊಂಡಿವೆ. ಹಿಂದೆ ಕಾಂಗ್ರೆಸ್ ನ ಜನವಿರೋದಿ ನೀತಿಯಿಂದಾಗಿ ಬೇಸತ್ತ ಭಾರತೀಯರು ಪರ್ಯಾಯ ಬಯಸಿ, ಬಿಜೆಪಿ ನೀತೃತ್ವದ ಎನ್ ಡಿ ಎ ಗೆ ಬೆಂಬಲ ನೀಡಿ ಅಧಿಕಾರಕ್ಕೆ ತಂದರು. ಬಿಜೆಪಿ ಯ ಆರ್ಥಿಕ ನೀತಿಗೂ, ಕಾಂಗ್ರೆಸ್ ನ ಆರ್ಥಿಕ ನೀತಿಗೂ ಯಾವುದೇ ವ್ಯತ್ಯಾಸ ವಿಲ್ಲವೆಂಬುದನ್ನು ಎನ್ ಡಿ ಎ ಆಡಳಿತದ ಅವಧಿಯಲ್ಲಿ ಜನತೆಗೆ ಅರಿವಾಯಿತು. ಮತ್ತು ಅದೊಂದು, ದೇಶದಲ್ಲಿ ‘ಹಿಂದುತ್ವ ಅಜೆಂಡಾ’ ವನ್ನು ಜಾರಿಗೆ ತರುವ ಗುರಿಯಿಟ್ಟುಕೊಂಡಿರುವ ಸಂಘಪರಿವಾರದ ರಾಜಕೀಯ ಮುಖವಾಡ ವೆಂಬುದು ಅನೇಕರಿಗೆ ತಿಳಿಯಿತು. ಎನ್ ಡಿ ಎ ಆಡಳಿತದಲ್ಲಿ ಜನಸಾಮಾನ್ಯರ ಬದುಕು ಉತ್ತಮಪಡಿಸುವ ಕಾರ್ಯಕ್ರಮಗಳು ಬರಲಿಲ್ಲ. ಕಾರ್ಪೋರೇಟ್ ಸಂಸ್ಥೆಗಳಿಗೆ ಲೂಟಿಗೆ ಅವಕಾಶ ಮುಂದುವರಿಯಿತು. ಸಾಮ್ರಾಜ್ಯಷಾಹಿಗಳಿಗೆ ಮಣೆಹಾಕುವ ವಿಷಯದಲ್ಲೂ ಕಾಂಗ್ರೆಸ್ ನ ನೀತಿಯನ್ನೇ ಬಿಜೆಪಿ ನೇತೃತ್ವದ ಸರ್ಕಾರ ಅನುಸರಿಸಿತು. ಸಾರ್ವಜನಿಕ ಸಂಸ್ಥೆಗಳ ಶೇರುಗಳನ್ನು ಖಾಸಗಿಯವರಿಗೆ ಮಾರುವ ಕಾಂಗ್ರೆಸ್ ನ ನೀತಿಯನ್ನು ಅದು ತೀವ್ರಗೊಳಿಸುತು. ಇದರಿಂದ ಬೇಸತ್ತ ಜನತೆ, ಮೂರನೇ ಪರ್ಯಾಯಕ್ಕಾಗಿ ಹುಡುಕಾಡಿದರು. ಈ ಎರಡು ಪಕ್ಷಗಳಲ್ಲದೇ ಇತರೆ ಪ್ರಾದೇಶಿಕ ಪಕ್ಷಗಳು ಮತ್ತು ಎಡ ಪಕ್ಷಗಳು ಹಲವು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದ್ದರೂ, ಅವುಗಳನ್ನು ಪರ್ಯಾಯವಾಗಿ ರೂಪಿಸಿ ಜನತೆಯ ಬಳಿ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಕಾರ್ಪೋರೇಟ್ ಕುಳಗಳ ಒಡೆತನದಲ್ಲಿರುವ ಮಾಧ್ಯಮಗಳು, ಮೂರನೇ ಪರ್ಯಾಯ ಬರದಂತೆ ನೋಡಿಕೊಂಡವು. ರಾಷ್ಟ್ರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾರೂ ಅಧಿಕಾರಕ್ಕೆ ಬರಲು ಸಾದ್ಯವಿಲ್ಲವೆಂಬಂತೆ, ಈ ಎರಡು ಪಕ್ಷಗಳನ್ನು ಬಿಟ್ಟು ಬೇರೆ ಅವಕಾಶವಿಲ್ಲವೆಂಬಂತೆ ಪ್ರಚಾರ ಮಾಡತೊಡಗಿದರು. ಎನ್ ಡಿ ಎ ಆಡಳಿತದಿಂದ ಬೇಸತ್ತ ಜನ ಮತ್ತೆ ಕಾಂಗ್ರೆಸ್ ಗೆ ಮತ ನೀಡಿ, ಯುಪಿಎ ಅಧಿಕಾರಕ್ಕೆ ಬರಲು ಕಾರಣವಾಯ್ತು. ಆದಾಗ್ಯೂ, 2009 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇ. 28.55 ರಷ್ಟು ಮಾತ್ರ ಮತ ಗಳಿಸಲು ಸಾದ್ಯವಾಯಿತು. ಈ ಚುನಾವಣೆಯಲ್ಲಿ ಬೆಜೆಪಿ ಕೇವಲ ಶೇ.18.80 ಮತ ಪಡೆಯಿತು. ಈ ಎರಡೂ ರಾಷ್ಟೀಯ ಪಕ್ಷಗಳ ಮತ ಒಟ್ಟು ಸೇರಿಸಿದರೂ ಅದು ಶೇ.47.35 ಮಾತ್ರ. ಅಂದರೆ, ಶೇ.52.65 ರಷ್ಷು ಮತದಾರರು, ಈ ಎರಡೂ ಪಕ್ಷಗಳನ್ನು ತಿರಸ್ಕರಿಸುವ ಮೂಲಕ, ಮೂರನೇ ಪರ್ಯಾಯಕ್ಕಾಗಿ ಅಂಬಲಿಸುತ್ತಿದ್ದಾರೆಂಬುದು ಇದರಿಂದ ಸ್ವಷ್ಟವಾಗುತ್ತದೆ. 2009ರಲ್ಲಿ ಲೋಕಸಭೆಯಲ್ಲಿ ಎಡಪಕ್ಷಗಳ ಸ್ಥಾನ ಗಣನೀಯವಾಗಿ ಕಡಿಮೆಯಾದರೂ (24 ಸ್ಥಾನ) ಅವುಗಳ ಪರವಾಗಿ ಶೇ. 7.45 ರಷ್ಟು ಮತಗಳು ಬಂದಿವೆ.
    ಹೀಗ ಮತ್ತೊಮ್ಮೆ ಲೋಕಸಭಾ ಚುನಾವಣೆ ಎದುರಾಗಿದೆ. ಈ ಬಾರಿ ಕಾಂಗ್ರೆಸ್ ತನ್ನ ಜನವಿರೋದಿ ನೀತಿಗಳಿಂದ ಜನರಿಂದ ದೂರವಾಗತೊಡಗಿದೆ. ಅದು ತನ್ನ ಆರ್ಥಿಕ ನೀತಿಗಳಾದ ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣ (ಎಲ್.ಪಿ.ಜಿ.) ನೀತಿಗಳನ್ನು ಜಾರಿಗೊಳಿಸುವ ತೀವ್ರತೆಯಲ್ಲಿ ನಿರತವಾಗಿ, ಜನಸಾಮಾನ್ಯರ ಬದುಕನ್ನು ಸಂಕಷ್ಟದಲ್ಲಿ ಸಿಲುಕಿಸಿದೆ. ಅತ್ತ ಅವರ ಈ ನೀತಿಗಳಿಂದಾಗಿ, ದೇಶದ ಆರ್ಥಿಕ ಪರಿಸ್ಥಿತಿ ಹೀನಾಯ ಸ್ಥಿತಿಗೆ ತಲುಪಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯತೊಡಗಿದೆ. ಅಗತ್ಯ ವಸ್ತುಗಳ ಬೆಲೆಗಳು ನಾಗಲೋಟದಲ್ಲಿ ಏರಿಕೆಯಾಗುತ್ತಿವೆ. ಇಷ್ಟೆಲ್ಲಾ ಸಂಕಷ್ಟಗಳು ಎದುರಾದರೂ, ಆಳುವ ವರ್ಗ ತನ್ನ ನೀತಿಗಳನ್ನು ಬಿಟ್ಟುಕೊಡಲು ಒಪ್ಪುತ್ತಿಲ್ಲ. ಜನರ ಸಂಕಷ್ಟಗಳ ನಡುವೆಯೂ ಈ ನೀತಿಗಳನ್ನು ಮುಂದುವರಿಕೊಂಡು ಹೋಗುವ ಪ್ರಯತ್ನವನ್ನು ಆಳುವ ವರ್ಗ ಮಾಡುತ್ತಿದೆ. ಬೆಜೆಪಿ, ಎನ್ ಡಿ ಎ ಅಥವಾ ವಾಜಪೇಯಿಯವರ ಹಿಂದಿನ ಆಡಳಿತದ ಸಾದನೆಯನ್ನು ತೋರಿಸಿ ಜನರ ಬೆಂಬಲ ಗಳಿಸಲು, ಅವಕ್ಕೆ ಅಂತಹ ಯಾವುದೇ ಸಾದನೆಗಳಿಲ್ಲ. ಜನರು ಈ ಎರಡೂ ಪಕ್ಷಗಳಿಂದ ದೂರ ಸರಿಯುತ್ತಿದ್ದಾರೆ. ಅದಕ್ಕೆ ಪರ್ಯಾಯವಾಗಿ ಮೋದಿಯವರನ್ನು ಮುಂದೆ ಮಾಡಿ ಪ್ರಚಾರದಲ್ಲಿ ತೊಡಗಿದ್ದಾರೆ. ಮೋದಿಯವರ ‘ಗುಜರಾತ್ ಅಭಿವೃದ್ದಿ’ಯ ಸುಳ್ಳುಗಳನ್ನು ಮಾಧ್ಯಮಗಳಲ್ಲಿ ಅರಿಯಬಿಟ್ಟು, ಜನರನ್ನು ಮರಳುಮಾಡಲು ಹೊರಟಿದ್ದಾರೆ. ಇಲ್ಲಿ ಸಂಘ ಪರಿವಾರ, ತನ್ನ ಎರಡು ಗುರಿ ಸಾದಿಸಲು ಇಂತಹ ಸಮಯಕ್ಕಾಗಿ ಕಾಯುತ್ತಿದೆ. ಒಂದು ಬಲಪಂತೀಯ ವಾದ ಮತ್ತೊಂದು ಕೋಮುವಾದ. ಅದು ತನ್ನ ‘ಹಿಂದೂ ರಾಷ್ಟ’ದ ಗುರಿಯನ್ನು ದೇಶದ ಮೇಲೆ ಹೇರುವ ಅವಕಾಶವನ್ನು ಆಳುವ ವರ್ಗ ಮಾಡಿಕೊಡುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಗತಿಪರ ಶಕ್ತಿಗಳು ಜಾಗೃತರಾಗಬೇಕಾಗಿದೆ. ದೇಶದ ಜನರಿಗೆ ಮೂರನೇ ಪರ್ಯಾಯದ ಬಗ್ಗೆ ಭರವಸೆ ಬರುವಂತೆ ಮಾಡಬೇಕಾಗಿದೆ. ಕಾರ್ಪೋರೇಟ್ ಕುಳಗಳ ದೊಡ್ಡ ದೊಡ್ಡ ಶ್ರೀಮಂತ ಉಧ್ಯಮಿಗಳ ಲೂಟಿಕೋರತನದ ಬಗ್ಗೆ ಜನರನ್ನು ಎಚ್ಚರಿಸಬೇಕಾಗಿದೆ.

  14. m.c.ningappa hutti gold mains

    modiyannu pradanamanthri endu aike madiruvadu e deshada janarenu alla badalagi bjp party jana iegagi adakke e deshada janaru jabdararalla adu bjp pakshada thalebene deshada jana astondu charche madalu athanenu mahathma gandiyalla ondu rastrada edi jansamudayad vimochanegagi horadida nelson mandela abagge charche maduvade sariyaduddalla

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading