ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಣಕು ಗದ್ಯ ರಚನೆಗೆ ಕೊಟ್ಟ ಮಾದರಿ ಕಥೆ

ಗೋದಾವರಿ ನದೀ ತೀರದಲ್ಲಿ ಒಂದು ಆಲದಮರ ಇತ್ತು. ಆ ಮರದಲ್ಲಿ ಗಿಳಿಗಳು ಗೂಡನ್ನು ಕಟ್ಟಿಕೊಂಡು ತಮ್ಮ ಮರಿಗಳೊಡನೆ ಬಹಳ ದಿನಗಳಿಂದ ವಾಸಮಾಡಿಕೊಂಡಿದ್ದವು. ಹೀಗಿರುವಾಗ ಕಾರ್ತೀಕಮಾಸದಲ್ಲಿ ಒಂದು ದಿನ ಬಹಳ ಮಳೆಯು ಬಂದಿತು. ಆಗ ಆ ನದೀ ತೀರದಲ್ಲಿರುವ ಎಲ್ಲ ಕಪಿಗಳೂ ಶೀತವನ್ನು ತಡೆಯಲಾರದೇ ಆ ಮರದ ಬುಡದಲ್ಲಿ ಬಂದವು. ಆಗ ಆ ಮರದಲ್ಲಿನ ಗೂಡಿನಲ್ಲಿರುವ ಮರಿಗಳು ಆ ಕಪಿಗಳನ್ನು ನೋಡಿ ಹೀಗೆಂದವು. “ದೇವರು ನಿಮಗೆ ಕೈಕಾಲುಗಳನ್ನು ಕೊಟ್ಟಿದ್ದಾನೆ. ನೀವು ಮನೆಗಳನ್ನು ಕಟ್ಟಿಕೊಂಡು ಸುಖವಾಗಿ ಇರಬಹುದು. ಏಕೆ ಈ ಮರವನ್ನು ಆಶ್ರಯಿಸಿಕೊಂಡು ನೆನೆಯುತ್ತಿದ್ದೀರಾ? ನಮ್ಮ ಮಾತು ಕೇಳಿ. ಮಳೆ ನಿಂತ ಮೇಲೆ ಮನೆ ಕಟ್ಟಿಕೊಂಡು ಸುಖವಾಗಿರಿ” ಎಂದು ಉಪದೇಶಿದವು.

ಎರಡು ಮಿಲಿಯನ್ ವರ್ಷಗಳ ನಂತರ ಆ ಕಪಿಗಳು ನದೀ ತೀರದ ಮರಗಳನ್ನೆಲ್ಲಾ ನಾಶಮಾಡಿ, ಗಿಣಿ ಮತ್ತು ಇತರ ಪಕ್ಷಿಗಳಿಗೆ ನೆಲೆಯಿಲ್ಲದಂತೆ ಮಾಡಿ ಗೇಟೆಡ್ ಕಮ್ಯೂನಿಟಿ ಕಟ್ಟಿಕೊಂಡು ಸುಖವಾಗಿದ್ದವು.

ನೀತಿ:
ಮೂರ್ಖರಿಗೆ ಮಾಡುವ ಉಪದೇಶ ಅನರ್ಥಕ್ಕೆ ಕಾರಣ.

‍ಲೇಖಕರು avadhi

25 October, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading